ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅಂಕಣ ಸಂಗಾತಿ.

ಶಿಕ್ಷಣ ಲೋಕ

ಡಾ.ದಾನಮ್ಮ ಝಳಕಿ

ಶಾಲೆಯ ಆರಂಭದ ದಿನಗಳು

ಸಂತಸದಿಂದಿರಲಿ

ಬೇಸಿಗೆ ರಜೆ ಕಳೆದು ಪುನಃ ಶಾಲೆಯೆಡೆಗೆ ಮಕ್ಕಳು ಚಿಲಿಪಿಲಿ ಹಕ್ಕಿಯಂತೆ ಬಂದು ಸೇರುತ್ತಾರೆ. ಒಂದೆಡೆ ಅಜ್ಜ ಅಜ್ಜಿಯರ, ನೆಂಟರ ಊರಿಂದ ಒಲ್ಲದ ಮನಸ್ಸಿನಿಂದ ಬಂದಿರುತ್ತಾರೆ. ಅಲ್ಲದೇ ರಜೆಯಲ್ಲಿ ಅನೇಕ ಅನುಭವಗಳನ್ನು ಸವಿದು ಅವುಗಳನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳುವ ಕುತೂಹಲದಲ್ಲಿಯೂ ಇರುತ್ತಾರೆ. ಬಂದ ತಕ್ಷಣ ಅವರಿಗೆ ಸಂತೋಷ ತರುವ ವಾತಾವರಣವೂ ಸಹ ಶಾಲೆಯಲ್ಲಿ ದೊರೆಯಬೇಕು.

ಶೈಕ್ಷಣಿಕ ಅವಧಿ ಪ್ರಾರಂಭವಾಗುತ್ತಿದ್ದಂತೆ ಸೇತುಬಂಧದ ಪೂರ್ವ ಪರೀಕ್ಷೆ ಹಾಗೂ ಸಾಫಲ್ಯ ಪರೀಕ್ಷೆ ಹೀಗೆ ಪರೀಕ್ಷೆಗಳ ಸುರಿಮಳೆ ಆದರೆ ಮಕ್ಕಳು ಶಾಲೆಯೆಂದರೆ ಪರೀಕ್ಷೆಗಳ ಸರಣೆಯೇ ಎಂದು ತಿಳಿಯಬಹುದು ಹಾಗೂ ನಿರಾಸಕ್ತಿ ತೋರಿಸಬಹುದು. ಪರೀಕ್ಷೆಗಳು ಮಕ್ಕಳಿಗೆ ತಿಳಿಯದಂತೆ ನಡೆಯಬೇಕು. ಮಕ್ಕಳ ಕಲಿಕೆಯನ್ನು ಶಿಕ್ಷಕರು ಅರಿಯಲು ಪರೀಕ್ಷೆ ಸಹಕಾರಿ ಆದರೆ ಅವು ಮಕ್ಕಳಿಗೆ ಭಯವನ್ನುಂಟು ಮಾಡಬಾರದು ಮಕ್ಕಳು ಯಾವುದೇ ಭಯ ಆತಂಕವಿಲ್ಲದೇ ಸಂತಸದಿಂದ ಕಲಿಕೆ ಸಾಗುವಂತಾಗಲು ಮಕ್ಕಳಿಗೆ ಸದಾ ಪ್ರೇರಣೆ ಪ್ರೋತ್ಸಾಹ ನೀಡುತ್ತಾ ಅವರು ಕಲಿಕೆಯನ್ನು ಆನಂದಿಸುವಂತೆಹ ಕ್ರಮಗಳನ್ನು ಕೈಗೊಳ್ಳಬೇಕು. ಮಕ್ಕಳು ರಜೆಯಲ್ಲಿ ಆನಂದಿಸಿದ ಸವಿಯನ್ನು ಮುಕ್ತವಾಗಿ ಹೇಳಲು, ಅಭಿವ್ಯಕ್ತಗೊಳಿಸಲು ಸದಾ ವೇದಿಕೆಯನ್ನು ನೀಡಬೇಕು. ಅವರು ಅಭಿವ್ಯಕ್ತಿಗೊಳಿಸುವಾಗ, ಬರವಣೆಗೆ ಅಥವಾ ಭಾಷಣದ ಮೂಲಕ ಹೇಳುವಾಗ ಬರವಣೆಗೆ, ಅಭಿವ್ಯಕಿ, ಆಲಿಸುವಿಕೆ ಹೀಗೆ ಎಲ್ಲವನ್ನು ಒರೆಹಚ್ಚಿ ನೋಡಿ, ಅನುಕೂಲಿಸುವ ಕಾರ್ಯ ಸಾಗಬೇಕು. ಪರಿಸರದಲ್ಲಿ ಅವರು ಕಂಡ ವಿಷಯಗಳನ್ನು ವಿಜ್ಞಾನ ತರಗತಿಯಲ್ಲಿ ಚರ್ಚಿಸಲ್ಪಡಲು ಅವಕಾಶ ಕಲ್ಪಿಸಬೇಕು. ನೆಂಟರ ಮನೆಯಲ್ಲಿ, ಅಜ್ಜ ಅಜ್ಜಿಯರ ಮನೆಯಲ್ಲಿ ನೋಡಿದ ಜಾತ್ರೆಗಳು, ಹಬ್ಬ ಬರಿದಿನಗಳ ಬಗ್ಗೆ ಸಮಾಜವಿಜ್ಞಾನ ತರಗತಿಯಲ್ಲಿ ಚರ್ಚಿಸಲ್ಪಡಬೇಕು. ಹೀಗೆ ವಿದ್ಯಾರ್ಥಿ ಹೊರಜಗತ್ತಿನಲ್ಲಿ ಕಂಡ ಸತ್ಯಗಳನ್ನು ಸರಿಯಾಗಿ ಅರ್ಥೈಸಿಕೊಳ್ಳಲು ಹಾಗೂ ಅವುಗಳನ್ನು ಪಠ್ಯದ ವಿಷಯಗಳೊಂದಿಗೆ ಸಮೀಕರಿಸುವ ಕಾರ್ಯ ಸಾಗಬೇಕು. ಆಗ ಮಾತ್ರ ಮಗು ಗಟ್ಟಿಯಾಗಿ ಕಲಿಯುತ್ತದೆ. ಸಂತಸದಿಂದ ಕಲಿಯುತ್ತದೆ.
ವಿದ್ಯಾರ್ಥಿ ಕೊನೆಯ ಬೇಲ್‌ ಆದಾಗ ಅತ್ಯಂತ ಖುಷಿಯಿಂದ ಹೊರಗೆ ಓಡುತ್ತದೆ ಅದೇ ಖುಷಿ ವಿದ್ಯಾರ್ಥಿಗೆ ಶಾಲೆ ಪ್ರಾರಂಭವಾದಾಗ ಬರುವಂತೆ ಹುರುದುಂಬಿಸಿ ಕಲಿಸಬೇಕು .

ಇತ್ತೀಚಿಗೆ ವಿದ್ಯಾರ್ಥಿಗಳಲ್ಲಿ ಸಂವಹನ ಸಹ ಉತ್ತಮವಾಗಿ ಬೆಳೆಯುತ್ತಿಲ್ಲ. ಮಾತನಾಡುವ ಶೈಲಿ ಸುಧಾರಿಸಬೇಕಿದೆ. ಅವರ ಮಾತಿನಲ್ಲಿ ವಿನಯ ವಿಮ್ರತೆ ಸಂಪೂರ್ಣವಾಗಿ ನೆಲಕಚ್ಚಿದಂತೆ ಎನಿಸುತ್ತಿದೆ. ತಂದೆ ತಾಯಿ, ಗುರು ಹಿರಿಯರೊಂದಿಗೆ ಮಾತನಾಡುವಾಗ ಗೌರವ ವಿನಯದಿಂದ ಮಾತನಾಡಲು ಚಿಕ್ಕಂದಿನಿಂದಲೇ ತಿಳಿಹೇಳಬೇಕು. ಶಾಲೆಯಲ್ಲಿಯೂ ಸಹ ಇತ್ತೀಚಿಗೆ ಅತ್ಯಂತ ಒರಟುತನದ ಮಾತುಗಳು ಕಂಡುಬರುತ್ತಿದೆ. ಮಕ್ಕಳಿಗೆ ಕೇವಲ ಪಠ್ಯವನ್ನು ಭೋಧಿಸಿದರೆ ಸಾಲದು ಉತ್ತಮ ಸಂಸ್ಕಾರವನ್ನು ನೀಡಬೇಕು. ನೈತಿಕ ಕಥೆಗಳ ಮೂಲಕ ಮೌಲ್ಯಗಳನ್ನು ಭಿತ್ತಿಬೆಳೆಯಬೇಕು. ವೈಜ್ಞಾನಿಕ ತಳಹದಿಯಲ್ಲಿ ಆಲೋಚಿಸುವಂತೆ ಪ್ರೇರೆಪಿಸಬೇಕು. ವೈಚಾರಿಕ ಚಿಂತನೆಯಿಂದ ಜ್ಞಾನ ಕಟ್ಟಿಕೊಳ್ಳಲು ಅವಕಾಶಗಳನ್ನು ಸೃಜಿಸಬೇಕು. ಮಕ್ಕಳ ಆನಂದ ಹೆಚ್ಚಿಸುವ ವಿಷಯಗಳನ್ನು ಅವರೊಂದಿಗೆ ಚರ್ಚಿಸಬೇಕು.
ಒಟ್ಟಾರೆಯಾಗಿ ಶಾಲೆಯ ಪ್ರಾರಂಭದ ದಿನಗಳು ಸ್ನೇಹಿತರೊಂದಿಗೆ ಗುರುಗಳೊಂದಿಗೆ ತಾನು ನೋಡಿದ ಎಲ್ಲ ವಿಷಯಗಳನ್ನು ಹೇಳಲು ಪ್ರೇರನಾತ್ಮಕ ನುಡಿಗಳು ಮೂಲಕ ಅವಕಾಶ ಸೃಜಿಸಬೇಕು.


ಡಾ.ದಾನಮ್ಮ ಝಳಕಿ

ಡಾ.ದಾನಮ್ಮ ಝಳಕಿ ಯವರು ಪ್ರಸ್ತುತ ಶ್ರೀಮತಿ ಸೋಮವ್ವ ಚ ಅಂಗಡಿಯ ಕರ್ನಾಟಕ ಪಬ್ಲಿಕ್ ಶಾಲೆಯ ಉಪಪ್ರಾಂಶುಪಾಲರಾಗಿದ್ದು ಶಿಕ್ಷಣದಲ್ಲಿ ಇವರು ನಡೆಸಿದ ಹಲವು ಸಂಶೋದನಾ ಲೇಖನಗಳು ರಾಷ್ಟ್ರೀಯ ಅಂತರರಾಷ್ಟ್ರೀಯ ಸಂಸ್ತೆಗಳಿಂದ ಪ್ರಕಟಗೊಂಡಿವೆ.ರಾಜ್ಯಮಟ್ಟದಲ್ಲಿ ಉತ್ತಮ ಶಿಕ್ಷಕಿ ಪ್ರಶಸ್ತಿಗೂ ಬಾಜನರಾಗಿದ್ದಾರೆ.ಶಿಕ್ಷಣ ಮಾತ್ರವಲ್ಲದೆ ಸೃಜನಶೀಲ ಸಾಹಿತ್ಯ ರಚನೆಯಲ್ಲು ಇವರು ತಮ್ಮ ಛಾಪು ಮೂಡಿಸಿರುವ ಇವರ ಹಲವಾರು ಬರಹಗಳು ನಾಡಿನ ಬಹುತೇಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ

About The Author

2 thoughts on “”

Leave a Reply

You cannot copy content of this page

Scroll to Top