ಹಮೀದಾ ಬೇಗಂ ದೇಸಾಯಿ-ಗಜಲ್

ಕಾವ್ಯ ಸಂಗಾತಿ

ಹಮೀದಾ ಬೇಗಂ ದೇಸಾಯಿ

ಗಜಲ್

ನಂಬಿದ ಒಲವಿನೊರತೆ ಮರೀಚಿಕೆಯಂತಾಯಿತು ವಿಧಿಯೇ
ನಳನಳಿಸಿದ ಹಸಿರೆಲ್ಲ ತರಗಿನಂತಾಯಿತು ವಿಧಿಯೇ

ತಲೆದೂಗುವ ಪೈರೆಲ್ಲ ಮುರುಟಿ ಒಣಗಿತೇಕೆ
ಹದವಾದ ನೆಲವೆಲ್ಲ ಬಿರಿದಂತಾಯಿತು ವಿಧಿಯೇ

ಬಾನಲಿ ಹಾರಾಡುತಿದೆ ಸಂತಸದಿ ಹಕ್ಕಿಯೊಂದು
ಬೆಳ್ಮುಗಿಲು ಸರಿದು ಕಾರ್ಮೋಡ ಕವಿದಂತಾಯಿತು ವಿಧಿಯೇ

ಚಂದಿರನು ಹೊದಿಸಿಹನು ಬೆಳದಿಂಗಳ ಚಾದರ
ಮೇಘವದು ಮುಸುಕಿ ಮಂಕಾದಂತಾಯಿತು ವಿಧಿಯೇ

ಮೊಗ್ಗುಗಳು ಏಕೋ ಅರಳುತಿಲ್ಲ ಬೇಗಂ
ಪ್ರೀತಿಯು ಗಗನ ಕುಸುಮದಂತಾಯಿತು ವಿಧಿಯೇ


One thought on “ಹಮೀದಾ ಬೇಗಂ ದೇಸಾಯಿ-ಗಜಲ್

  1. ಚಿತ್ರಕ್ಕೆ ಪೂರಕವಾದ ಗಝಲ್ ಅರ್ಥಪೂರ್ಣವಾಗಿ ಮೂಡಿಬಂದಿದೆ.

Leave a Reply

Back To Top