ಸುಧಾ ಪಾಟೀಲ ಕವಿತೆ-ಹಸನಾದ ಮನಸು

ಕಾವ್ಯ ಸಂಗಾತಿ

ಸುಧಾ ಪಾಟೀಲ

ಹಸನಾದ ಮನಸು

ಮನದ ಕಸವ ತೆಗೆದು
ಹೃದಯದ ಮೈಲಿಗೆಯ
ಕಿತ್ತೊಗೆದು ತಿಳಿಗೊಳದಿ
ಹಸನಾಯಿತು ಮನಸು

ಸ್ವಚ್ಛ ಭಾವನೆಗಳಂದದಿ
ಹಸಿರು ತೋರಣ ಕಟ್ಟಿ
ದೀಪದಾರತಿ ಬೆಳಗಿ
ಹಸನಾಯಿತು ಮನಸು

ಒಲವಿಂದ ನೀ ಕರೆದಾಗ
ಮುನಿಸು ಮರೆಯಾಗಿ
ನಿನ್ನ ಮಾತಿನ ಮೋಡಿಯಲ್ಲಿ
ಮುಳುಗಿ ಹಸನಾಯಿತು
ಮನಸು

ಬೆಟ್ಟದಷ್ಟು ಆಸೆಯ ತೊರೆದು
ಸಂತೃಪ್ತಿಯ ಬಯಸಿ
ಹಿಡಿ ಹಿಡಿ ಪ್ರೀತಿ ಸಿಕ್ಕಾಗ
ಹಸನಾಯಿತು ಮನಸು

ಬಂಧನದ ಬಾಂಧವ್ಯ ಸಿಕ್ಕು
ಭರವಸೆಯ ಬೆಳಕು ಮೂಡಿ
ಚಿನ್ಮಯನ ಆಸರೆ ಹೊಂದಿ
ಹಸನಾಯಿತು ಮನಸು

ಬಾಳ ದಾರಿಯಲಿ ನೀ
ಸಿಕ್ಕು ತನ್ಮಯತೆಯಿಂದ
ಒಡಗೂಡಿದಾಗ ಹಸನಾಯಿತು
ಮನಸು


ಸುಧಾ ಪಾಟೀಲ

Leave a Reply

Back To Top