ಕಾವ್ಯ ಸಂಗಾತಿ
ಹೃದಯವೇ
ಪರಿಮಳ ಐವರ್ನಾಡು ಸುಳ್ಯ
ಯಾವ ಜನ್ಮದ ಬಂಧವೋ
ನಾನರಿಯೆ
ಎಲ್ಲಾ ಬಂಧವ ಮರೆಸುವ ಅನುಬಂಧ
ನೀನಾಗಿರುವೆ
ಉಸಿರಿಗೆ ಉಸಿರ ತಾಗಿಸಿ ನನ್ನೊಳಗೆ
ಕಲೆತೆ
ನನ್ನುಸಿರಿಗೆ ನಿನ್ನುಸಿರ ಬೆರೆಸಿ ಹೃದದೊಳಗೆ
ಬೆಸೆದೆ
ನನ್ನ ಕವನಕೆ ಪದಗಳ ಮಾಲೆ
ನೀನಾದೆ
ನಿನ್ನ ನೆನಪುಗಳ ಕಾವ್ಯಮಾಲೆ
ನಾನಾದೆ
ನೀನೇ ನನ್ನ ಮುದ್ದು ಮುದ್ದಾದ
ಭಾವನೆ
ನನ್ನಾತ್ಮದಿ ಒಂದಾದ ದಿವ್ಯ
ಕಲ್ಪನೆ
ನಿತ್ಯವೂ ನಿನ್ನದೇ ನೆನಪುಗಳ
ಆರಾಧನೆ
ಪ್ರತಿನಿಮಿಷಕೂ ಪ್ರೀತಿಯ
ಸಂವೇದನೆ
ಏನೇ ಬರಲಿ ನಿನ್ನೊಂದಿಗೆ
ನಾನಿರುವೆ
ಉಸಿರೇ ನಿಲ್ಲಲಿ ನಿನ್ನ ನೆನಪಿನೊಂದಿಗೆ
ಹೋಗುವೆ
ಪರಿಮಳ ಐವರ್ನಾಡು ಸುಳ್ಯ