ತಿಂಗಳ ಕವಿ-ಡಾ ಶಶಿಕಾಂತ ಪಟ್ಟಣ ರಾಮದುರ್ಗ

ತಿಂಗಳಕವಿ

ಡಾ ಶಶಿಕಾಂತ ಪಟ್ಟಣ ರಾಮದುರ್ಗ

ಕವಿಪರಿಚಯ

ಡಾ ಶಶಿಕಾಂತ ರುದ್ರಪ್ಪ ಪಟ್ಟಣ ಎಂ ಫಾರ್ಮ್ ಪಿ ಎಚ್ ಡಿ ಔಷಧ ವಿಜ್ಞಾನದ ಒಬ್ಬ ಅಂತಾರಾಷ್ಟ್ರೀಯ ವಿಜ್ಞಾನಿಗಳು .ಸಾಹಿತಿಗಳು ಕರ್ನಾಟಕದ ಬೆಳಗಾವಿ ಜಿಲ್ಲೆಯ ರಾಮದುರ್ಗದ ಸ್ವಾತಂತ್ರ್ಯ ಹೋರಾಟ ಮನೆತನದಲ್ಲಿ ಜನಿಸಿದ ಇವರು ಉತ್ತಮ ಕವಿಗಳು ,ವಾಗ್ಮಿಗಳು ಚಿಂತಕರು ,ಶ್ರೇಷ್ಠ ಲೇಖಕರು ,ಇವರ ವಚನ ಸಾಹಿತ್ಯದ ಆಳವಾದ ಅಧ್ಯಯನ ಅಪ್ರತಿಮ ,ವಿಜ್ಞಾನ ವೈದ್ಯಕೀಯ, ಶರಣ ಸಾಹಿತ್ಯ ಪುಸ್ತಕಗಳನ್ನು ರಚಿಸಿ ಕನ್ನಡ ಸಾರಸ್ವತ ಲೋಕಕ್ಕೆ ತಮ್ಮದೇ ಆದ ಕೊಡುಗೆಯನ್ನುನೀಡಿದ್ದಾರೆ.
ಇತ್ತೀಚಿಗೆ ಇವರ ಗಾಂಧಿಗೊಂದು ಪತ್ರ ಕವನ ಸಂಕಲನಕ್ಕೆ ಡಾ ಡಿ ಎಸ ಕರ್ಕಿ ಸಾಹಿತ್ಯ ಪ್ರತಿಷ್ಠಾನ ಕೊಡಮಾಡುವ ಡಾ ಡಿ ಎಸ ಕರ್ಕಿ ಸಾಹಿತ್ಯ ಪ್ರಶಸ್ತಿ ಮತ್ತು ಜನೇವರಿಯಲ್ಲಿ ಸಿಂದಗಿ ವಿಜಯಪುರದ ಕಲಬುರ್ಗಿ ಫೌಂಡೇಶನ್ ದವರು ಕೊಡಮಾಡಿದ ಡಾ ಎಂ ಎಂ ಕಲಬುರ್ಗಿ ಸಮಗ್ರ ಸಾಹಿತ್ಯ ಪ್ರಶಸ್ತಿ ಇವರಿಗೆ ದೊರೆತಿದ್ದು ಹೆಮ್ಮೆಯ ವಿಷಯ.
ಕಾವ್ಯ ,ವೈದ್ಯಕೀಯ ಸಾಹಿತ್ಯ, ವಿಜ್ಞಾನ ಸಾಹಿತ್ಯ, ವೈಚಾರಿಕ ಪುಸ್ತಕ ವಚನ ಸಾಹಿತ್ಯದ ವಿಮರ್ಶೆ ಹೀಗೆ ಹತ್ತು ಬಗೆಯ ವಿವಿಧ ಸಾಹಿತ್ಯ ಕೃಷಿಯಲ್ಲಿ ತೊಡಗಿರುವ ಡಾ ಶಶಿಕಾಂತ ಪಟ್ಟಣ ಅವರ ಸದ್ದಿಲ್ಲದೇ ಎದ್ದು ಹೋದೆ ಎಂಬ ಕವನ ಸಂಕಲನ ಪ್ರಕಟನಗೊಳ್ಳುತ್ತಿರುವುದು

ಅತ್ಯಂತ ಸಂತಸದ ವಿಷಯ . ಇವರು ಈಗಾಗಲೇ ಹನ್ನೊಂದು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ . ವಚನ ಅಧ್ಯಯನ ವೇದಿಕೆ ಮೂಲಕ ಪ್ರತಿ ಶನಿವಾರ ಮತ್ತು ರವಿವಾರ ಶರಣರ ವಿಚಾರ ಧಾರೆಗಳನ್ನು ಗೂಗಲ್ ಮೀಟನ ನಲ್ಲಿ ಸಾಹಿತಿಯ ಹೆಸರಾಂತ ಚಿಂತಕರಿಂದ ಕಳೆದ ಮೂರು ವರ್ಷಗಳಿಂದ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿಉಪನ್ಯಾಸಗಳನ್ನು ಸಂಘಟಿಸಿ ವಚನ ಚಳುವಳಿಯನ್ನು ಪ್ರಚುರ ಪಡಿಸುತ್ತಿದ್ದಾರೆ.
ಇವರು ಬುದ್ಧ ಬಸವ ಅಂಬೇಡ್ಕರ ಡಾ ರಾಮಮನೋಹರ ಲೋಹಿಯಾ, ಜಯಪ್ರಕಾಶ ನಾರಾಯಣ ಅವರ ಸಮಾಜವಾದ ತತ್ವ ಸಿದ್ಧಾಂತಗಳಿಂದ ಪ್ರಭಾವಿತರಾಗಿದ್ದನ್ನು ಇವರ ಸಾಹಿತ್ಯ ಕಾವ್ಯ ಕೃತಿಯಲ್ಲಿ ಕಾಣುತೇವೆ . ಭರವಸೆಯ ಭಾವ ಕವಿ ಇವರಿಗೆ ಉಜ್ವಲ ಭವಿಷ್ಯವಿದೆ .ಇವರ ಇನ್ನೂ ಹಲವಾರು ಸಾಹಿತ್ಯ ವೈದ್ಯಕೀಯ
ವೈಜ್ಞಾನಿಕ ಕೃತಿಗಳು ಪ್ರಕಟಗೊಳ್ಳಲಿ ಎಂದು ಹಾರೈಸುತ್ತೇವೆ .


ಡಾ ಶಶಿಕಾಂತ ಪಟ್ಟಣ ರಾಮದುರ್ಗ ಕವಿತಗಳು

ಪ್ರೇಮಿಯೊಬ್ಬನಿರಬೇಕು

ಪ್ರೇಮಿಯೊಬ್ಬನಿರಬೇಕು
ಆಗಾಗ ನೆನಪಿಸಿಕೊಳ್ಳಲು
ಒಳಗಿನ ಕೋಪ ಹೊರ ಹಾಕಲು
ಸುಮ್ಮಸುಮ್ಮನೆ ಸಿಡುಕಲು
ತನಗಿಷ್ಟವೆನ್ನಿಸಿದ್ದನ್ನು ಹುಡುಕಿ ಹುಡುಕಿ ತೆಗೆದಿಡಲು..

ಪ್ರೇಮಿಯೊಬ್ಬನಿರಬೇಕು
ಸರಿದುಹೋಗುತ್ತಿರುವ ಯೌವನವನ್ನು
ಮನಸಾರೆ ಸವಿಯಲು
ಕನಸಿನಲ್ಲಿ ಬಂದು ಕಚಗುಳಿಯಿಟ್ಟು
ನಿದ್ದೆಯಲ್ಲೇ ಮುದ್ದಾದ ನಗುವರಳಿಸಲು

ಪ್ರೇಮಿಯೊಬ್ಬನಿರಲೇಬೇಕು
ಆಗಾಗ ಕಂಬನಿಯುಕ್ಕಿಸುವ
ವಿರಹವನ್ನಾಸ್ವಾದಿಸಲು
ಸಣ್ಣದೊಂದು ನೋವಿಗೆ ಅಕ್ಕರೆಯುಕ್ಕಿಸುತ್ತಾ
ಸಾಂತ್ವಾನ ತುಂಬಿ ಎದೆಗಪ್ಪಲು…..
ಪ್ರೇಮಿಯೊಬ್ಬನಿರಬೇಕು

ಕಳೆದು ಹೋದ ಕನಸು
ಬತ್ತಿದ ಭಾವವ
ಮತ್ತೆ ಚಿಲುಮೆಯ
ಹುಡುಕಿ
ನಗೆ ಸಂಭ್ರಮದ ತೆರೆ
ಎಳೆಯಲು
ಪ್ರೇಮಿಯೊಬ್ಬನಿರಬೇಕು

ಯಾರಿಲ್ಲದಾಗ ಬಂದು
ಪಕ್ಕದಲಿ ಕುಳಿತು
ಮೌನಕ್ಕೆ ಶರಣಾದ ನನ್ನ
ಕೈ ಹಿಸುಕಿ ಭದ್ರತೆಯ ನೀಡಿ
ನನ್ನ ತಲೆಗೆ ತನ್ನ ಭುಜ ಕೊಡಲು
ಪ್ರೇಮಿಯೊಬ್ಬನಿರಬೇಕು


ಇದ್ದು ಬಿಡು

ಇದ್ದು ಬಿಡು
ನಿನ್ನಿಚ್ಚೆಯಂತೆ
ಸದ್ದು ಗದ್ದಲವಿಲ್ಲದೆ
ಮೊದಲಿನಂತೆ
ಮತ್ತೆ ಅಪರಿಚಿತರಾಗಿ
ಹಳೆಯ ಗೆಳೆತನದ ಪಾತ್ರ
ನಕ್ಕು ನೆನಪಿನಲಿ
ಇದ್ದು ಬಿಡೋಣ ಮೌನದಲಿ

ಕಾವ್ಯದಲ್ಲಿ ಭಾವದಲಿ
ನೀನಿದ್ದೆ ಗೆಳತಿ
ಬರಿದಾದವು ಭಾವ
ಕರಗಿದವು ಕನಸುಗಳು
ಈಗ ನಾನು ಒಬ್ಬ
ಅಲೆಮಾರಿ ಅನಾಮಿಕ

ಇದ್ದು ಬಿಡು ನಿನ್ನಿಚ್ಚೆಯಂತೇ
ಬಳಲಿದಿರು ಕೊರಗದಿರು
ಬಿಕ್ಕದಿರು ನೋವಿನಲ್ಲಿ
ಸೊರಗದಿರು ಹಳೆಯ
ನೆನಪಿನಲಿ
ಭೇಟೆಯಾಡುವ ಕಳೆದ ಕ್ಷಣಗಳು
ವಿದಾಯ ಹೇಳುತ
ಕಾಮನೆಗೆ ಇದ್ದು ಬಿಡು
ಇಲ್ಲದಂತೆ ಮೌನವಾಗಿ

——

ಅರಳಿ ನಿಲ್ಲಲಿ

ಅರಳಿ ನಿಲ್ಲಲಿ
ಮಧುರ ಸ್ನೇಹ
ನಿನ್ನ ತನುವಿನ
ತೋಟದಲ್ಲಿ

ಪ್ರೀತಿ ತವರು
ನಿನ್ನ ನಗೆಯು
ಸುತ್ತ ಸೂಸುವ
ಪರಿಮಳ

ಕಡಲ ಮೇಲಿನ
ಬಿರಿವ ಪುಷ್ಪ
ಚಂದ್ರ ಚೆಲುವಿನ
ಚೇತನ

ನೂರು ವರುಷ
ಬಾಳಿ ಬದುಕು
ಇರಲಿ ನೆಮ್ಮದಿ
ಪಯಣವು

ಭಾವ ತೋರಣ
ಪ್ರೇಮ ಪೂಜೆ
ನಿನಗೆ ಎಡೆಯು
ನನ್ನ ಕವನವು


10 thoughts on “ತಿಂಗಳ ಕವಿ-ಡಾ ಶಶಿಕಾಂತ ಪಟ್ಟಣ ರಾಮದುರ್ಗ

  1. ಹೊಸ ಕಾವ್ಯಗಳ ಮನ್ವಂತರ ಉತ್ತಮ ಶೈಲಿಯ ಕವನಗಳು

  2. ಅತಿ ಸುಂದರ್ ಕಲ್ಪನೆಗಳಲ್ಲಿ ಬರೆದ ನಿಮ್ಮ ಪ್ರತಿಯೊಂದು ಕವನಗಳು ಮನಮೆಚ್ಚುವಂತಿವೆ. ಇನ್ನು ಹೆಚ್ಚಿನ ಅಂದ ಚಂದವಾದ ಕವನಗಳು ಹೊರಬರಲಿ ಸರ್ ಅಭಿನಂದನೆಗಳು ತಮಗೆ

  3. All poems are very meaningful with beautiful thoughtscongratulations

  4. ನಿಮ್ಮ ಮೂರು ಕವನಗಳು ಶಬ್ದಗಳ ಮೀರಿದ ಅನುಭಾವ ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಿರ

  5. ಅತ್ಯುತ್ತಮ ಸುಂದರ ಅಭಿವ್ಯಕ್ತಿ ಕವನಗಳು

Leave a Reply

Back To Top