ಯೋಗೇಂದ್ರಾಚಾರ್ ಎ. ಎನ್. ಕವಿತೆ-ನಾವಿಷ್ಟೇ

ಕಾವ್ಯ ಸಂಗಾತಿ

ಯೋಗೇಂದ್ರಾಚಾರ್ ಎ ಎನ್

ನಾವಿಷ್ಟೇ

ರಣ ಹದ್ದುಗಳ ಬೇಟೆ
ಈಗಷ್ಟೇ ಮುಗಿದಿದೆ
ಇನ್ನೇನು ಗಿಡುಗಗಳ ಬೇಟೆ
ಆರಂಭವಾಗಬೇಕಿದೆ
ನಿರ್ವಿಘ್ನಕ್ಕೆ ಆಯುಧ ಪೂಜೆ
ಸಂಭ್ರಮಕ್ಕೆ ಬ್ಯಾಂಡ್ ಸೆಟ್ಟು
ಹೊಟ್ಟೆಗೊಂದಿಷ್ಟು ಭೂರಿ ಭೋಜನ
ಸಿದ್ಧ ಮಾಡಬೇಕಷ್ಟೆ
ಅದು ಸಹ ಕೇವಲ ಪ್ರಚಾರಕ್ಕಷ್ಟೆ

ಅಷ್ಟು ತಿಂದವರು ಹದ್ದುಗಳು
ನಾವಿಷ್ಟೇ ತಿಂದದ್ದು
ನಿಮಗಾಗಿ ನಿಮ್ಮುಳಿವಿಗಾಗಿ ನಾವು
ಎಂದು ಹೇಗಲಮೇಲೆ
ಕೈ ಇಟ್ಟಿವೆ ಗಿಡುಗಗಳು

ಹೊಟ್ಟೆಗಾಗಿ ಬಿಟ್ಟಿ ಅಕ್ಕಿ
ಬಟ್ಟೆಗಾಗಿ ಬಿಟ್ಟಿ ರೊಕ್ಕ
ಸುಖ ನಿದ್ರೆಗಾಗಿ ಬಿಟ್ಟಿ ಕರೆಂಟ್
ಕೊಟ್ಟು ಕೊಬ್ಬಿಸುತ್ತಿವೆ
ಸತ್ತ ದರಿದ್ರ‌ ದೇಹಗಳನ್ನು

ಬುದ್ಧ ಬಸವ ಗಾಂಧಿ
ಇಲ್ಲಿ ಬಂದು
ಯಾರೇ ಚಪ್ಪರ ಹಾಕಲಿ
ಯಾರೂ ಅರೆ ಕ್ಷಣ
ಅಲ್ಲಿ ನಿಲ್ಲರು
ಕೊನೆ ಪಕ್ಷ ಅವರ ಹಿಂದೆ
ನಾಲ್ಕು ಹೆಜ್ಜೆಗಳನ್ನೂ ಹಾಕರು
ಕಾರಣವಿಷ್ಟೆ
ನಮ್ಮ ದೇಹ ಹದ್ದು ಗಿಡುಗಳಿಗಷ್ಟೆ

ಅಷ್ಟು ಇಷ್ಟಿನ ಮಧ್ಯೆ
ಎಷ್ಟೇ ಕೊಕ್ಕಿನ ಕುಕ್ಕಿರಲಿ
ನಾವೆಂದೂ ಎಂದದೂ
ಹದ್ದು ಗಿಡುಗಗಳ ಪಾಲು
ಎನ್ನುವವರಷ್ಟೆ


ಯೋಗೇಂದ್ರಾಚಾರ್ ಎ ಎನ್

Leave a Reply

Back To Top