ಕಾವ್ಯ ಸಂಗಾತಿ
ಚಂದಕಚರ್ಲ ರಮೇಶಬಾಬು
ದಾರಿಹೋಕ
ದಾರಿಹೋಕ
ಬರೀ ದಾರಿಯನರಸುತ್ತ ಹೋಗುವನಲ್ಲ
ಗೊತ್ತುಗುರಿ ಇರದವನಲ್ಲ
ಹೆಗಲಮೇಲೆ ಕನಸುಗಳನ್ನು
ಹೊತ್ತು ತಿರುಗುವವನು
ಕನಸಿನ ಕಣ್ಣವನು
ತಂಗುದಾಣ ಕಂಡಾಗ
ಕೊಂಚಹೊತ್ತು ಅಲ್ಲೆ ನಿಂತು
ಹೊತ್ತುತಂದ ಕನಸನ್ನು
ಅಲ್ಲಿಯ ಜನರಲ್ಲಿ ಬಿತ್ತುವವನು
ಅದು ಸಸಿಯಾಗಿ ಮರವಾಗಿ
ಬೆಳೆದು ಹೂ ಬಿಟ್ಟ ಮೇಲೆ
ಅವರಿಗೇ ಅದರ ಕಂಪನ್ನು ಬಿಟ್ಟು
ಮತ್ತೊಂದು ಮಜಲನ್ನು
ಹುಡುಕುತ್ತ ಹೊರಡುವವನು
ಹೊಸದಕ್ಕಾಗಿ ಹುಡುಕಾಟ
ನಿರಂತರ ತಿರುಗಾಟ
ಎಂದೂ ನಿಲ್ಲದ ದಾರಿ ಸವೆತ
Beautiful.
ತುಂಬಾ ಅರ್ಥಪೂರ್ಣವಾಗಿದೆ