ಕಾವ್ಯ ಸಂಗಾತಿ
ಡಾ ಶಶಿಕಾಂತ ಪಟ್ಟಣ ರಾಮದುರ್ಗ
ಹುಡುಕಬೇಕು
ಹುಡುಕಬೇಕು ಗೆಳತಿ
ಹುಡುಕಬೇಕು
ಬಣವೆಯೊಳಗೆ ಕಳೆದ
ನಿನ್ನ ಸೂಜಿ ದಾರವನ್ನ
ಹೊಲೆಯಬೇಕು ಗೆಳತಿ
ಜೀವ ಜಾಲವನ್ನ
ಹುಡುಕಬೇಕು ಗೆಳತಿ
ಹುಡುಕಬೇಕು
ಕಡಲಿನೊಳಗೆ ಕರಗಿ
ಮುತ್ತಾದ ನಿನ್ನ ಕಣ್ಣೀರು
ಸರ ಮಾಡಿ ಹಾಕಬೇಕು
ಮೇಲೆ ಕುಳಿತ ಗುರುದತ್ತ
ಹುಡುಕಬೇಕು ಗೆಳತಿ
ಹುಡುಕಬೇಕು
ಬಯಲಿನೊಳಗೆ ಬೆರೆತ
ಉರಿಯ ಬೆಳಕಿನ ಧೂಪ
ಮನುಜ ಪಥದಲಿ ಹೆಜ್ಜೆ
ಶಾಂತಿ ಸಮತೆಯ ರೂಪ
ಹುಡುಕಬೇಕು ಗೆಳತಿ
ಹುಡುಕಬೇಕು
ಸಂತೆ ಸಂದಣಿಯೊಳಗ
ಕಳೆದು ಹೋದ ನಿನ್ನ
ಜಡ ಜಗದೊಳಗೆ ಕಳೆದ
ನಿನ್ನ ಮಧುರ ಭಾವ
ಹುಡುಕಬೇಕು ಗೆಳತಿ
Amazing philosophical poem Sir
ಅರ್ಥಪೂರ್ಣ ಕವನ ರಚಿಸಿ ಹೊಸ ಶೈಲಿಯಲ್ಲಿ ತಾತ್ವಿಕ ಸ್ವರೂಪ ಹಾಗೂ ಅನುಭವ ತಮ್ಮ ಕವನದಲ್ಲೀ ಮೂಡಿದೆ ಸರ್
ಅನುಭವಪೂರ್ಣ ಮತ್ತು ಎಲ್ಲರೂ ಅರ್ಥೈಸಿಕೊಳ್ಳಬೇಕಾದ ಕವನ… ಸರ್
ಕನ್ನಡ ಸಾಹಿತ್ಯ ದ ಹೊಸ ಶೈಲಿಯ ಕವನ ಸರ್