ಬಾಗೇಪಲ್ಲಿ ಗಜಲ್

ಕಾವ್ಯ ಸಂಗಾತಿ

ಬಾಗೇಪಲ್ಲಿ

ಸ್ವರ ಗಜಲ್
(ಕೊನೆಯಪದ ‘ಎ’ಕಾರ ಸ್ವರ)

ನೀ ನಭದಲಿ ಧ್ರುವ ತಾರೆ (ಎ)
ಸ್ಥಿರವಾಗಿಹೆ ನೇ ಉತ್ತರಕೆ (ಎ)

ಋಷಿ ಮಂಡಲ ಸುತ್ತುತಿದೆ(ಎ)
ಮಧ್ಯೆ ನೀನು ಮಿಣುಗುಟ್ಟೆ (ಎ)

ಕಾರ್ಗತ್ತಲ ರಾತ್ರಿಗಳ ಕತ್ತಲೆ (ಎ)
ಸರಿ ಸಮಯ ನಿನ್ನ ಕಾಣೆ (ಎ)

ದಕ್ಷಿಣವೆಂಬ ಧ್ರುವವೂ ಇರೆ (ಎ)
ಪ್ರಖರ ತಾರೆಯಿಲ್ಲ ನೋಡೆ (ಎ)

ಹಗಲಲೂ ನೀ ನೋಡ ಲಭ್ಯವೆ (ಎ)
ದೂರದರ್ಶಕ ನೋಟ ಪಡೆಯೆ(ಎ)

ನಕ್ಷತ್ರಗಳಲಿ ನಿಂದು ಬಲು ವಿಶೇಷತೆ(ಎ)
ಕೃಷ್ಣಾ ಕರೆವ ನಿನ್ನನು ಪೊಲಾರಿಸೆ (ಎ)

—————————–

ಬಾಗೇಪಲ್ಲಿ

Leave a Reply

Back To Top