ಅನುವಾದಿತ ಕವಿತೆ-ಸೌಮ್ಯದಿ ಸಾವೆಂಬ ಶುಭರಾತ್ರಿ ಕೂಪಕೆ ಜಾರದಿರಿ

ಅನುವಾದ ಸಂಗಾತಿ

ಇಂಗ್ಲೀಷ್ ಮೂಲ: ಡೈಲಾನ್ ಥಾಮಸ್

ಕನ್ನಡಕ್ಕೆ ಬಾಗೇಪಲ್ಲಿ ಕೃಷ್ಣಮೂರ್ತಿ

ಸೌಮ್ಯದಿ ಸಾವೆಂಬ ಶುಭರಾತ್ರಿ ಕೂಪಕೆ ಜಾರದಿರಿ

ತಾ 02.10.2014 ರಂದು. ಲಂಡನ್ ನಗರದ ಕೋವೆಂಟ್ ಗಾರ್ಡನ್, ರೇಲ್ವೇ ವಸ್ತು ಸಂಗ್ರಹಾಲಯದೆದುರು ಏರ್ಪಡಿಸಿದ್ಧ ಬ್ರಿಟನ್ನಿನ (ರಾಷ್ಟ್ರೀಯ ಕವಿತಾ ದಿನ) NATIONAL POETRY DAY ಕಾರ್ಯಕ್ರಮದಿ ಭಾಗವಹಿಸಿ ನಾನು ರಚಿಸಿಅದ “RUBY CUBE” ಪದ್ಯವನ್ನು ವಾಚಿಸಿದ್ದೆ. ಕೇಳಿದ ಜನ ಮೆಚ್ಚಿ ತಮ್ಮ ಎರಡೂ ಕೈಗಳ Thumbs up ” ಮಾಡಿ ಸೂಚಿಸಿದರು. ಹರ್ಷಗೊಂಡ ಆಯೋಜಕರು ನನ್ನಲ್ಲಿ ಬಂದು 2013 ಕಾರ್ಯಕ್ರಮದಲಿ ಮೊದಲ 17 ಜನ ಇತರೆಯವರ ಕವಿತೆಯನ್ನು ವಾಚಿಸಿದ್ದರೆಂದೂ, ಈ ವರ್ಷದಿ ನಾನು 17 ರವ ನಾಗಿದ್ದು ವಾಚಿಸಿದ ಎಲ್ಲರೂ ತಮ್ಮ ಸ್ವರಚಿತ ಕವಿತೆ ಓದಿರುವ ಮಾಹಿತಿ ನೀಡಿದರು. ಜೊತೆಗೆ ಕಳೆದ ವರ್ಷ 17 ನೆಯ ವಾಚಕರು ” Dylan Thomas “ರ ಕವಿತೆಯನ್ನು ವಾಚಿಸಿದ್ದು ತಿಳಿಯಿತು. ನನಗೆ ಈ ಕವಿಯ ಹೆಸರು ಪರಿಚಯವಾದ ಬಗೆ ಹೀಗೆ.ಇಂದು ಅವರು ಬರೆದಿಹ ಪದ್ಯವೊಂದನು ಅನುವಾದಿಸಿಹೆ.ತಮ್ಮ ಅನಿಸಿಕೆ ತಿಳಿಸಿದರೆ ನಗಗೆ ಅನುಕೂಲ.

ಸೌಮ್ಯದಿ ಸಾವೆಂಬ ಶುಭರಾತ್ರಿಯ ಕೂಪಕೆ ಜಾರದಿರಿ, ಅಂದಿನ ಅಂತ್ಯದಿ ನಿಮ್ಮ ವೃದ್ಧಾಪ್ಯದ ಕ್ರೋಧವು ಒಗ್ಗೂಡಿ ಸಾವನ್ನು ಸುಟ್ಟು ಭಸ್ಮ ಮಾಡಲಿ

ನಂದಲಿರುವ ಬೆಳಕ ಬೆಳಗಿಸೆ ಸೆಣಸಾಡಿ.

ಜ್ಞಾನಿಗಳು ಅಂತ್ಯಕೆ ಆ ಕತ್ತಲೆಯೇ ಸರಿ ಎಂದು ಸಾರಿದ್ದರೂ ಆವರ ಮಾತಿನಾಂತ್ಯ ಮಿಂಚಿನ ಕವಲಂತೆ ಟಿಸಿಲೊಡೆದ ಸಾಧ್ಯತೆ ಕಡಿಮೆ

ಸೌಮ್ಯದಿ ಸಾವೆಂಬ ಶುಭರಾತ್ರಿ ಕೂಪಕೆ ಜಾರದಿರಿ

ಸಹೃದಯರಿಗೆ, ಬದುಕಿನ ಅಂತಿಮ ಕ್ಷಣದಲ್ಲಿ ಇರುವವರಿಗೆ,
ತಾವು ಮಾಡಿದ ಸತ್ಕೃತ್ಯಗಳೆಲ್ಲಾ ಬಹುಶಃ ಅವರ ಮುಂದೆ
ಆಕ್ಷಣ ನೃತ್ಯಗೆಯ್ದಿರಲೂ ಬಹುದು

ಸೌಮ್ಯದಿ ಸಾವೆಂಬ ಶುಭರಾತ್ರಿ ಕೂಪಕೆ ಜಾರದಿರಿ

ಸೂರ್ಯಚಲನೆ ಆಧರಿಸಿ ಹಾಡಿ ಬದುಕಿದ ಕಾಡು ಜನರೂ ಸಹ
ತಡವಾಗಿ ತಮ್ಮ ತಪ್ಪನರಿತು ಪರಿತಪಿಸಿರಲೂ ಸಾಕು

ಸೌಮ್ಯದಿ ಸಾವೆಂಬ ಶುಭರಾತ್ರಿ ಕೂಪಕೆ ಜಾರದಿರಿ

ಸಾವಿನಂಚಿನಲಿ ಇರುವವರೇ, ಸಾಯಲಿರುವವರೇ, ಮಬ್ಬು ಗಣ್ಣಿನವರೇ !
ನಿಮ್ಮ ಅರೆಕುರುಡು ಕಣ್ಣನು ಉರಿದು ಉರುಳುವ ಉಲ್ಕೆಯಂತಾಗಿಸೆ ಹೋರಾಡಲೆತ್ನಿಸಿ

ನಂದಲಿರುವ ಬೆಳಕ ಬೆಳಗಿಸೆ ಸೆಣಸಾಡಿ.

ಓ ನನ್ನ ತಂದೆ! ಅಲ್ಲಿ ಆ ದುಃಖದ ಶಿಖರದೆತ್ತರದಿಂದ ನನ್ನ ಶಪಿಸಿ ಆಶೀರ್ವದಿಸು ನಿನ್ನ ಕಣ್ಣೀರಿನಿಂದ
ಎನುತ ಪ್ರಾರ್ಥಿಸುವೆನೀಗ

ಸೌಮ್ಯದಿ ಸಾವೆಂಬ ಶುಭರಾತ್ರಿ ಕೂಪಕೆ ಜಾರದಿರಿ
ನಂದಲಿರುವ ಬೆಳಕ ಬೆಳಗಿಸೆ ಸೆಣಸಾಡಿ.


ಮೂಲ ಇಂಗ್ಲೀಷ್ ; ಡೈಲಾನ್ ಥಾಮಸ್
ಅನುವಾದ. ; ಬಾಗೇಪಲ್ಲಿ ಕೃಷ್ಣಮೂರ್ತಿ

Leave a Reply

Back To Top