ಕಾವ್ಯ ಸಂಗಾತಿ- ವಿದ್ಯಾರ್ಥಿ ವಿಭಾಗ
ಭಾಗ್ಯ ಸಕನಾದಗಿ
“ಹೊಲ ಗದ್ದೆಗಳ ಸೊಬಗು”
ತಂಗಾಳಿ ಬೀಸಿ ಬರಲು..
ಮನವಾಯಿತು ಹಗುರು..
ಹೊಲ ಗದ್ದೆಗಳ ನೋಡಲು..
ಮನ ಕುಣಿಯಿತು ಬಲು ಜೋರು..
ಮರದಡಿಯಲ್ಲಿ ಕುಳಿತು ..
ಸೌಂದರ್ಯ ವರ್ಣಿಸಲು ..
ಮಾತುಗಳೇ ಹೊರಡವು..
ಅನುಭವಿಸಿದವರಿಗೆ ತಿಳಿಯುವುದು..
ಇಲ್ಲಿಯ ಆನಂದವು..
ಹಕ್ಕಿಗಳು ಹಾಡುವವು….
ದನಕರು ಮೆಯುವೇವು..
ಅರಳಿದೆ ಹೂವಿನ ತೋಟವು..
ಅಲ್ಲಲ್ಲಿ ಕಟ್ಟಿದ ಜೇನಿನ ಸಿಹಿಯು..
ಬೆಳೆದು ನಿಂತ ಜೋಳದ ಫಸಲು..
ನಗೆಬೀರಿದ ಮಾವಿನ ಹಣ್ಣುಗಳು ..
ಬಾಯಲ್ಲಿ ನೀರೂರಿಸುವ ಹುಣಸೆ ಚಿಗುರು..
ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು…
ಎನ್ನುವ ಕೊತ್ತಂಬರಿ ಸೊಪ್ಪು..
ನಾನು ಡುಮ್ಮ ಆದರೂ ಎಲ್ಲ ಕಾರ್ಯಕ್ಕೂ..
ನಾನೇ ಬೇಕೇನುವ ಬದನೆಕಾಯಿಯು..
ರುಚಿಯೋಳಗೆ ರುಚಿಯೂ …..
ಮುದ್ದಾದ ಟೊಮೆಟೊಗಳು….
ಎಲ್ಲರಿಗೂ ನೆರಳು ನೀಡುವವು….
ಬೇಸಿಗೆ ಕಾಲದಲ್ಲಿ ಬೇವಿನ ಗಿಡಗಳು…
ಆಹಾ ಎಂಥಾ ಸಂಭ್ರಮವೂ…
ಹೊಲ ಗದ್ದೆಗಳ ಕಾಣಲು….
ನೇಗಿಲು ಹಿಡಿದು ರೈತನು….
ಎಂದು ಬೇಸರಿಸಿಕೊಳ್ಳನು….
ಭೂಮಿ ತಾಯಿ ನಂಬಲು….
ಬೆವರು ಸುರಿಸಿ ದುಡಿಯಲು….
ನೋಡು ಬೆಳೆಯ ಕಳೆಯು….
ಮದ್ಯಾಹ್ನ ಊಟ ವೂ…
ಮಾವಿನ ಮರದಡಿ ಕೂಡಲು ….
ಬಾಡಿಸಿಕೊಳ್ಳಲು ಹಲವಾರು ತಪ್ಪಲುಗಳು..
ಆಹಾ ಇದೆ ನೋಡು ರೈತನ ಔತನದುಟವು..
ಗರೆ ಗರೆ ಕಬ್ಬುಗಳ ಸಾಲುಗಳು….
ಸವಿಯಲು ಎಂಥ ಸಿಹಿಯು….
ಇಡೀ ಲೋಕದೊಳು ಎಲ್ಲಿಯೂ ಕಾಣೆವು..
ಭೂ ಮಾತೆಯ ಸ್ವರ್ಗದ ಮಡಿಲನ್ನು..
———————
ಭಾಗ್ಯ ಸಕನಾದಗಿ
ಎಂಥಾ ಅದ್ಭುತ ಅಭಿವ್ಯಕ್ತಿ ಸುಂದರ ಕವಿತೆ