ಕಾವ್ಯ ಸಂಗಾತಿ
ಗೊರೂರು ಅನಂತರಾಜು
ಕಾವ್ಯ ಕನ್ಯೆ
ನೂರಾಸೆಯ ಕಣ್ಣುಗಳಲ್ಲಿ
ನೂರೆಂಟು ಕನಸುಗಳನ್ನು
ಹೆಣಿದುಕೊಳ್ಳುತ್ತಿರುವವಳು
ನನ್ನ ಕಾವ್ಯ ಕನ್ಯೆ
ಬೀದಿ ಪುಂಡು ಪೋಕರ
ಪೋಲಿ ಪದ ಪುಂಜಗಳಿಗೆ
ನೊಂದು ಕಣ್ಣೀರಿಟ್ಟವಳು
ನನ್ನ ಕಾವ್ಯ ಕನ್ಯೆ
ಹದಿ ಹರೆಯದ ಬಯಕೆಗಳ
ಕ್ಲಬ್ ಬಾರ್ ಗಳಲ್ಲಿ ಕುಡುಕರ
ಕಣ್ಣೋಟಕ್ಕೆ ಸುಟ್ಟ ಕೆಂಡ ಇವಳು
ನನ್ನ ಕಾವ್ಯ ಕನ್ಯೆ
ಜಾತಿ ಧಮ೯ ಸಂಕೋಲೆಯಲ್ಲಿ
ಬಂಧಿಯಾಗಿ ರಂಗ ಪರದೆಯ ಹಿಂದೆ ಮೌನಿಯಾಗಿ ಕುಳಿತಿಹಳು
ನನ್ನ ಕಾವ್ಯ ಕನ್ಯೆ
ಗೊರೂರು ಅನಂತರಾಜು