ಕಾವ್ಯ ಸಂಗಾತಿ
ಅನಾಮಿಕ ಕವಿಯ ಕವಿತೆ–ಗೆ
ಗೆ
ನೀನು ಇರಬೇಕಿತ್ತು ಒಮ್ಮೆಯಾದರೂ ಬಂದು ಹೋಗಬೇಕಿತ್ತು
ಈ ಚೆಂದವ ನೋಡಬೇಕಿತ್ತು
ವ್ಯರ್ಥವಾಗಿ ಸುತ್ತುವ ಗಾಣದಂತಹ ಬದುಕು ಕೊನೆಗೆ
ಮಕ್ಕಳ ತಟ್ಟೆಯಲಿ ಬೀಳುವ ತಮ್ಮದೇ ಬಿಂಬ
ಹೊರಗೆ ಕೆಂಡದಂಥ ಉರಿ ಬಿಸಿಲು
ಒಳಗೆ ತಾಳ ಹಾಕುವ ಆತುಮದ ಹೊಟ್ಟೆ
ಹಸಿದ ಬೀದಿಯಲೆಲ್ಲ ಒಪ್ಪ ಓರಣದ ಹಸಿರು ತೋರಣ
ಕಟ್ಟಿ ಮಾಲೆ ಮಾಡಿ ನಗುವ ಜನಗಳ ಜೊತೆಗೆ
ಸೇರಿ ಇಲ್ಲಿಯ ಎಲ್ಲವನು ನೀನೂ ಮರೆತೆ
ಬಿಡು
ನಿಮ್ಮಂತಹವರ ಮತ್ತೆ ಕೂಗಬಾರದು
ಹಸಿದ ಹೊಟ್ಟೆಯಲಿ ಆಗಸಕ್ಕೆ ಕತ್ತೆತ್ತಿದ
ನಮ್ಮಂಥಹವರು!
ಅನಾಮಿಕ