ಜೀವನ ಸಂಗಾತಿ
ನನ್ನ ಕಕ್ಕಿಯ ಆದರ್ಶಮಯ ಬದುಕು
ಲಲಿತಾ ಪ್ರಭು ಅಂಗಡಿ
ಬದುಕಿದರೆ ಹೇಗೆ ಬದುಕಿ ಬಾಳಬೇಕು ಎನ್ನುವುದನು ನಿಮ್ಮಿಂದ ಕಲಿಯಬೇಕು ನೋಡ ಕಕ್ಕಿ, ಅರೆ ಇದೇನು ಯಾರು ಕಕ್ಕಿ ಏನ್ ಬದುಕು ಏನ್ ಕತಿ ಅಂತೀರಾ, ನಮ್ಬದುಕೆ ಒಂದು ಕತೆ ,ಕವನ,ಸರಳವಾಗಿ, ಜೀವನದಲ್ಲಿ ಬರುವ ಎಡರು ತೊಡರುಗಳನ್ನು ಮೆಟ್ಟಿ ನಡೆದರೆ ಒಳ್ಳೆಯ ಕವನದಂತೆ ಆಗಬಹುದು ಬದುಕು, ಸಮಸ್ಯೆಗಳನ್ನು ಎದುರು ಹಾಕಿಕೊಂಡರೆ ಕತೆಯಾಗುತೆ ಬದುಕು,
ಪೀಠಿಕೆ ಸಾಕು ನೇರವಾಗಿ ನಮ್ಮ ಕಕ್ಕಿ ವಿಷಯಕ್ಕೆ ಬರ್ತೀನಿ,ಅಂದ್ರೆ ನಮ್ಮ ಕಕ್ಕ ಕಿಂಗ್ ಆಫ್ ಗುಗ್ಗಳಶೆಟ್ಟಿ , ನಮ್ಮಪ್ಪನ ತಮ್ಮ ಪಂಪಣ್ಣ ಗುಗ್ಗಳಶೆಟ್ಟಿ ಈಗ ಇಲ್ಲ ಅವರು, ಅವರ ಹೆಂಡ್ತಿ ದ್ರಾಕ್ಷಾಯಣಮ್ಮ ಪಂಪಣ್ಣ ಗುಗ್ಗಳಶೆಟ್ಟಿ,ಇವರು ಎಂಬತ್ನಾಲ್ಕರ ತುಂಬು ಜೀವನದ ಬದುಕುನು ಕಟ್ಟಿದ ರೀತಿ ಬದುಕಿದರೆ ಹೇಗೆ ಬದುಕಬೇಕು ಎಂಬುದನ್ನು ಅವರಿಂದ ಕಲಿಯಬೇಕು,ನಮ್ಮ ಕಕ್ಕಿ ಯವರ ಶ್ರಮದ ಬದುಕು ನಮ್ಮ ಕಡೆ ಕತ್ತಿದುಡದಂಗ ದುಡುದ್ರು ಅಂತಾರ ಶ್ರಮದ ಬದುಕಿಗೆ,ಅವರ ನಿಸ್ವಾರ್ಥದ ಬದುಕು ಕೂಡಿ ಬಾಳುವ ಒಗ್ಗಟ್ಟಿನ ಬದುಕು ಅಕ್ಕತಂಗಿಯರ (ನೆಗಣ್ಣಿಯವರ)ಒಡನಾಟ ಅನ್ಯೋನ್ಯತೆ, ಆತ್ಮೀಯತೆಯ ಪ್ರೀತಿಯ ಸಹಕಾರದ ಅವರ ಬದುಕು ಇಂದಿನ ಪೀಳಿಗೆಗೆ ಆಶ್ಚರ್ಯವಾದರೂ ಸತ್ಯ ನಾನಂತೂ ಕಣ್ಣಾರೆ ನೋಡಿದ ನಮ್ಮ ಕೂಡುಕುಟುಂಬದ ಚಿತ್ರ ಕಣ್ಮುಂದೆ ಸುಳಿತಾಇದೆ,
ಅವರೇನು ಓದು ಬರಹ ಕಲಿತಿರಲಿಲ್ಲ,ಆದರೂ ಓದು ಬರಹ ಕಲಿತ ಶಿಸ್ತಿನ ಜೀವನ ಬದುಕಿನ ಪಾಠದಲ್ಲಿ, ಆದರ್ಶ ಮಯವಾದ ಚೊಕ್ಕಟ ಬದುಕು,ಮನೆ ಕೆಲಸ ಹೊಲದಲ್ಲಿಯ ಕೆಲಸದಲ್ಲಿ ಶ್ರದ್ಧಾ ಭಕ್ತಿಯಿಂದ ಯಿಂದ ಕಾಯಕವೇ ಕೈಲಾಸದಂತೆ ಬದುಕಿನ ಮೌಲ್ಯವನ್ನು,ಸಂಸಾರದ ಸಾರವನು,ಸಂಸ್ಕಾರದ ಸೊಬಗನು ಎತ್ತಿ ಹಿಡಿದವರು ನೀವು, ಅಕ್ಕತಂಗಿಯರೆಲ್ಲ ಮೈ ಮುರಿದು ದುಡಿದು ಅತ್ತೆ ಮಾವರ ಕೈಯಲ್ಲಿ ಸೈ ಎನಿಸಿಕೊಂಡವರು.
ಗಂಡಂದಿರ ವ್ಯವಹಾರದಲ್ಲಿ ಮಧ್ಯೆ ಹೋಗದೆ, ಅಣ್ಣತಮ್ಮಂದಿರು ಜಗಳ ಮಾಡ್ತಿದ್ರು ಮತ್ತೆ ಕೂಡುತಿದ್ರು ಆದರೆ ವ್ಯವಹಾರದ ವಿಷಯದಲ್ಲಿ
ಮದ್ಯೆ ಹೋಗದೆ ಅವರ ಕಿವಿ ತುಂಬಿ ಜಗಳ ಹಚ್ಚದೆ ನಿಮ್ಮಷ್ಟಕ್ಕೆ ನೀವು ಕೆಲಸ ಮಾಡಿ ಹಿರಿಯರ ಮಾತಿಗೆ ಬೆಲೆ ಕೊಡುವ ಗೌರವ ಕೊಡುವ ನಿಮ್ಮ ಆದರ್ಶ ಗುಣಗಳು ಕೂಡಿ ಬಾಳಿ ಗುಗ್ಗಳಶೆಟ್ರ ಕುಟುಂಬದ ಆದರ್ಶ ಸೊಸೆಯಾಗಿ ಆದರ್ಶ ಪತ್ನಿಯಾಗಿ ನಮಗೊಂದು ಮಾರ್ಗದರ್ಶನ ಕಕ್ಕಿ ನೀವು,ನಿಮ್ಮ ನಡೆ ನುಡಿ ನೇರ ಮಾತು,ನಿಮ್ಮ ಕೆಲಸ ಹೊಲದಲ್ಲಿಯಾಗಲಿ ಮನೆ ಕೆಲಸವಾಗಲಿ ಅಚ್ಚುಕಟ್ಟುತನ, ಆಸಕ್ತಿ, ಶಿಸ್ತಿನಿಂದ ಹೌದಪ ಗುಗ್ಗಳಶೆಟ್ರ ಶರಣಪ್ಪ ಹಂಪಮ್ಮನ ಸೊಸೆಯಂದ್ರು ಅಂದ್ರ ಹೌದ್ ನೋಡಪ ಇದ್ದರೆ ಇರಬೇಕು ಇಂತ ಸೊಸ್ತರು ಅನ್ನೋ ಹಾಗೆ ನೀವು ಐದು ಜನ ಅಕ್ಕತಂಗಿಯರು ಬಾಳ್ವೆ ಮಾಡಿ ತೋರಿಸಿದ್ರಿ,
ಅದರಲ್ಲೂ ದ್ರಾಕ್ಷಮ್ಮಕಕ್ಕಿ ಮತ್ತು ನಮ್ಮವ್ವ ರುದ್ರಮ್ಮ ಇವರಿಬ್ರು ಕೆಲಸ ಮಾಡಿದ್ರ ಹೊಲದಾಗ ಗಂಡಾಳ ಮಾಡಿದಂಗ ಕೆಲಸ ಮಾಡ್ತಿದ್ರು ಅಂತಹ ಗಟ್ಟಿತನ ,ಶೂರತನ, ಕೆಲಸದಲ್ಲಿ ನಿರತರಾಗಿ ಅಚ್ಚುಕಟ್ಟುತನ ಸಮಯಪ್ರಜ್ಞೆ ಶಿಸ್ತು ಕಾಯಕದಲಿ ಕೈಲಾಸ ಕಂಡವರು, ನಿಮ್ಮ ಆದರ್ಶ ನಡೆ ನುಡಿ ,ಆಚಾರ ವಿಚಾರ ಕೂಡು ಕುಟುಂಬದಲಿ ನೆಮ್ಮದಿ ಸುಖ ಸಂತೋಷ ಶಾಂತಿ , ಒಗ್ಗಟ್ಟು, ನಾವು ನಮ್ಮದು ಎನ್ನುವ ಅಭಿಮಾನ ಗೌರವ ಹುಟ್ಟುವಂತೆ ಹೊಂದಿಕೊಂಡು ಹೋಗುವ ನಿಮ್ಮ ಆದರ್ಶ ಗುಣಗಳು ನಮಗೆ ದಾರಿ ದೀಪ ಕಕ್ಕಿ,ನೀವು ಈಗ ಉಸಿರಾಟದ ತೊಂದರೆಯಿಂದ ಸಾವು ಬದುಕಿನ ನಡುವೆ ಇರುವಿರಿ ದೇವರು ನಿಮಗೆ ಆರೋಗ್ಯ ಕೊಡಲಿ ಅಂತ ಬೇಡಿಕೊಳ್ಳುವೆ.