ಅನುರಾಧಾ ರಾಜೀವ್ ಸುರತ್ಕಲ್-ಗಜಲ್

ಕಾವ್ಯ ಸಂಗಾತಿ

ಅನುರಾಧಾ ರಾಜೀವ್ ಸುರತ್ಕಲ್

ಗಜಲ್

ಗರುಡನಂದದಿ ವಿಷ್ಣುವಿನ ವಾಹನವಾಗಿ
ಏರಿಹನು ತುಷ್ಟಿಯಲಿ
ದುರುಗುಟ್ಟಿ ನೋಡುತಿಹನು ದೂರದಲಿ
ಯಾರಿಹನು ದೃಷ್ಟಿಯಲಿ

ಚೂಪಾದ ಕೊಕ್ಕಿನಲಿ ಕುಕ್ಕಿ ಬಿಡುವಷ್ಟು
ರೋಷವೇ ನಿನಗೆ
ತಂಪಾದ ಗಾಳಿಯಲಿ ಮೈಮರೆತು ನೋಟವ
ಬೀರಿಹನು ಸೃಷ್ಟಿಯಲಿ

ಗಂಭೀರವದನದಿ ನಿಂದಿರುವೆ ಯಾವುದೋ
ಕಳವಳವ ಹೊತ್ತಂತೆ
ತುಂಬಿರುವ ಮದವ ಮುರಿಯಲು ಕಿಡಿಗಳ
ಕಾರಿಹನು ಮುಷ್ಟಿಯಲಿ

ಸರ್ವಶ್ರೇಷ್ಟ ಎಂಬ ಭಾವದಿ ತಲೆಯೆತ್ತಿ
ನಿಂತಿರುವ ಆಹಂಕಾರದಿ
ಪರ್ವದಿನದ ನಿರೀಕ್ಷೆಯ ಮಾಡಿ ತಿಂದು
ತೇಗಿಹನು ತೃಪ್ತಿಯಲಿ

ಬಿಳಿಯ ಮುತ್ತಿನಂತಹ ಕೊರಳಿಂದ ಉಲಿವ
ರಾಧೆಯಲಿ ಪ್ರೇಮಗಾನ
ತೊಳೆದು ಪಾದವ ಗಂಗೋದಕದಿ ಮೂಜಗವ
ತೋರಿಹನು ವೃಷ್ಟಿಯಲಿ


ಅನುರಾಧಾ ರಾಜೀವ್ ಸುರತ್ಕಲ್

1 thought on “ಅನುರಾಧಾ ರಾಜೀವ್ ಸುರತ್ಕಲ್-ಗಜಲ್

Leave a Reply