ಕಾವ್ಯ ಸಂಗಾತಿ
ರಾಹುಲ್ ಸರೋದೆ
ಎನಾದರು ಕೊಡಿ ?
ಸ್ವಾಮ್ಯಾರಾsss ಊಟಮಾಡಿ
ಮೂರು ದಿನಾತು
ಬೇಡಿ ಕಾಡಿದೆ
ಅವರಿವರ
ಒಂದು ತುತ್ತು ಅನ್ನ
ಸಿಗದಾತು…..
ಎನಾದರು ಕೊಡಿ ?
ಬಡಪಾಯಿಯ ಹೊಟ್ಟೆಗೆ.
ಎದುರು ಬೀದಿಯ ದೇಶಪಾಂಡೆಯವರ
ಕೇಳಿದೆ
ಹಳಸಿದ ಅನ್ನ ಎಸೆದರು
ತಿನ್ನುವಾ…ಅಂತಾ
ಕೈ ಬಾಯಿಗೆ ಹೋಗುತ್ತಲೆ ಬೀದಿನಾಯಿ ಬಂದು
ಬಾಯಾಕಿತು
ತುತ್ತು ಅನ್ನ ಮಣ್ಣು ಪಾಲು
ಮತ್ತೊಂದು ಅಗಳು ನಾಯಿ ಪಾಲು
ಎನಾದರು ಕೊಡಿ
ಹಸಿದ ಜೀವಕೆ.
ಹಸಿದ ಕಂದಮ್ಮಗಳು
ಗುಡಿಸಲಲ್ಲಿ ಚಿರುಗುಟ್ಟುತ್ತಿವೆ
ರೋಗದಲಿ ನರಳುವ ಪತ್ನಿ
ರೋಧಿಸುತ್ತಿದ್ದಾಳೆ
ಸ್ವಾಮ್ಯಾರssss
ನಿಮ್ಮ ದಮ್ಮಯ್ಯಾ ಅಂತಿನಿ
ಎನಾದರು ಕೊಡಿ ? ಹಸಿದ ಹೊಟ್ಟೆಯ
ಭಾರ ನಿಗಿಸಿ.
ದುಡಿಯೊಣವೆಂದರೆ
ರಟ್ಟೆಯಲಿ ಕಸುವಿಲ್ಲ.,
ಸಾಯೋಣವೆಂದರೆ,
ಈ ಪಾಪಿಗೆ ಬರದಾಗಿದೆ ಮರಣ.
ಹುಟ್ಟಿ ಕೆಟ್ಟೆನೋ…
ಬದುಕ ಮೂರಾಬಟ್ಟೆ.
ಮನೆಬಿಟ್ಟು ಮೂರು ದಿನವಾತು
ಹಸಿದ ಹೊಟ್ಟೆಗೆ ಎನಾದರು ಕೊಡಿ ಸ್ವಾಮ್ಯಾರಾssss
——————————
ರಾಹುಲ್ ಸರೋದೆ