ಕಾವ್ಯ ಸಂಗಾತಿ
ನಿಶ್ಚಿತ.ಎಸ್
ಏನಿದು ಮಾಯೆ …..
ಹೂ ಅರಳಿದಂತೆ….
ಎಲೆಗಳು ಚಿಗುರಿದಂತೆ…
ಆಸೆಗಳು ಮೂಡಿತ್ತು ಮನದೊಳಗೆ….
ಆದರೆ,,,,,,,
ಅರಳಿದ ಹೂವು ಬಾಡಿದಂತೆ…. ಚಿಗುರಿದ ಕನಸು ಒಣಗಿದಂತೆ… ಆಸೆಗಳು ನಿರಾಸೆಗೆ ಅಡಿಪಾಯ ಆದಾಗ …..
ನಿರೀಕ್ಷೆಗಳು ನಿರಾಸೆಗೆ ಹೋಗುವುದಿಲ್ಲವೇ…..
ಏನಿದು ಮಾಯೆ?
ರಂಗೋಲಿಯ ನಾ ಬಿಡಿಸಿ ….
ಅದಕ್ಕೆ ರಂಗು ರಂಗಿನ ಬಣ್ಣವ ಹಾಕಿ…
ಕಂಡಿದ್ದೆ ಕನಸೊಂದನ್ನ ….
ಅದು ಗಾಳಿಗೆ ತೂರಿ….
ಹೊಡೆಯಿತು ಕನಸು…
ಮುರಿಯಿತು ಮನಸು…
ಏನಿದು ಮಾಯೆ?
ಭೂಮಿಗೆ ಬೀಜವ ಬಿತ್ತಿ …..
ಕಾದು ಕುಳಿತಿದ್ದೆ ಮಳೆಯ ಆಶ್ರಯವ …..
ಮಳೆ ಬಂದಿದ್ದೇನೋ ನಿಜ….
ಆದರೆ,,,
ಅತಿಯಾದ ಮಳೆಯಿಂದ ಬೀಜವು ಮೊಳಕೆಯೇ ಹೊಡೆಯಲಿಲ್ಲ….
ಅದರ ಜೊತೆಯೇ ನನ್ನ….
ಕನಸು ಕೂಡ ಆ ಮಳೆಯಲ್ಲಿ ಮುಳುಗಿತು……
ಏನಿದು ಮಾಯೆ?
ನಿಶ್ಚಿತ.ಎಸ್.
ಏನಿದು ಮಾಯೆ ? ನೋಡು ನೋಡುತ್ತಲೇ ಕವಿಯಾದೆಯಲ್ಲೇ….