ಕಾವ್ಯ ಸಂಗಾತಿ
ಡಾ ಡೋ.ನಾ.ವೆಂಕಟೇಶ
ಕಾವು
ಈಟಿ ಎದೆ ಸೀಳಿದಂತೆ ಅವಳ
ಕಾವು
ರಾತ್ರಿ ಹಗಲು ಹೊತ್ತು ಗೊತ್ತೆನ್ನದೆ ಮೊಟ್ಟೆಯ ಮಸೆಯಲಿಟ್ಟ ಕಾವು
ಅವಧಿ ಮುಗಿಯುವ ಮುನ್ನ
ಹೊರ ಬಂದ ಹೆಳವ-
ಥೇಟ್ ಅವಸರದ ಅರುಣನ
ಥರಾ. ವಿಚಲಿತೆ ವಿನುತೆಯ ಥರಾ. ಅಲ್ಲಿ
ಕತ್ತಿ ಮಸೆಯಲೊಬ್ಬ
ಸವತಿಯಿದ್ದಳು ಕದ್ರಿ
ಇಲ್ಲಿ ಬರೇ ಅವಳ ಮಕ್ಕಳೇ
ಕಾರ್ಕೋಟಕಗಳೇ
ಇಲ್ಲಿ ನಮಗ್ಯಾವ
ಕಶ್ಯಪನೂ ಇಲ್ಲ
ಜ್ವಲಿಸುವ ಸೂರ್ಯನೂ ಇಲ್ಲ !
ಬರೇ ಕಾವು ,ಕೂಲ್ ಕೂಲ್!
ಈಗೀಗ ಕಲಿಗಾಲ
ಕಾವಿಲ್ಲದ ಮೊಟ್ಟೆ
ಕುಲದ ಮೂಲ ಹೇಳುವ
ಮನು ಕುಲ ಜಾಲಾಡುವ
ಜನ್ಮ ಜನ್ಮಾಂತರ ಜಾಲ
ಹೇಳುವ ಮೊಟ್ಟೆ
ಹೇಳ ಹೊರಟಿದ್ದು ಇಷ್ಟೆ
ಈಗ ಕಾವು ಬೇಕಿಲ್ಲ
ಬೇಕಿಲ್ಲ ನಿಮ್ಮ ಅನುವಂಶಿಕ
ಧಾತು ಚಿತ್ರ.
ಹೊತ್ತು ಗೊತ್ತಲ್ಲದ
ಕಾವು ಇಲ್ಲದ ಕಾಲ
ದಾಹವಿಲ್ಲದ ಕಾವು!
ಡಾ ಡೋ.ನಾ.ವೆಂಕಟೇಶ
ನಿಮ್ಮ ಭಾವನೆಗಳನ್ನು ಸುಂದರವಾಗಿ ವ್ಯಕ್ತಪಡಿಸಿದ್ದೀರಿ
Thank you Manjanna