ಅಂಕಣ ಬರಹ

ಕ್ಷಿತಿಜ

ಭಾರತಿ ನಲವಡೆ

ಶಿಸ್ತು

10 ನಿಮಿಷಗಳಲ್ಲಿ ಕೈ ಕಾಲು ಮುಖ ತೊಳೆದುಕೊಂಡು ಬಂದು ಅಭ್ಯಾಸಕ್ಕೆ ಕುಳಿತುಕೊಳ್ಳದಿದ್ದರೆ  ಕೋಲಿನಿಂದ ಬಾರಿಸುವೆ (ಹೊಡೆಯುವೆ ) ಎಂದುಅಭ್ಯಾಸ ಮಾಡಲು ಗದರಿಸುವದು ಶಿಕ್ಷೆಯಾಗುತ್ತೆ. ಅದನ್ನೇ ಮತ್ತೊಂದು ರೀತಿಯೂ ಹೇಳಬಹುದಲ್ಲವೇ? ಹೀಗೆ “ಬೇಗ ಕೈ ಕಾಲು ಮುಖ ತೊಳೆದುಕೊಂಡು ಬಂದುಬಿಡು, ಅಲ್ಲಿಯವರೆಗೆ ನೀ ಏನೇನು ನೋಟ್ಸ್ ಬರೆದಿದ್ದೀಯೋ ಎಂಬುದನ್ನು ನೋಡ್ತೇನೆ “ಎನ್ನುವುದು ಶಿಸ್ತು. ಅದರೊಂದಿಗೆ ತನ್ನ ಜವಾಬ್ದಾರಿಯನ್ನರಿತು ಭಾಗವಹಿಸುವದು ಸಹ ಬಹಳ ಮುಖ್ಯ. ಅಂದರೆ ನಾವು ಕೈಗೊಂಡ ಕೆಲಸ ಸಫಲವಾಗಲು ಶಿಸ್ತಿನ ಜವಾಬ್ದಾರಿ ತುಂಬಾ  ಮಹತ್ವದ್ದಾಗಿದೆ.

ಮಕ್ಕಳು ತಪ್ಪು ಮಾಡಿದಾಗ ಸರಿಯಾಗಿ ತಿಳಿ ಹೇಳದೆ ಅವರ ಶರೀರದ ಮೇಲೆ ಅಧಿಕಾರವನ್ನು ಚಲಾಯಿಸುವದೇ ಶಿಕ್ಷೆ. ಸರಿಯಾದ ಜ್ಞಾನ ನೀಡುವದೇ ಶಿಸ್ತು.

ಇರುವೆಗಳ ಸಾಲನ್ನು ಗಮನಿಸಿ ಶಿಸ್ತಿಗೆ ಉತ್ತಮವಾದ ನಿದರ್ಶನ. ಶಿಸ್ತಿನಿಂದ ಮಾಡಿದ ಕೆಲಸ ಕಿಂಚಿತ್ತೂ ದೋಷವಿಲ್ಲದೆ ಯಶಸ್ವಿಯಾಗುವಲ್ಲದೆ ಆತ್ಮವಿಶ್ವಾಸವನ್ನು ಹೆಚ್ಚಿಸಿ,ಮುಂದಿನ ಕೆಲಸವನ್ನುಸುಸೂತ್ರವಾಗಿ ನಡೆಯುವಂತೆ ಯೋಜನೆ ಯೋಚನೆಗೆ ಓರೆಹಚ್ಚುತ್ತದೆ.

ಶಿಸ್ತು ಕೇವಲ ವೇಷಭೂಷಣ, ಅಲಂಕಾರ, ಉಪದೇಶದಲ್ಲಿರದೆ  ನಮ್ಮ ನಡೆ ನುಡಿಗಳು ಪ್ರಾಮಾಣಿಕವಾಗಿದ್ದರೆ ನಮ್ಮ ವ್ಯಕ್ತಿತ್ವಕ್ಕೊಂದು ಶಿಸ್ತು

“10 ನಿಮಿಷಗಳಲ್ಲಿ ಕೈ ಕಾಲು ಮುಖ ತೊಳೆದುಕೊಂಡು ಬಂದು ಅಭ್ಯಾಸಕ್ಕೆ ಕುಳಿತುಕೊಳ್ಳದಿದ್ದರೆ  ಕೋಲಿನಿಂದ ಬಾರಿಸುವೆ (ಹೊಡೆಯುವೆ ) ಎಂದುಅಭ್ಯಾಸ ಮಾಡಲು ಗದರಿಸುವದು ಶಿಕ್ಷೆಯಾಗುತ್ತೆ. ಅದನ್ನೇ ಮತ್ತೊಂದು ರೀತಿಯೂ ಹೇಳಬಹುದಲ್ಲವೇ? ಹೀಗೆ “ಬೇಗ ಕೈ ಕಾಲು ಮುಖ ತೊಳೆದುಕೊಂಡು ಬಂದುಬಿಡು, ಅಲ್ಲಿಯವರೆಗೆ ನೀ ಏನೇನು ನೋಟ್ಸ್ ಬರೆದಿದ್ದೀಯೋ ಎಂಬುದನ್ನು ನೋಡ್ತೇನೆ “ಎನ್ನುವುದು ಶಿಸ್ತು. ಅದರೊಂದಿಗೆ ತನ್ನ ಜವಾಬ್ದಾರಿಯನ್ನರಿತು ಭಾಗವಹಿಸುವದು ಸಹ ಬಹಳ ಮುಖ್ಯ. ಅಂದರೆ ನಾವು ಕೈಗೊಂಡ ಕೆಲಸ ಸಫಲವಾಗಲು ಶಿಸ್ತಿನ ಜವಾಬ್ದಾರಿ ತುಂಬಾ  ಮಹತ್ವದ್ದಾಗಿದೆ.

ಮಕ್ಕಳು ತಪ್ಪು ಮಾಡಿದಾಗ ಸರಿಯಾಗಿ ತಿಳಿ ಹೇಳದೆ ಅವರ ಶರೀರದ ಮೇಲೆ ಅಧಿಕಾರವನ್ನು ಚಲಾಯಿಸುವದೇ ಶಿಕ್ಷೆ. ಸರಿಯಾದ ಜ್ಞಾನ ನೀಡುವದೇ ಶಿಸ್ತು.

ಇರುವೆಗಳ ಸಾಲನ್ನು ಗಮನಿಸಿ ಶಿಸ್ತಿಗೆ ಉತ್ತಮವಾದ ನಿದರ್ಶನ. ಶಿಸ್ತಿನಿಂದ ಮಾಡಿದ ಕೆಲಸ ಕಿಂಚಿತ್ತೂ ದೋಷವಿಲ್ಲದೆ ಯಶಸ್ವಿಯಾಗುವಲ್ಲದೆ ಆತ್ಮವಿಶ್ವಾಸವನ್ನು ಹೆಚ್ಚಿಸಿ,ಮುಂದಿನ ಕೆಲಸವನ್ನುಸುಸೂತ್ರವಾಗಿ ನಡೆಯುವಂತೆ ಯೋಜನೆ ಯೋಚನೆಗೆ ಓರೆಹಚ್ಚುತ್ತದೆ.

ಶಿಸ್ತು ಕೇವಲ ವೇಷಭೂಷಣ, ಅಲಂಕಾರ, ಉಪದೇಶದಲ್ಲಿರದೆ  ನಮ್ಮ ನಡೆ ನುಡಿಗಳಲ್ಲಿ ಪ್ರಾಮಾಣಿಕತೆ ಇದ್ದರೆ ನಮ್ಮ ವ್ಯಕ್ತಿತ್ವಕ್ಕೊಂದು ಶಿಸ್ತು.
“ತಾಯಿ ತಂದೆಯರು ಮಕ್ಕಳ ಮುಂದೆ ಪರಸ್ಪರ ಆತ್ಮೀಯರಾಗಿರುವುದೇ ಬಾಲ್ಯಕ್ಕೆ ಅವರು ಕೊಡುವ ಶ್ರೇಷ್ಠ ಬಹುಮಾನ “ಎನ್ನುತ್ತಾನೆ ಒಬ್ಬ ಮನಶಾಸ್ತ್ರಜ್ಞ. ತಮ್ಮನ್ನು ಅವರೆಷ್ಟು ಚೆನ್ನಾಗಿ ನೀಡಿಕೊಳ್ಳುತ್ತಿದ್ದಾರೆಂಬುದರ ಮೇಲೆ, ಮಕ್ಕಳ ಭದ್ರತಾ ಭಾವ ಆಧಾರವಾಗಿರುತ್ತದೆ. ಇದು ಕೂಡ ಶಿಸ್ತಿನ ಜೀವನದ ಸೋಪಾನ. ಪ್ರತಿ ಶೇಷ್ಠ ಕೆಲಸದ ಹಿಂದೆ ಒಂದು ಶ್ರೇಷ್ಠ ನಂಬಿಕೆಯಿರುತ್ತದೆ. ಆ ನಂಬಿಕೆಯು ಆ ಕೆಲಸದ  ಕುರಿತು ಸಮಯಪ್ರಜ್ಞೆ, ಮುಂದಾಲೋಚನೆ, ಸಹಕಾರ, ಬದ್ಧತೆ, ಸಹನೆ ಈ ಮೌಲ್ಯಗಳನ್ನು ಅಡಿಪಾಯವಾಗಿಸಿದರೆ ಆ  ಕೆಲಸ ಮಾಡಿದ ವ್ಯಕ್ತಿ ಒಬ್ಬ ಸಾಧಕನೋ  ಮಹಾಪುರುಷನೋ ಆಗಿ ಚರಿತ್ರೆಯನ್ನು ಸೃಷ್ಟಿಸುತ್ತಾರೆ.

ಮಹಾತ್ಮಾ ಗಾಂಧಿ ತಮ್ಮ ಸರಳತೆ ಅಹಿಂಸೆ ಶಾಂತಿಯ ತತ್ವ ಗಳನ್ನು ಎಂತಹ ಸಂದರ್ಭದಲ್ಲೂ ಬಿಡದೆ ಕಾರ್ಯಪ್ರವೃತ್ತರಾಗಿ ರಾಷ್ಟ್ರಪಿತರಾಗಿದ್ದಾರೆ.ಸ್ವಾಮಿ ವಿವೇಕಾನಂದ ತಮ್ಮ ಸನಾತನ ಧರ್ಮ ಸಂದೇಶ ನೀಡಿ ಭಾರತದ ಸನಾತನ ಸಾರಥಿಯಾಗುವ ಮೂಲಕ ತಮ್ಮ ಶಿಸ್ತಿನ ಅಧ್ಯಾತ್ಮ ಜೀವನದ ದಾಖಲೆಯಾಗಿದ್ದಾರೆ.
ಪ್ರಸ್ತುತ ಸನ್ನಿವೇಶವನ್ನು ಗಮನಿಸಿದಾಗ ತಮ್ಮ ಪ್ರತಿಷ್ಠೆಗಾಗಿ ತಮ್ಮ ಮಕ್ಕಳ ಮೇಲೆ ಒತ್ತಡ ಹೇರುವದೊಂಡೆದೆಯಾದರೆ ಮಕ್ಕಳಿಗೆ ತಾವನುಭವಿಸಿದ ಕಷ್ಟ ದ ಛಾಯೆ ತಾಗಬಾರದೆಂಬ ಕುರುಡುಪ್ರೇಮ ಆದಾಯ ಮಿತಿಯ ಶಿಸ್ತನ್ನು ಮೀರಿ ತಿರುಮಂತ್ರ ಶಿಕ್ಷೆಯಾಗಿ ಪರಿಣಮಿಸುತ್ತದೆ.
ಮಕ್ಕಳು ಅನುಕರಣಾಶೀಲರಾಗಿರುವದರಿಂದ ಕುಟುಂಬದ ವಾತಾವರಣ   ಪ್ರೀತಿ, ವಿಶ್ವಾಸ, ನಂಬಿಕೆ, ಸಹಬಾಳ್ವೆ ಎಂಬ ಮೌಲ್ಯಗಳ ತಳಹದಿಯ ಮೇಲೆ ನಿಯತ್ತಿನ ಬದುಕ ಸಂದೇಶ ನೀಡಿದಾಗ ಶಿಸ್ತಿನ ಮಾನವೀಯತೆಯ ಸುಖದ ಜೀವನ ನಮ್ಮದಾಗುವಲ್ಲಿ ಸಂಶಯವಿಲ್ಲ.


ಭಾರತಿ ನಲವಡೆ

ಭಾರತಿಕೇದಾರಿ ನಲವಡೆ ಇವರುಸರಕಾರಿ ಹಿರಿಯ ಪ್ರಾಥಮಿಕ ಕನ್ನಡಶಾಲೆಮಂಗಳವಾಡದಲ್ಲಿಸಹಶಿಕ್ಷಕಿಯಾಗಿಕಾರ್ಯನಿರ್ವಹಿಸುತ್ತಿದ್ದಾರೆ.ಕಥೆ, ಕವನ, ಲೇಖನ ಬರೆಯುವ ಹವ್ಯಾಸ ಹೊಂದಿದ್ದಾರೆ. ಲೇಖನಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಬಿಡುಗಡೆಯಾದ ಕೃತಿಗಳು :1)ಕಾವ್ಯ ಕನಸು2)ಸಂಕಲ್ಪ
ತಮ್ಮ ಶಾಲೆಯ ಮಕ್ಕಳಿಗೆ ಮಾರ್ಗ ದರ್ಶನ ಮಾಡಿ ತಾಲೂಕು ಜಿಲ್ಲಾ ಮಟ್ಟದ ಕವಿಗೋಷ್ಠಿ, ಉಪನ್ಯಾಸದಲ್ಲಿ ಮಕ್ಕಳೊಂದಿಗೆ ಭಾಗವಹಿಸಿದ್ದಾರೆ.ಕನ್ನಡ ಭಾಷಾಸಬಲೀಕರಣಕ್ಕೆ ಶಾಲಾ ಮಟ್ಟದಿಂದ ರಾಜ್ಯ ಮಟ್ಟದವರೆಗೂ ಕವನರಚನೆ ಹಾಗೂ ವಾಚನ ಸ್ಪರ್ಧೆಯನ್ನು ಸಂಘಟಿಸಿ ಪ್ರೋತ್ಸಾಹಿಸಿದ್ದಾರೆ.ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿರಾಜ್ಯ ಮಟ್ಟದಲ್ಲಿ 1)ಡಾ ಕಮಲಾಹಂಪನಾಸಾಹಿತ್ಯಪುರಸ್ಕಾರ2)ಗುರುಭೂಷಣ3)ಸಾಧನಾ4)ಸಾಹಿತ್ಯ ಮಂದಾರ5)ಸಾಹಿತ್ಯ ಚೇತನ6)ಕಾರುಣ್ಯಕನ್ನಡ ಬಳಸಿ ಬೆಳೆಸಲು ಹಲವಾರು ಸಂಘಟನೆಗಳ ಪದಾಧಿಕಾರಿಯಾಗಿ ಕನ್ನಡಸೇವೆಸಲ್ಲಿಸುತ್ತಿದ್ದಾರೆ

Leave a Reply

Back To Top