ಅನುವಾದ ಕವಿತೆ
ವಿಧವೆ
ಮಲಯಾಳಂ ಮೂಲ: ನೆಸ್ಸಿ.
ಕನ್ನಡ ಅನುವಾದ:ಐಗೂರು ಮೋಹನ್ ದಾಸ್, ಜಿ.
ಮಳೆ ಸುರಿಯುತ್ತಿದೆ
ಚಿತೆಯ ಬೆಂಕಿಯ ಮೇಲೆ…!
ನಂದಿಸಲು ಸಾಧ್ಯವಾಗದೇ
ಬೆಂಕಿಯು ಎಲ್ಲಾಡೆ
ಹರಡಿ ಬಿಟ್ಟಿದೆ…!
ಹೊತ್ತಿ ಉರಿಯುತ್ತಲೆ ಇದೆ…!
ಇನ್ನೂ ತುಸು ಸಹ
ಮೌನವಾಗದ ‘ಮಳೆ’ಯ ರೀತಿ….
ಅವಳ ನಯನಗಳಲ್ಲಿ
ಕಣ್ಣೀರು ಉಕ್ಕಿ
ಹರಿಯುತ್ತಲೇ ಇದೆ…!
ಸಿಡಿಯುತ್ತಿರುವ ಶಬ್ದ
ಕಿವಿಯಲ್ಲಿ ಮೊಳಗುತ್ತಿದೆ…
ಅದು ಭಸ್ಮವಾಗುತ್ತಿರುವ
ಮೂಳೆಗಳು ಅಲ್ಲ…!
ಆವಳ ‘ಹೃದಯ’ವಾಗಿದೆ..!
ಈ ಕ್ಷಣದಿಂದ
ಅವಳು ಕೇವಲ
ಒಂದು ‘ಹೆಣ್ಣು’ ಮಾತ್ರವಲ್ಲ…!
‘ವಿಧವೆ’ಯಾಗಿ ಬದಲಾಗಿದ್ದಾಳೆ…!!
ಮುಂದಿನ ದಿನಗಳಲ್ಲಿ
ಅವಳ ಬಾಳಿನಲ್ಲಿ
ಸಂಭ್ರಮ – ಸಡಗರಗಳು
ಇಲ್ಲ…!
ಸದಾ ಸಮಯ
ಸುರಿಯುವ ಕಣ್ಣೀರು ಮಾತ್ರ….!!
ಬೆಂಕಿ ಹೊತ್ತಿ ಉರಿದ
ರೀತಿಯಂತೆ ಆಕೆಯ
ಬದುಕು ಸದಾ ಸಹ
ಹೊಗೆಯಾಡುತ್ತಲೇ ಇರುತ್ತದೆ…!!
ಸಮಾಜದ ಕಣ್ಣುಗಳಲ್ಲಿ
ಒಂದು ಕಡೇ ಅನುಕಂಪ…!
ಮತ್ತೊಂದು ಕಡೆ
ಹಲವು ಅಂತೇ – ಕಂತೆಗಳ
ಮುಗಿಯದ ಕಥೆ…!!!