ಈರಪ್ಪ ಬಿಜಲಿ ಕೊಪ್ಪಳ ಕವಿತೆ..ಎರಡು ನಕ್ಷತ್ರಗಳ ಹೊಳಪು

ಕಾವ್ಯ ಸಂಗಾತಿ

ಈರಪ್ಪ ಬಿಜಲಿ ಕೊಪ್ಪಳ

ಎರಡು ನಕ್ಷತ್ರಗಳ ಹೊಳಪು

ನೆರಳೆ ಇಲ್ಲದ ಬದುಕು ಸಾಗಿದೆ
ಎರಡು ನಕ್ಷತ್ರ ಹೊಳಪಿನಲಿ
ಕರುಳು ಹಿಂಡುವ ದುಃಖ ಸಾಗರ
ಹೆಪ್ಪುಗಟ್ಟಿದೆ ಉದರದಲಿ || ೧||

ಆಟ ಆಡುವ ಬಾಲ್ಯದಲ್ಲಿಯೆ
ಹುಡುಗಿಗೆ ಮಾಡೆ ಮದುವೆಯನು
ಓಟ ಪಾಠವ ಮರೆತು ಬಾಲೆಯು
ಜೀವನ ಚಕ್ರಕೆ ಸಿಲುಕಿದಳು || ೨||

ಚಂಡಮಾರುತ ಬೀಸಿ ಬದುಕಲಿ
ಅವಳ ನೆರಳನು ನುಂಗಿರಲು
ಗಂಡ ನೀಡಿದ ಅವಳಿ ಮಕ್ಕಳ
ಸಾಕೊ ಹೊರೆಯನು ಹೊತ್ತಿಹಳು ||೩||

ತಲೆಯ ಮೇಲಿನ ಸೌಧೆಗಿಂತಲು
ಒಡಲ ಬೇಗುದಿ ಹೆಚ್ಚಿವುದು
ಅರಳೊ ಮೊಗ್ಗನು ನೋಡಿ ಕಣ್ಣಲಿ
ಎದೆಯ ನೋವದು ತಗ್ಗಿವುದು||೪||

ಹಾಲು ಮೊಸರದು ಬೆಣ್ಣೆ ಮಾರುತ
ಬದುಕಿನ ರಥವ ಎಳೆದಿಹಳು
ಬಾಲ್ಯದ ಮದುವೆ ತಂದಿತು ಗೊಡವೆ
ಶಾಪ ಹಾಕುತ ಗೊಣಗಿಹಳು ||


Leave a Reply

Back To Top