ಎ.ಎನ್.ರಮೇಶ್. ಗುಬ್ಬಿ.ಪುಟ್ಟ ಕವಿತೆಗಳು

ಕಾವ್ಯ ಸಂಗಾತಿ

ಎ.ಎನ್.ರಮೇಶ್. ಗುಬ್ಬಿ.

ಪುಟ್ಟ ಕವಿತೆಗಳು

ಕಾರಣ..!

ವೈದ್ಯರು ಅವನನ್ನು ಪರಿಶೀಲಿಸುತ
ಸೋಜಿಗದಿ ಹೌಹಾರಿ ನುಡಿದರು..
“ನಿಮಗೆ ಇದೇನು ಇದ್ದಕ್ಕಿದಂತೆ
ಇಷ್ಟೊಂದು ಮಧುಮೇಹ ಹೆಚ್ಚಾಗಿದೆ!”
ಪಕ್ಕದಲ್ಲೇ ಇದ್ದ ಅವನ ಮನದನ್ನೆ
ಮೆಲುನಗುತ ತುಟಿ ಸವರಿಕೊಂಡಳ

  1. ಅನ್ಯೋನತೆ ಮರ್ಮ.!

ಅಕ್ಕಪಕ್ಕದವರು ಮಹದಚ್ಚರಿಯಲಿ
ಅಲಮೇಲಮ್ಮನವರ ಕೇಳಿದರು..
“ಅಬ್ಬಾ ಒಂದೇ ಒಂದು ದಿನವೂ
ನಿಮ್ಮಯ ಮನೆಯಿಂದ ಕಲಹ
ಕೂಗಾಟಗಳ ಸದ್ದು ಕೇಳುವುದಿಲ್ಲ
ನಿಮ್ಮ ಅನ್ಯೋನತೆಯ ಗುಟ್ಟೇನು.?”

ಅಲಮೇಲಮ್ಮನವರು ಮೆಲ್ಲನೆ
ನಗುತ ರಹಸ್ಯ ಅರುಹಿದರು..
“ಮನೆಯ ಟಿ.ವಿ. ರಿಮೋಟಿಗೆ
ಅವರೆಂದೂ ಕೈ ಹಾಕುವುದಿಲ್ಲ
ಅವರ ಮೊಬೈಲು ಫೋನಿಗೆ
ನಾನೆಂದೂ ಕಣ್ಣು ಹಾಕುವುದಿಲ್ಲ.!”

ಬಡಪಾಯಿ..!

ಅವನೆದುರು ಮಾತೆ ಮತ್ತು ಮಡದಿ
ನಿಂತು ಒಕ್ಕೊರಲಿನಿಂದ ಘೋಷಿಸಿದರು..
“ಕಿತ್ತಾಡುವುದಿಲ್ಲ ನಾವಿನ್ನು ಪರಸ್ಪರ
ಹಂಚಿಕೆ ಮಾಡಿಕೊಂಡಿಹೆವು ಅಧಿಕಾರ
ಇಬ್ಬರದು ಆರಾರು ತಿಂಗಳ ಕಾರುಬಾರ”

ತಲೆಯಾಡಿಸುತ್ತ ಅವನು ವಿನಂತಿಸಿದ
“ಏನಾದರೂ ಮಾಡಿಕೊಳ್ಳಿ ನಿರ್ಧಾರ
ಬರದಿರಲಿ ಮನೆಯ ಬೊಕ್ಕಸಕ್ಕೆ ಬರ
ತರಬೇಡಿ ನನ್ನಯಾ ಎರಡುಹೊತ್ತಿನ
ಊಟಕ್ಕೆ ಎಂದೆಂದೂ ಸಂಚಕಾರ.!”


    ಎ.ಎನ್.ರಮೇಶ್. ಗುಬ್ಬಿ.

    Leave a Reply

    Back To Top