ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಇಮಾಮ್ ಮದ್ಗಾರ

ಹೆಸರುಕೊಡು

ನನ್ನೆದೆಯ ಉರಿಯನ್ನು
ಆರಿಸುವದು ಹೇಗೆ ?
ಕಣ್ಣೀರು ಬತ್ತಿ ಹೋಗಿವೆ

ಪ್ರೀತಿಯ ದೀಪ
ಬೆಳಗುವದು ಹೇಗೆ ?
ಗಾಳಿಯ ರಭಸ
ಜೋರಾಗಿದೆ

ಮನದ ಕನ್ನಡಿಯ
ಬಿಂಬ ತೋರುವದು ಹೇಗೆ ?
ಆರುಮೆಗೆ ಅನುಮಾನದ
ನೆಳಲು ತಾಗಿದೆ

ನನ್ನಮೇಲೆ
ಕೋಪವಿರಲಿ ಬಿಡು
ನಂಬಿಕೆಯ ಮೇಲೇಕೆ
ದೌರ್ಜನ್ಯ ?

ಬೆಳಗಿನ ಭರವಸೆ
ಮರಣಿಸಿದಾಗ
ಸಾಯುವ ಸಂಜೆಯ
ಯಾತನೆ ಬೆಳಗಿನ
ಜಾವದ ದುಃಖ ವಾಗಿದೆ

ಹೆಸರಿಲ್ಲದ ಸಾಂಗತ್ಯ
ಹಸಿರಾಗುವದು ಹೇಗೆ ?
ಹೆಸರಿಗಾಗಿ
ಮನ ಹಂಬಲಿಸಿದೆ !!


About The Author

Leave a Reply

You cannot copy content of this page

Scroll to Top