ರೇಖಾ ಸುದೇಶ್ ರಾವ್ ಕವಿತೆ-ಪ್ರಾಮಾಣಿಕತೆ

ಕಾವ್ಯ ಸಂಗಾತಿ

ರೇಖಾ ಸುದೇಶ್ ರಾವ್

ಪ್ರಾಮಾಣಿಕತೆ

ಸರಳ ಸುಂದರವಾದ ಬದುಕು
ವ್ಯವಹಾರದಲ್ಲಿ ಅಂಕು ಡೊಂಕು
ಮೋಸದ ಜಾಲದಲ್ಲಿ ನೂಕು
ಅಡ್ಡಹಾದಿ ಹಿಡಿದು ಸಂಪತ್ತು ರಾಶಿ ಹಾಕು

ಐಶ್ವರ್ಯದ ಮತ್ತಿನಲಿ ಬೀಗದೆ ಬಾಗು
ಪ್ರಾಮಾಣಿಕತೆ ಸಜ್ಜನಿಕೆ ತೋರಿ ಮುಂದೆ ಸಾಗು
ತೊಡೆದು ಹಾಕು ನಿನ್ನಲ್ಲಿರುವ ಕೊರಗು
ಸುಂದರ ಬಾಳಿಗೆ ನೀಡು ಮೆರುಗು

ಅಹಂಕಾರ ತೊರೆದು ಬಾಳು ಬೆಳಗು
ತನ್ನಲ್ಲಿರುವ ಕೀಳರಿಮೆಯ ನೀಗು
ದಿಟ್ಟತನದಿ ನಿಷ್ಠೆಯಿಂದ ಕಾರ್ಯದಲ್ಲಿ ತೊಡಗು
ತೊಡೆದು ಹಾಕು ಸಾಮಾಜಿಕ ಪಿಡುಗು-


Leave a Reply

Back To Top