ಮಾಜಾನ್ ಮಸ್ಕಿ ಕವಿತೆ-= ಮೊದಲ ಮಳೆ

ಕಾವ್ಯ ಸಂಗಾತಿ

ಮಾಜಾನ್ ಮಸ್ಕಿ

ಮೊದಲ ಮಳೆ

ನನ್ನ ಮನೆಯಂಗಳದ ಗಿಡ
ನಲಿದಾಡಿದೆ ಹರುಷದಲ್ಲಿ

ಕುಣಿದಾಡಿದೆ ನಲಿವಿನಲ್ಲಿ
ಮೊದಲ ಮಳೆ ಹನಿಗೆ

ತಂಪಾದ ಗಾಳಿ ಬೀಸಿ
ವಯ್ಯಾರದಲಿ ಬಳುಕಿದೆ

ದಣಿದ ಮನಕ್ಕೆ ಮುದನೀಡಿ
ಭಾವ ದೋಣಿ ತೇಲಿಸಿದೆ

ಶೃಂಗಾರ ಕಾವ್ಯವೊಂದನು
ಎದೆಯಲಿ ಮೂಡಿಸಿದೆ

ಭಾವನೆಗಳ ವಸಂತ ಹಸಿರಾಗಿ
ಕಳೆದ ದಿನಗಳ ನೆನಪಿಸಿದೆ

ಪ್ರತಿ ಹನಿಯನು ಮುತ್ತಾಗಿಸಿ
ಮಾತನು ಮೌನ ಹೂವಾಗಿಸಿದೆ


Leave a Reply

Back To Top