ಕಾವ್ಯ ಸಂಗಾತಿ
ಡಾ.ದಾನಮ್ಮ ಝಳಕಿ
ಉತ್ತರವಿರದ ಪ್ರಶ್ನೆ
ನೀವು ಮಾಡಿದ ಪಾಠ
ಪ್ರಾಮಾಣಿಕತೆಯ ನೋಟ
ನೀತಿ ನಿಯಮ ನಿಷ್ಟೆ
ಏಕಿಲ್ಲ ಜಗದಲಿ
ಉತ್ತರವಿರದ ಪ್ರಶ್ನೆ
ಕಾಡುತಿದೆ ಪ್ರತಿಕ್ಷಣ
ಮಾವಿನಲಿ ರುಚಿ ಇಟ್ಟವರು
ಬೇವಿನಲಿ ಕಹಿ ಇಟ್ಟವರು
ಹುಣಸೆಯಲಿ ಹುಳಿ ಇಟ್ಟವರು
ಯಾರು ಹೇಳಿ ಎಂದು ಕೇಳಿದ
ಉತ್ತರವಿರದ ಪ್ರಶ್ನೆಗೆ
ಹುಡುತಿದೆ ಪ್ರತಿಕ್ಷಣ
ಬೀಜ ಮೊದಲೋ ಗಿಡ ಮೊದಲೋ
ಕೋಳಿ ಮೊದಲೋ ಮೊಟ್ಟೆ ಮೊದಲೋ
ಆಕಾಶದಲಿ ನಕ್ಷತ್ರಗಳೆಷ್ಟು
ಉತ್ತರವಿರದ ಮಗುವಿನ ಪ್ರಶ್ನೆಗಳಿಗೆ
ಹುಡುಕುತಿದೆ ಪ್ರತಿಕ್ಷಣ
ಮಗುವಿನ ಅಂತರಂಗದ ಕುತೂಹಲಗಳು
ಕೆದಕಿ ಹೆಕ್ಕಿದ ಪ್ರಶ್ನೆಗಳು
ವಿಸ್ಮಯದ ಘಟನೆಗಳು
ಉತ್ತರವಿರದ ಪ್ರಶ್ನೆಗಳಿಗೆ
ಹುಡುಕುತಿದೆ ಪ್ರತಿಕ್ಷಣ
ಕಲಿಕೆಯೆಂಬ ಸಾಗರದಲಿ
ಪ್ರತಿಕ್ಷಣ ಅರಿಯುವಾಸೆ
ಪರಿಸರದ ವಿಸ್ಮಯಗಳಿಗೆ
ಕಾರಣಗಳ ಹುಡುಕುವಾಸೆ
ಉತ್ತರವಿರದ ಪ್ರಶ್ನೆಗಳು
ಕಾಡುತಿದೆ ಪ್ರತಿಕ್ಷಣ
ಉತ್ತಮವಾಗಿದೆ…. ಉತ್ತರವಿಲ್ಲದ ಪ್ರಶ್ನಿಗಳ ಹುಡುಕಾಟ.
Thank you Madam
ಪ್ರತಿ ಕ್ಷಣ ಉತ್ತರಕ್ಕಾಗಿ ಕಾಯುತ್ತಿರುವ ನಿಮ್ಮ ಕವನ ಚೆನ್ನಾಗಿದೆ ಮೇಡಂ
Thank you