ಪ್ರಭಾ ಅಶೋಕ ಪಾಟೀಲ- ಅಂತಂರಂಗದ ಅಳಲು

prabha patl

ಕಾವ್ಯ ಸಂಗಾತಿ

ಪ್ರಬಾ ಅಶೋಕ ಪಾಟೀಲ

ಅಂತರಂಗದ ಅಳಲು

 ನೊಂದವರ ಕಣ್ಣೀರು ವರೆಸಬೇಕಿದೆ
 ಅಶಕ್ತರಿಗೆ ಬಲ ತುಂಬಬೇಕಿದೆ
 ಶಾಂತಿ ಸಹನೆಯ ಕಲಿಯಬೇಕಿದೆ
 ನಾನು ಬುದ್ಧನಂತೆ ಶಾಂತನಾಗಬೇಕಿದೆ //

 ಅಂತರಂಗದ ಭಾಷೆ ತಿಳಿಯಬೇಕಿದೆ //
 ಅ ಹಿಂಸಾ  ತತ್ವಗಳ ಸಾರಬೇಕಿದೆ
 ಅರಿವ ಜ್ಯೋತಿಯ  ಪಡೆಯಬೇಕಿದೆ //

ನಾನು ಬುದ್ಧನಂತೆ ಬದ್ಧನಾಗಬೇಕಿದೆ //

 ಮನದ ಶಾಂತಿಯ ಅರಸ ಬೇಕಿದೆ
 ನಿಸರ್ಗದ ನಿಯಮ ತಿಳಿಯಬೇಕಿದೆ //
 ಬದುಕಬಂಡಿಯ ಎಳೆಯಬೇಕಿದೆ //
 ಬುದ್ಧನಂತೆ ಸಮಚಿತ್ತದಿ ಸಾಗಬೇಕಿದೆ  //

 ಸಾಗರದ ಅಷ್ಟು ಆಳವಾಗಿ
 ನದಿಗಳಂತೆ ಪ್ರಶಾಂತವಾಗಿ
 ಆಕಾಶದಷ್ಟು ವಿಶಾಲವಾಗಿ
 ಬದುಕಬೇಕಿದೆ ಅಂತರಂಗದಿ ನಿರಾಳವಾಗಿ//


Leave a Reply

Back To Top