ಡಾ.ರೇಣುಕಾತಾಯಿ.ಸಂತಬಾ.ಕವಿತೆ-ನೀ ಇದ್ದರೆ…

ಕಾವ್ಯ ಸಂಗಾತಿ

ಡಾ.ರೇಣುಕಾತಾಯಿ.ಸಂತಬಾ

ನೀ ಇದ್ದರೆ…

ನೀ ಇದ್ದರೆ ಎದುರಿಗೆ
ಕಣ್ಣ ತುಂಬಾ ನಿಂದೇ ಬಿಂಬ
ಹುಣ್ಣಿಮೆ ಚಂದ್ರನಿಗೆ
ನಿಂದೇ ಬೆಳಕಿನ ಚಿಂತೆ

ನೀ ಇದ್ದರೆ ಎದುರಿಗೆ
ಆವೇಗದ ಮಿಂಚಿನ ಸಂಚಾರ
ಮೋಡಗಳಿಗೆ ಪೀಕಲಾಟ
ಮಿಂಚು ಯಾರದ್ದೆಂದು

ನೀ ಇದ್ದರೆ ಎದುರಿಗೆ
ತೆರೆಗಳಂತೆ ಹಾತೊರೆತವು
ಕಡಲಿಗೆ ಕಳವಳವಾಗಿದೆ
ತೆರೆಗಳು ಯಾರದ್ದೆಂದು

ನೀ ಇದ್ದರೆ ಎದುರಿಗೆ
ಕವಿದಿದೆ ಕೆಂಪು ಕೆನ್ನೆಗೆಲ್ಲ
ಉದಯರವಿಗೆ ಸಂಕಟ
ಉಷೆ ಬಣ್ಣೇಕಿಲ್ಲಿ ಎಂದು

ನೀ ಇದ್ದರೆ ಎದುರಿಗೆ
ಕೇಶರಾಶಿಯಲಿ ಮಿನುಗು
ತಾರೆಗಳಿಗೆ ತಳಮಳ-

———

ಡಾ.ರೇಣುಕಾತಾಯಿ.ಸಂತಬಾ

Leave a Reply

Back To Top