ಕಾವ್ಯ ಸಂಗಾತಿ
ಈರಮ್ಮ. ಪಿ.ಕುಂದಗೋಳ
ಮುಕ್ತಿ ಮಂಟಪ(ಅನುಭವ ಮಂಟಪ)
ಅನುಭವ ಮಂಟಪದೋಳ್
ಅವಿತಿರುವ ಶರಣರ ವಾಣಿಯೊಳ್
ಅನುಭವ ಸಾರವ ವಾಣಿಯೊಳ್
ಸರಸ್ವತಿಯ ನುಡಿವಳು ವೀಣೆಯೊಳ್….(೧)
ಬಸವಣ್ಣನ ಸ್ಥಾಪಿತೌ ಅನುಭವ ಮಂಟಪದೊಳ್
ಅಲ್ಲಮಪ್ರಭು ಸಮ್ಮಿತ ಅಧ್ಯಕ್ಷ ಪೀಠದೊಳ್
ಚೆನ್ನಬಸವಣ್ಣರ ಕಾಯಕ ಕಲ್ಪದೊಳ್
ಆಯ್ದಕ್ಕಿ ಲಕ್ಕಮ್ಮಳ ನಿಷ್ಟೀಯೊಳ್…..(೨)
ನೂಲಿ ಚಂದಯ್ಯನ ನಿರ್ಮಲ ಭಕ್ತಿಯೊಳ್
ಅಕ್ಕಮಾಹಾದೇವಿಯ ಮಹಿಮೆಯೊಳ್
ಉರಿಲಿಂಗ ಪೆದ್ದಿಯ ಗುರು ದೀಕ್ಷೆಯೊಳ್
ಸನ್ಮಾರ್ಗದ ಸತ್ ಮುಕ್ತಿಯೊಳ್………..(೩)
ಸಕಲ ಸದ್ಭಕ್ತರ ಶರಣರರೋಳ್
ಭಕ್ತಿ,ಕಾಯಕ, ತ್ಯಾಗ ,ಸದ್ವಿನಿಯೋಗದೊಳ್
ನ್ಯಾಯ ನೀತಿಯೊಳ್ನುಡಿದಂತೆ ನೆಡೆದ ನಿಯೋಗಿಯೊಳ್
ಪಂಚೆದ್ರಿಯಗಳ ಬಂಡಿಯದಿ ನಿಗ್ರಹಿಸಿದೊಳ್….(೪)
ಬದುಕಿನ ಬಂಡಿಯ ಕೀಲುಗಳೊಳ್
ಚಂಚಲ ಮಣ್ಣಿಸಿನಿಂದ ಅಚ್ಚು ಮುರಿದೊಳ್
ಅರಿವಿನ ಗುರು ಜಪವ ಏಕಾಗ್ರತೆಯೊಳ್
ಬಾಳು ಅರಳುವುದು ಮಮೂಖದ ಛಾಯೆಯೊಳ್….(೫)
ಜ್ಞಾನ ವಿಜ್ಞಾನ ವೈಚಿತ್ರೈದಿಶಾದಿಯೊಳ್
ಕನ್ನಡ ಸಂಸ್ಕೃತಿ ಬಿಂಬಸಾರ ಕಡಲಿನೊಳ್
ವಚನಾಮೃತ ನಿಷ್ಠುರ ಸವಿಗಾನ ಲಹರಿಯೊಳ್
ಸಕಲ ಚರಾಚರಾದಿ ಜೀವಿತ ಸಾರ್ಧಕದಿ ಬದುಕಿನೊಳ್……(೬)
ಇಷ್ಟಲಿಂಗವ ಪೂಜಿಸಿ ಕಾಯಕದೊಳ್
ಕೈಲಾಸ ಕಂಡ ಶಿವಶರಣರ ಐಕೆದೊಳ್
ವೀರಶೈವ ಧರ್ಮದಿ ಬೆಳಗಿಸಿದೊಳ್
ಅನುಭವ ಮಂಟಪವೊಂದೇ ಏಕೈಕ ವಿಶ್ವಕ್ಕೆ ಮಾದರಿಯೊಳ್
ಮರೆಯುವಂತಿಲ್ಲ ಮುಕ್ತಿಮಂಟಪದಿ ಪ್ರತಿಮನದೊಳ್………..(೭)-
ಈರಮ್ಮ. ಪಿ.ಕುಂದಗೋಳ