ಸುಲೋಚನ ಮಾಲಿಪಾಟೀಲ ಕವಿತೆ-ಇದ್ದು ಬಿಡುಇಲ್ಲದಂತೆ

ಕಾವ್ಯ ಸಂಗಾತಿ

ಸುಲೋಚನ ಮಾಲಿಪಾಟೀಲ

ಇದ್ದು ಬಿಡುಇಲ್ಲದಂತೆ

ಈ ಸಮಾಜದ ಬತ್ತಳಿಕೆಯಲ್ಲಿ
ವಿಭಿನ್ನವಾದ ದೃಷ್ಟಿಕೋನ
ಬಣ್ಣದ ಮಾತುಗಳು ಮಧ್ಯೆ
ಇದ್ದು ಬಿಡು ಇಲ್ಲದಂತೆ
ನಿನ್ನ ಎಚ್ಚರಿಕೆಯಲಿ

ಏನಂತ ಹೇಳಲಿ
ಕಾಣುವ ವಿಚಿತ್ರ
ಹಲವು ಭಂಗಿಗಳ
ಮುಖವಾಡಗಳ ಕಂಡು
ಪ್ರಜ್ಞೆಯದಿಂದಿರು

ಎಲ್ಲಿ ಹೋದವು
ಮೊದಲಿನ ಆ ದಿನಗಳು
ಆತ್ಮೀಯತೆಯ ಛಂದದಲಿ
ವಿಭಿನ್ನ ಸಂಬಧಗಳ
ಸಿಗದ ಮನಗಳು

ಬಲತುಂಬುವುದು ಹೇಗೆಂದು
ಕಷ್ಟದ ಅರಿವು ಕೇಳು
ನಂಬಿಕೆಯೆಂಬ ಶಬ್ದದ
ಬೆಲೆ ಕಳೆದ್ಹೋದ ಮೇಲೆ
ನೀಡುವ ಹೆಜ್ಜೆ ನಡೆಗೆ

ನಿನ್ನಲ್ಲಿ ನಿನ್ನತನವ
ಹುಡುಕುವ ಪರಿಕಂಡು
ಸುಖವಾಗಿರುವ ತನಕ
ಇದ್ದು ಬಿಡು ಇಲ್ಲದಂತೆ
ನಿಶ್ಚಿಂತದಲಿ ಎಲ್ಲ ಮರೆತು

ನಿನ್ನ ಆತ್ಮಸಾಕ್ಷಿಯ ಪಯಣ
ನಿನಗೆ ಬಲತುಂಬುವುದು
ನೀ ಬದುಕಿರುವತನಕ
ಬದಲಾಗದ ಪ್ರಪಂಚದ
ಗೊಡವೆ ಬೇಡಿನ್ನು


ಸುಲೋಚನ ಮಾಲಿಪಾಟೀಲ

Leave a Reply

Back To Top