ಡಾ ಸಾವಿತ್ರಿ ಮ ಕಮಲಾಪೂರ ಕವಿತೆ-ದುಂಡು ಮಲ್ಲಿಗೆ

ಕಾವ್ಯ ಸಂಗಾತಿ

ಡಾ ಸಾವಿತ್ರಿ ಮ ಕಮಲಾಪೂರ

ದುಂಡು ಮಲ್ಲಿಗೆ

ಅದೆಷ್ಟೋ ಮನವ ಸೆಳೆದೆ ನೀ
ಮಲ್ಲಿಗೆ ಇರುಳೆನ್ನದೇ ಹಗಲೆನ್ನದೇ
ಬಸಿರ ಬೇಗೆಯಂತೆ ಬಸವಳಿದ
ಜೀವಕೆ ಬೇಸರ ನೀ ತಂದೆ
ಅದೆಷ್ಟೋ ಮನಗಳು ನಿನ್ನ ನಗೆಯ
ಕಂಪು ಸುವಾಸನೆಗೆ ಮನ ಅರಳಿ
ನಕ್ಕು ನಡುನೀರಿನಲ್ಲಿಯೇ
ನೀ ಮುಳುಗಿಸಿ ಬಿಟ್ಟೆ
ಅಳುವ ಕಂದನ ಅಳು
ಮರೆತು ಸಾಗಿದೆ
ಬಣ್ಣ ಬಣ್ಣದ ಚಿತ್ತಾರ ದ
ಚಿಟ್ಟೆಗಳ ಸಿರಿ ಮುಡಿಗೆ
ಅಲಂಕೃತಳಾಗಿ ನೀ ಮೆರೆದೆ
ನಿನ್ನ ಆ ಮೆರವಣಿಗೆಯಲ್ಲಿ
ಕುಣಿದು ಕುಪ್ಪಳಿಸಿದವರೆಷ್ಟೋ
ನಾ ಕಾಣೇ ಮಲ್ಲಿಗೆ
ಮಧುರ ಭಾವಕೆ ಮುಡಿಸಿ
ನಲಿಸುವೆ ನಿನ್ನದೇ
ಕಂಪು ಸುವಾಸನೆಯಲಿ
ಕಳ್ಳ ಕಾಕರ ದೃಷ್ಟಿಪಥ

ಹಾದಿ ಬೀದಿಯಲಿ ಬೆಳೆದು
ಕಂಡರೆ ಸಾಕು ಸಾಕಿದ ಒಡತಿಯ
ಕಣ್ಣುಗಳ ತಪ್ಪಿಸಿ ಬಿಡಿಸಿಕೊಂಡು ಹೋಗುವರು .ನಿನ್ನ ಕಂಪು ಸುವಾಸನೆಗೆ
ನಾಚಿ ಬಳಿ ಬಂದು
ತಬ್ಬಿಕೊಳ್ಳುವರು ಅನೇಕ ಸ್ನೇಹ
ಅಹಂಮಿಕೆಯಲಿ ತೆಗಳಬೇಡ
ನಿನ್ನಂತೆ ನಾನಿಲ್ಲ ಮಲ್ಲಿಗೆ
ಅದೆಷ್ಟೋ ಸಾರಿ ನಿನ್ನ ಗಮ್ಮನೆಯ
ಸೊಗಸಿನಲಿ ನನ್ನ ನಾಸಿಕ ವನು
ಸೆಳೆದೆ ಅದ್ಹೇಗೆ ನಾ ನಿನ್ನ ಸರಿಸಮಾನಳು
ನಾವಿಬ್ಬರೂ ಬಳ್ಳಿಗಳು
ಕಾಲುಗಳಿಗೆ ತೊಡಕು
ಕೆಸರಿನಲ್ಲಿ ಹುಟ್ಟಿ ಕೆಸರಿನಲ್ಲಿ
ಬೆಳೆದರೂ ನನ್ನ ಮೈ
ಕೆಸರಾಗದು ಅಲ್ಲವೇ ?
ಹೆಸರಿಗೆ ಹೆಸರಾಗಿ ಹೊಳೆಯುವೆ
ಕೊನೆಯವರೆಗೆ ದೇವರ ಪೂಜೆಗೆ
ಸಾಕ್ಷಿ ನಾನೇ ಆದೆ ಮಲ್ಲಿಗೆ
ಅಪರೂಪ ನನ್ನನ್ನು ನೋಡಲು
ಆ ಬ್ರಹ್ಮನ ರಾಣಿಯು
ನಾನಾದೆ ಮಲ್ಲಿಗೆ
ಏನು ಕೊಟ್ಟೆ ನೀನು ಜನರಿಗೆ
ನೋವು ನಿರಾಸೆ ನಿರ್ಲಿಪ್ತತೆ
ಅಳಿಸಿ ಹಾಕು ಅಳಿಸಬೇಡ
ಸೃಷ್ಟಿಕರ್ತ ಬ್ರಹ್ಮನ ರಾಣಿ
ಸರಸ್ವತಿ ಶ್ರೀಕಮಲದಲ್ಲಿ
ಆಸೀನಳು ನಾನು ಕಮಲೆ
ಶ್ರೀ ಕಮಲೆ ಅಪರೂಪದ
ಸ್ನೇಹ ಅಲ್ಲವೇ ನಮ್ಮದು
ಭಗವಂತನ ಶ್ರೀ ಪಾದಕ್ಕೆ
ಅರ್ಪಿತರಾದರೂ ನಾನು
ಶ್ರೀ ಕಮಲೆ ಕೆಸರು ತಾಗದ ಶ್ರೀಕಮಲೆ


ಡಾ ಸಾವಿತ್ರಿ ಮ ಕಮಲಾಪೂರ

Leave a Reply

Back To Top