ಕಾವ್ಯ ಸಂಗಾತಿ
ಮಾರುತೇಶ್ ಮೆದಿಕಿನಾಳ
ಕಲ್ಲೆಂದು ಕಡೆಗಣಿಸದಿರು
ಲ್ಲು ಕಲ್ಲೆಂದು ಕಡೆಗಣಿಸದಿರು
ಅದರೊಳಗೆ ಅಡಗಿದೆ ದೇವರು
ಕಲ್ಲೊಳಗೆ ಮಣ್ಣು ಖನಿಜದ ಅದಿರು
ಅದರಿಂದ ಮನೆ ಮಂದಿರ ಕಟ್ಟುವರು!
ಕ್ರಿಯೆಗೊಳಗಾಗಿ ಕಲ್ಲು ಛಿದ್ರ ಛಿದ್ರ
ಅದೇ ಪಡೆಯಿತು ಮಣ್ಣಿನ ಆಕಾರ
ಕಲ್ಲೊಳಗಿದೆ ಬೆಳ್ಳಿ ಬಂಗಾರ ವಜ್ರ
ಅನೇಕ ಮೂಲ ವಸ್ತುಗಳ ಆಗರ!
ಕಲ್ಲಿನಲಿ ಕಲೆ ಅರಳಿ ಹೂವಾಯಿತು
ಆಕಾರ ಪಡೆದು ದೇವರಾಯಿತು
ಗತಕಾಲದ ವೈಭವ ವಿಜ್ರಂಭಿಸಿತು
ಇತಿಹಾಸ ಸಾರುವ ಶಿಲಾಶಾಸನವಾಯಿತು!
ಕಲ್ಲಿನಿಂದಲೇ ಕೋಟೆ ಕಟ್ಟಲಾಯಿತು
ಗುಡಿಗೋಪುರ ಶಿಲೆ ಮೂರ್ತಿಯಾಯಿತು
ಕಂಕರ್ ಸಿಮೆಂಟ್ ಕಾಂಕ್ರೆಟ್ ಆಯ್ತು
ಇತಿಹಾಸಕ್ಕೆ ಅದು ಗಟ್ಟಿ ಸಾಕ್ಷಿಯಾಯಿತು!
——-[——————
ಮಾರುತೇಶ್ ಮೆದಿಕಿನಾಳ