ಕಾವ್ಯ ಸಂಗಾತಿ
ಪ್ರೀತಿಯ ಮಾತು
ಮನ್ಸೂರ್ ಮುಲ್ಕಿ
ನೀನಿಲ್ಲದೆ ಇರುವುದು ಹೇಗೆ
ಬದುಕೆಂದರೆ ನೀನೇ ತಾನೆ
ಪ್ರೀತಿಯು ತ್ಯಾಗದ ಹಾಗೆ
ಕೇಳು ನೀ ಈ ಕ್ಷಣವು ನಿನ್ನದೇ
ಜೊತೆಯಾಗಿ ನಡೆದ ದಿನವು
ಆಗೆಲ್ಲ ಮಾತಿನ ಮಂಟಪವು
ನಗುವಿನಲಿ ಕಳೆದ ಸಮಯ
ನಮ್ಮೊಳಗೆ ಆನಂದಮಯ
ಅರಳಿದ ಹೂ ಬಾಡದೆ ಇರುವುದೇನು
ಮಲ್ಲಿಗೆಯ ಮೊಗ್ಗು ಅರಳದೇ ಇರುವುದೇನು
ಹೂವಂತ ಮನಸು ಇರಲು
ಮನೆಯೆಲ್ಲ ಪರಿಮಳದ ಸೊಗಸು
ನೀನಾಡಿದ ಪ್ರೀತಿಯ ಮಾತು
ಊರೆಲ್ಲ ಹರಡಿದೆ ನೋಡು
ನನ್ನ ನಿನ್ನ ಹೆಸರಿನಲಿ
ಕೋಗಿಲೆಯು ಹಾಡುತಿದೆ ಕೇಳು