ಇಂದಿರಾ ಮೋಟೆಬೆನ್ನೂರ ಕವಿತೆ-ಕೊಟ್ಟ ಭಾಷೆ

ಕಾವ್ಯಸಂಗಾತಿ

ಇಂದಿರಾ ಮೋಟೆಬೆನ್ನೂರ.

ಕೊಟ್ಟ ಭಾಷೆ

ಕೊಟ್ಟ ಭಾಷೆಗೆ ತಪ್ಪದಂತೆ
ನಡೆಯ ಬೇಕು…
ತಪ್ಪಿ ನಡೆದರೆ ಮೆಚ್ಚನಾ
ದೇವನು……..
ಇಟ್ಟ ನಂಬಿಕೆಯ ನೀನು
ಉಳಿಸಿ ಕೊಳ್ಳಲೇ ಬೇಕು….
ಸ್ನೇಹ ಪ್ರೀತಿಯೆಂಬುದು
ಆಸಕ್ತಿಯ ಸಮಯದ
ಕೈ ಗೊಂಬೆಯಲ್ಲ…
ಯಾರ ಅಧೀನದಲ್ಲಿ ಇಲ್ಲ…
ಸಂತೆಯ ಸರಕಲ್ಲ ಗೆಳೆಯ…
ಭಾವಗಳು ಅರಳಿ ಹೂವಾಗಲು..
ಸ್ನೇಹ ಪ್ರೀತಿ ವ್ಯವಹಾರ ವ್ಯಾಪಾರವಲ್ಲ….
ಭಾವಗಳು ಬಿಕರಿಗಿಲ್ಲ….
ಇದ್ದು ಬಿಡು ಇರದಂತೆ ಎಂದರೆ…

ನೀ ನುಡಿದಂತೆ ನಡೆಯಲೇ ಇಲ್ಲ..
ನಡೆಯೊಂದು..ನುಡಿಯೊಂದು.. ತರವಲ್ಲ…
ನಿನ್ನ ಸಾಧುವಲ್ಲದ ಅಣತಿಯ..
ಆದೇಶದ ಅಧೀನದಲ್ಲಿ
ನನ್ನೊಲವ ಹೂವುಗಳು ಅರಳಲಾರದೇ
ಅಳುತಿವೆ……
ಧಿಕ್ಕರಿಸುತಿವೆ ನಿನ್ನ ತಾರತಮ್ಯದ ಪ್ರೀತಿಯ
ರೀತಿ ನೀತಿಯ……
ತೊರೆದು ದೂರ ಹೋಗುವೆ ಎಲ್ಲಿಗೆ,?
ಎಷ್ಟ್ ಇಟ್ಟ ಆಣೆ, ಕೊಟ್ಟ ಭಾಷೆಗಳ
ತಪ್ಪಿಸದೆ ಪೂರ್ಣಗೊಳಿಸುವುದಿದೆ….
ನೆನಪಿಲ್ಲವೇ..?
ಹೀಗೆ ಪಲಾಯನ ಸೂತ್ರಧಾರಿಯಾಗಬೇಡ….
ಹೆದರಿದೆಯ …?

ಸದ್ದಿಲ್ಲದೆ ಮುದ್ದಿಸಿದ ಮುಗ್ಧ ಪುಟ್ಟ
ಹೃದಯದ ಕಗ್ಗೊಲೆ ….
ಒಂದಲ್ಲ ಎರಡಲ್ಲ ಹಲವಾರು
ಬಗೆಯಲೀ..ಹಲವಾರು ಸಲ..
ಮಾತಿನಿಂದ…ಮೌನದಿಂದ…
ಕವನದಿಂದ….ಧವನದಿಂದ…
ಎದೆ ಬಾಗಿಲು ತೆರೆಯುತ
ಮುಚ್ಚುತ…ಮನದ ಭಾವಗಳ
ಬಿಚ್ಚುತ ..,ಅದುಮಿಟ್ಟ ಕಾಪಿಟ್ಟ
ಜೀವದ ನೋವುಗಳ
ಮುಳ್ಳುಗಳ ಮೇಲೆ
ನಡೆಸುತ್ತಾ…
ಕಂಬನಿಯ ಧಾರೆಯಲಿ
ತೇಲಿಸಿ..ಮುಳುಗಿಸಿದೆ..

ಬರಲೇ ಬೇಕು….ಒತ್ತಾಯವಲ್ಲ
ಬಿನ್ನಹ.. ಅರಿಕೆ….ಆಗ್ರಹ..
ನಿನ್ನ ಭಾವ ಬಿತ್ತನೆಯ ಫಲ..
ಭಾವ ಬುತ್ತಿಯ ಬಿಚ್ಚಿ ಉಣ್ಣಲು…
ಕಠೋರ ಹೃದಯ ನಿನದಲ್ಲ…
ನಿರ್ದಯಿಯೂ ನೀನಲ್ಲ….
ಅರಿತಿರುವೆ…ಆದರೆ
ಕಾರಣವೇನು..?
ಈ ಒಣ ಪ್ರತಿಷ್ಠೆ….ತೋರಿಕೆ….
ನವ ಸ್ನೇಹದೊಸಗೆ…?
ಹೊಸ ಹೂವ ಬೆಸುಗೆ…?

ಅರಳುವುದಾದರೆ
ಸ್ನೇಹದೊಸಗೆ ಬೆಸೆಯುವುದಾದರೆ
ಎರಡು ಕ್ಷಣವೇ ಸಾಕು…
ಇಲ್ಲವಾದರೆ ಅರಳಲಾರದಾದರೆ
ಸಾಕಾಗುವುದಿಲ್ಲ ಅದಕೆ ನೀಡಿದರೂ
ವರುಷ ನೂರು…
ಭಾವ ತರಂಗದಿ ತೇಲಿ ನಲಿಯೇ
ಬರುವೆ ನೀನು… ಎಂದು..
ಒಲುಮೆ ನಲುಮೆ ಜೀವ
ರಾಗ ಭಾವದಲ್ಲಿ… ಮಿಂದು…..
ನನ್ನ ಕಂಗಳ ಇರುಳ ನಿದಿರೆ
ಕದಿಯುತ.. ..ಅಂದು..,
ನೀನು ನೆಮ್ಮದಿಯ ನಿದಿರೆಗೆ
ಹೇಗೆ ಜಾರಿದೆ…ಇಂದು…..


Leave a Reply

Back To Top