ಕಾವ್ಯ ಸಂಗಾತಿ
ಚಂದಕಚರ್ಲ ರಮೇಶಬಾಬು
ಮುಸುಕು ಬೇಕೇ ಬೇಕು
ಸತ್ಯಸಂಧನಾಗಿರು
ಸತ್ಯ ಎಂದಿಗೂ ಅಮರ
ನಾನೆಂದಿಗೂ ಅದರ ಪರ
ಜಗತ್ತನ್ನು ಮೆಚ್ಚಿಸಲು ಮುಸುಕೇಕೆ
ಚಂದ ಕಾಣಬೇಕೆನ್ನುವ ಸೋಗೇಕೆ
ಎನ್ನುವ ಒಳದನಿ
ಗೆ
ವಾಸ್ತವಕ್ಕೆ ಇಳಿ
ಜಗತ್ತಿನ ಗತ್ತೇನು ತಿಳಿ
ಮುಸುಕಿಲ್ಲದಿದ್ದರೆ
ಮುಚ್ಚು ಮರೆ ಇಲ್ಲ
ಚರ್ಮದ ಮುಸುಕಿಲ್ಲದ
ದೇಹ ನೋಡಲಾದೀತೇ
ಓಜೋನಿನ ಮುಸುಕಿಲ್ಲದಿರೆ
ಜೀವರಾಶಿ ಉಳಿದೀತೇ
ನಗ್ನತೆ ಕೊನೆಯ ಸತ್ಯ ಆದರೂ
ಇದ್ದಷ್ಟು ದಿನ ಬೆತ್ತಲೆ ಇರಲಾದೀತೇ
ಅಪ್ಪಟ ಸತ್ಯವೇ ಹೇಳಿದರೇ
ಸಪ್ಪೆ ಅನ್ನ ಊಟವೇ ಗತಿ
ಜಗತ್ತು ನಿನಗೆ ಕಾಣುವಷ್ಟು
ನೀನಿರುವೆ ಎನಿಸುವಷ್ಟು
ನಿಯತ್ತಿನದಲ್ಲ ಗೆಳೆಯಾ
ಮುಖವಾಡ ಧರಿಸು
ಮುಸುಕಿನಿಂದ ಮುಚ್ಚು
ಎನ್ನುತ್ತದೆ ಒದೆತಿಂದ ಒಡಲು