ಕಾವ್ಯ ಸಂಗಾತಿ
ಜಿ ಶಿವಕುಮಾರ ಸೋಗಿ
ಕುರುಡು ಕನಸು
ಮೆತ್ತಗಾದ ಮೈ ಬೆತ್ತಲಾದ ಮನಸ್ಸು
ಮತ್ತೆ ಮತ್ತೆ ಕಾಣುತಿದೆ ಕುರುಡು ಕನಸು
ಬಳಲಿ ತೊಳಲಿ ಬೆಂದು ನೊಂದು ನೋವು ನುಂಗಿ
ಅಡರಿ ದೇಹ, ತಬ್ಬಿ ತನುವ ಬಿಗಿದು ಕೈ
ಸೆಟೆದು ಮೈ, ದುಡಿದು ದಣಿದು ದಿನವೂ ತಣಿದು
ಸೋತು ಸತ್ತ ಸಂಭ್ರಮವೆಷ್ಟೊ? ಬರಿಯ ಬೆವರು!
ಮೆತ್ತಗಾದ ಮೈ ಬೆತ್ತಲಾದ ಮನಸ್ಸು
ಮತ್ತೆ ಮತ್ತೆ ಕಾಣುತಿದೆ ಕುರುಡು ಕನಸು
ಬಾಳು ಗೋಳು ಬದುಕು ಬರಡು ಬಯದ ನೆರಳು
ನಿತ್ತೆ ನರಕ ಬಾಳ ನಾಕ ಬವಿತಕ್ಕಿಲ್ಲ ಬೆಳಕ ಲಾಂದ್ರ
ಕಂಡ ಕನಸು ಮಸುಕು-ಮಸುಕು ಮಬ್ಬಿನಂತೆ
ಮಬ್ಬು ಕವಿದೀ-ಮನ ಮಣ್ಣು ಬೇಡುತಿದೆ ಮೈಗೆ
ಮೆತ್ತಗಾದ ಮೈ ಬೆತ್ತಲಾದ ಮನಸ್ಸು
ಮತ್ತೆ ಮತ್ತೆ ಕಾಣುತಿದೆ ಕುರುಡು ಕನಸು
ತಿದ್ದಿ ತೀಡಿ, ಜಾಡು ಹೊಡೆದು,ಕಸವ ಗುಡಿಸಿ
ಬಣ್ಣ ಬಳಿಯಬೇಕಾಗಿದೆ ಗರ್ಭಗುಡಿಗೆ !
ಕೆಸರು ತುಂಬಿದ ಬಸಿರಿನಲಿ ಕಾಯಿತಿದೆ ನೊಂದು
ಬಯಕೆ ಹೂವು ಬರುವುದೆಂದೊ ಬತ್ತಿ ನಿಂತ ಮೊಗ್ಗಿನಿಂದ!
ಮೆತ್ತಗಾದ ಮೈ ಬೆತ್ತಲಾದ ಮನಸ್ಸು
ಮತ್ತೆ ಮತ್ತೆ ಕಾಣುತಿದೆ ಕುರುಡು ಕನಸು