ಕಾವ್ಯ ಸಂಗಾತಿ
ವೆಂಕಟ್ ಭಟ್ ಎಡನೀರು
ಹನಿಗಳು


ಮದ್ದು
ಮರೆವಿಗಾಗಿ ಮದ್ದು ತೆಗೆದುಕೊಳ್ಳಿ…..
ಎಂದು ನಾನು…
ದಿನ ಹೇಳಬೇಕು..??
ಪಾಲನೆ
ಚಿಕ್ಕವರಿದ್ದಾಗ ಮಕ್ಕಳು ಹೊರಗೆ ಹೋಗಬಾರದೆಂದು ಪಾಲಕರು ಬಾಗಿಲು ಹಾಕುತ್ತಾರೆ,
ಈಗ ಅವರಿಗೆ ಪ್ರಾಯವಾಗಿದೆ ನಾವು ಹಾಗೆ ಮಾಡುತ್ತೇವೆ.!!!??
ಪಂಚವಟಿ
ನಾಳೆ ಪಂಚವಟಿ ಪ್ರಸಂಗ, ಬಹಳ ಚೆನ್ನಾಗಿರುತ್ತದೆ ಬನ್ನಿ… ಹೋಗೋಣ ಎಂದರವರು..
ಹೇಗೆ ಹೇಳಲಿ ನಾನು ದಿನ ಶೂರ್ಪಣಕಿ ಜೊತೆ ಇರುತ್ತೇನೆಂದು…..!!!?
ಪ್ರಶ್ನೆ
ಇಂದು ವಿಶ್ವ…..
ಕಾವ್ಯ ದಿನ
ಯಾವ ಕಾವ್ಯ
ಎನ್ನುವುದೇ ನನ್ನಾಕೆಯ
ಪ್ರಶ್ನೆ?
ವೆಂಕಟ್ ಭಟ್ ಎಡನೀರು
