ಎನ್‌ ಜಯಚಂದ್ರನ್‌ ಕವಿತೆ-ವಿಸಂಗತ

ಕಾವ್ಯ ಸಂಗಾತಿ

ಎನ್‌ ಜಯಚಂದ್ರನ್

ವಿಸಂಗತ

ಗಳ ಗಳ ಅತ್ತಂತೆ, ಕ್ಷಣವೇ ನಕ್ಕಂತೆ
ಕಾಲಮಾನ
ವಿಸಂಗತ
ತೊಯ್ದಾಟದ
ಯಾನ.

ಸರಮಾಲೆ ಕನಸಾಗಿ
ಮುತ್ತಬಹುದು!

ಮೈ ಚೆಲ್ಲಿದರೆ ಸಾಕು
ಮುಗಿ ಬೀಳುತ್ತದೆ ದಿಗಿಲು
ಭಯದ ಭುಗಿಲು.

ನಿನ್ನೆ ಸಂಜೆ ಸೇತುವೆಯ ಬಳಿ ಕಂಡ ಸಣಕಲು ದೇಹದ ಅಜ್ಜಿಯ
ಹಸಿವಿನ
ಕತೆ
ಬರ್ಬರ ಬದುಕಿನ
ಕೂಗು
ಕಾಳಿ ತೀರದಲ್ಲಿ.
ತಾಳೆಯಾಗದು
ಉಸಿರಿನ ಲೆಕ್ಕಾಚಾರ.

ಬೆಳಗಿನ ಕನಸಿನಲ್ಲಿ ತೂರಿ ಬರುತ್ತಾಳೆ.
ನಿಟ್ಟುಸಿರಲ್ಲೂ ಕಾಡುತ್ತಾಳೆ ನೆರಿಗೆಯ ಹಣೆಯಲ್ಲಿ
ಹಂದಾಡುವ ಹಣ್ಣು ಕೂದಲ ಸರಿಸಿ.

ಹೌದು, ಮುಟ್ಟಿ ಮಾಸುವ ಬಯಕೆಗಳು,
ಬೆಂದ
ಕನಸುಗಳೆಲ್ಲ
ಈಗ ಕರಕಲು.
ತಾಳೆಯಾಗದು
ಉಸಿರಿನ ಲೆಕ್ಕಾಚಾರ.
———————

ಎನ್.ಜಯಚಂದ್ರನ್.

2 thoughts on “ಎನ್‌ ಜಯಚಂದ್ರನ್‌ ಕವಿತೆ-ವಿಸಂಗತ

  1. ಕನಸುಗಳು ಕಾಲಚಕ್ರದಡಿ ಕಂಡುಕೊಳ್ಳುವ ವಾಸ್ತವ ಸ್ಥಾನಮಾನದ ಒಂದೊಳ್ಳೆಯ ಅಭಿವ್ಯಕ್ತಿ.

  2. ವಾಸ್ತವವನ್ನು ಕಾವ್ಯ ಮೂಲಕ ಅನುಭವಿಸುವ ಅವಕಾಶ.

Leave a Reply

Back To Top