ಅಂಕಣ ಸಂಗಾತಿ
ಒಲವ ಧಾರೆ.
ರಮೇಶ ಸಿ ಬನ್ನಿಕೊಪ್ಪ
ನೆಲ ಮೂಲದ ಒಲವ ವರತೆಯ ಸಿಂಚನ…
ನೆಲ ಮೂಲದ ಒಲವ ವರತೆಯ ಸಿಂಚನ…
ನನ್ನ ಸ್ನೇಹಿತ ಶಿವರಾಜ ಕುಮಾರ್ ಅವರ ಸ್ನೇಹಿತ ಅಮರೇಶ ತೊಡಕಿಯವರ ಮದುವೆಯ ನಿಮಿತ್ಯ ತುರರ್ವಿಹಾಳಗೆ ಹೋದ ಸಮಯದಲ್ಲಿ… ಕಂಡ ದೃಶ್ಯಗಳು…
ಕಾರಟಗಿ ತಾಲ್ಲೂಕ ಕೇಂದ್ರದಿಂದ ಸುಮಾರು ಹತ್ತು ಕಿ ಮೀ ನಂತರ ಅಂದರೆ ಬಸವಣ್ಯ ಕ್ಯಾಂಪ್ ದಿಂದ ಜಾಲಿಹಾಳ ನಂತರ ವಸಹಾತುವಿನಂತಿರುವ ಹಚ್ಚ ಹಸಿರಿನ ನೆಲ್ಲು ಗದ್ದೆಗಳು ಮನಸೂರೆಗೊಂಡವು.
ಈ ಪ್ರದೇಶವು ತುಂಗಭದ್ರಾ ನದಿಯಿಂದ ನೀರಾವರಿಯಾಗಿದೆ.
ಆದರೆ…ಇಲ್ಲೊಂದು ವಿಶೇಷವಾದ ಸಂಗತಿಯಿದೆ..
ಅದೆನಂದರೇ ಬಹುತೇಕ ಆಂಧ್ರಪ್ರದೇಶದಿಂದ ವಲಸೆ ಬಂದವರೇ ಭೂಮಿ ಹಿಡಿದು ಕೃಷಿ ಮಾಡುತ್ತಿರುವುದು ವಿಪರ್ಯಾಸ..! ಅವರ ಮನೆ ಹೊಲ ಗದ್ದೆಗಳಲ್ಲಿ ನಮ್ಮ ಕನ್ನಡಿಗರು ಹಾಗೂ ಕೆಲವು ಗದ್ವಾಲ್ ನಿಂದ ಬಂದ ಕೃಷಿ ಕೂಲಿ ಕಾರ್ಮಿಕರು ಕೆಲಸ ಮಾಡುತ್ತಾರೆ. ಪ್ರತಿಯೊಬ್ಬ ರೈತರು ತಮ್ಮ ಹೊಲಗಳಲ್ಲಿ ವೈಜ್ಞಾನಿಕವಾಗಿ ಹೊಕ್ರಾಣಿ ಅಂದರೆ ಹೊಂಡಗಳು ಇಂದಿನ ಕೃಷಿ ಹೊಂಡಗಳಿಗಿಂತ ದೊಡ್ಡದಾಗಿವೆ. ರೈತರು ತಮ್ಮ ತಮ್ಮ ಹೊಲಗಳಲ್ಲಿ ಕಡ್ಡಾಯವಾಗಿ ಹೊಕ್ರಾಣಿ ಮಾಡಿಕೊಂಡಿರುವುದು ಅವರ ವೈಜ್ಞಾನಿಕ ಹಾಗೂ ಪ್ರಗತಿಪರ ಕೃಷಿಗೆ ಸಾಕ್ಷಿಯಾಗಿದೆ.
ಸಿಂಧನೂರು ತಾಲುಕು, ಮಸ್ಕಿ ತಾಲೂಕಿನ ಬಹುತೇಕ ಹಳ್ಳಿಗಳು, ಕ್ಯಾಂಪ್ ಗಳಲ್ಲಿಯ ಗದ್ದೆಗಳಲ್ಲಿ ಈ ರೀತಿಯ ಹೊಕ್ರಾಣಿಗಳನ್ನು ಕಾಣಬಹುದಾಗಿದೆ.
ಜಾಲಿಹಾಳ, ಜಾಲಿಹಾಳ ಕ್ಯಾಂಪ್, ಬಸಾಪೂರ, ಕೆ. ಹೊಸಳ್ಳಿ, ಜಂಭುನಾಥನಹಳ್ಳಿ – ಹನುಮಾಪೂರ, ಹೊಸಳ್ಳಿ ಇ ಜೆ, ಗಾಂಧೀನಗರ, ತಾಯಮ್ಮನ ಕ್ಯಾಂಪ್ ಇನ್ನೂ ಮುಂತಾದ ಊರುಗಳ ಪ್ರದೇಶದಲ್ಲಿ ಹೊಕ್ರಾಣಿಗಳನ್ನು ಕಾಣಬಹುದು.
ಹೊಕ್ರಾಣಿಗಳ ರಚನೆ : ಇಲ್ಲಿನ ಬಹುತೇಕ ಹೊಕ್ರಾಣಿಗಳು ಚೌಕಾಕರ ಇಲ್ಲವೇ ವೃತ್ತಾಕಾರದಿಂದ ಕೂಡಿದ್ದು, ಅದರ ಅಂಚಿನ ಸುತ್ತಲೂ ತೆಂಗಿನ ಮರಗಳು, ಮಾವು, ಬಾಳೆ ಇತ್ಯಾದಿ ಮರಗಳನ್ನು ನೆಡಿಸಿರುತ್ತಾರೆ. ಅಲ್ಲದೆ ಹುಲ್ಲಿನ ಜಾತಿಯ ಸಸ್ಯಗಳನ್ನು ಬೆಳೆಸಿರುತ್ತಾರೆ.
ಹೊಕ್ರಾಣಿಯಲ್ಲಿ ನೀರನ್ನು ತುಂಬಲು ಕಾಲುವೆಯ ನೀರು ಇಲ್ಲವೆ ಮಳೆಯ ನೀರನ್ನು ಬಳಸುತ್ತಾರೆ. ಈ ರೀತಿ ಹೊಕ್ರಾಣಿಯನ್ನು ತುಂಬುವುದರಿಂದ ಬೇಸಿಗೆ ಕಾಲದಲ್ಲಿ ದನಗಳಿಗೆ ಕುಡಿಯುವ ನೀರಿಗೆ ತೊಂದರೆಯಾಗುವುದಿಲ್ಲ ಅಲ್ಲದೇ ಭತ್ತದ ಬೆಳೆಗಳಿಗೆ ಕಾಲುವೆಯ ನೀರು ಕೊರತೆಯಾದಾಗ ಎರಡು ಮೂರು ಬಾರಿ ನೀರೂಣಿಸಲು ಅನೂಕೂಲವಾಗುತ್ತದೆ ಎಂದು ರೈತರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಹೈನುಗಾರಿಕೆ : ಆಂಧ್ರಪ್ರದೇಶದ ರೈತರ ಮನೆಗಳಲ್ಲಿ, ಗದ್ದೆಗಳಲ್ಲಿ ಬಹುತೇಕ ದನಗಳನ್ನು ಸಾಕುತ್ತಾರೆ. ಈ ಪ್ರದೇಶದಲ್ಲಿ ಹೊಕ್ರಾಣಿ ಪಕ್ಕದಲ್ಲಿ ದನಗಳನ್ನು ಸಾಕಲು ಸೆಡ್ಡುಗಳನ್ನು ನಿರ್ಮಿಸಿರುತ್ತಾರೆ. ಅದರಲ್ಲಿಯೇ ದನಗಳನ್ನು ಸಾಕುತ್ತಾರೆ. ಇವುಗಳನ್ನು ಅವರು “ದನದ ಪಾಕ” ಎಂದು ಕರೆಯಲಾಗುತ್ತದೆ. ಅಂದರೆ ನಮ್ಮಲ್ಲಿ ದನದ ಕೊಟ್ಟಿಗೆ ಎನ್ನುತ್ತೇವಲ್ಲ ಹಾಗೇ ಹೊಕ್ರಾಣಿಯ ಸುತ್ತಲೂ ಬೆಳೆದ ಹುಲ್ಲು, ಶೇಂಗಾ ಹಿಂಡಿ, ನೆಲ್ಲು ಹುಲ್ಲು ದನದ ಆಹಾರ. ಸುಮಾರು ಒಬ್ಬ ರೈತರು ಇಪ್ಪತ್ತರಿಂದ ನಲ್ವತ್ತು ಲೀಟರ ಹಾಲನ್ನು ಉತ್ಪಾದಿಸುತ್ತಾರೆ.
ಮೀನುಗಾರಿಕೆ..:
ಸುಮಾರು ನಾಲ್ಕುನೂರರಿಂದ ಐದುನೂರರಿಂದ ಹೊಕ್ರಾಣಿಗಳಿರುವುದು ವಲಸೆ ಆಂಧ್ರಪ್ರದೇಶದ ರೈತರ ಪ್ರಗತಿಪರತೆಯನ್ನು ತೋರಿಸುತ್ತದೆ. ನೀರಾವರಿ ಆರಂಭಿಕ ಸಮಯದಿಂದಲೂ ಹೊಕ್ರಾಣಿ ನಿರ್ಮಾಣ ಮಾಡಿರುವುದು ಶ್ಲಾಘನೀಯವಾಗಿದೆ.
ನೆಲಮೂಲದ ವಚನಕಾರನ ಭೇಟಿ.. : ಜ್ಞಾನ ಹಾಗೂ ಭಕ್ತಿಗೆ ಯಾವುದೇ ಜಾತಿ ಮತ ಪಂಥದ ಹಂಗಿಲ್ಲ. ನಮ್ಮ ನಾಡಿನಲ್ಲ ಅನುಭಾವಿಕ ವಚನಕಾರರು, ತತ್ವಪದಕಾರರು, ದಾರ್ಶನಿಕರು ಆಗಿ ಹೋಗಿರುವ ಉದಾಹರಣೆಗಳು ಸಾಕಷ್ಟಿವೆ.
ಇಂತಹ ನೆಲಮೂಲದ ವಚನಕಾರರಾದ ತುರ್ವಿಹಾಳ ಪಟ್ಟಣದ ನಾಗಪ್ಪ ಹೂವಿನಬಾವಿಯವರು ನಿರರ್ಗಳವಾಗಿ ವಚನ ಸಾಹಿತ್ಯ ಮತ್ತು ವಚನಕಾರರ ಕುರಿತು ಮಾತನಾಡುತ್ತಾರೆ.
ವಚನಗಳ ಮೂಲಕ ಬದುಕಿನ ಜೀವನಾನುಭವಗಳನ್ನು ಕಟ್ಟಿಕೊಡುತ್ತಾರೆ. ಸುಮಾರು ನೂರರಷ್ಟು ವಚನಗಳನ್ನು ಬರೆದಿದ್ದಾರೆ.
ಇಂತಹ ಹಲವಾರು ನೆಲ ಮೂಲದ ಪ್ರೀತಿಯ ವಚನಕಾರರು, ಕೃಷಿಕರು ಬದುಕನ್ನು ಕಟ್ಟಿಕೊಂಡು ತಾವು ಉಣ್ಣುವ ಅನ್ನವನ್ನು ಎಲ್ಲರಿಗೂ ಹಂಚುವ ದಾಸೋಹ ಶ್ಲಾಘನೀಯ. ಅಲ್ಲದೆ ಬಾಳು, ಬಾಳಿನ ಒರತೆ, ಪ್ರೀತಿಯ ಜ್ಞಾನ ಎಲ್ಲವನ್ನೂ ಹಂಚುತ್ತಾ ಹೋರಡುವ ಸಂತರು ನೆಲ ಮೂಲದ ಪ್ರೇತಿಯ ಒರತೆಗೆ ಕೊನೆಯಲ್ಲ…
ಅಂತಹ ನೆಲ ಮೂಲದ ಪ್ರೀತಿಯನ್ನು ನಮ್ಮೊಳಗೆ ನಾವು ಹುಡಕಬೇಕಷ್ಟೇ…
ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ಜೀವಸೂಚಿ :
ಹೆಸರು : ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ವೃತ್ತಿ : ಶಿಕ್ಷಕರು
ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಹಿರೇಜಂತಕಲ್ –ಗಂಗಾವತಿ
ವಿದ್ಯಾಭ್ಯಾಸ : ಎಮ್ ಎ ಬಿಇಡಿ
ಹವ್ಯಾಸ : ಓದು, ಪ್ರವಾಸದ ತಿರುಗಾಟ, ಅಂಕಣ ಬರಹ, ಕಾವ್ಯ, ಗದ್ಯ, ಚುಟುಕು ಬರಹಗಳು ಇತ್ಯಾದಿ
ಅಂಕಣಗಳು ಬರಹಗಳು :
ವಿನಯವಾಣಿ ಪತ್ರಿಕೆಯಲ್ಲಿ
ಶೈಕ್ಷಣಿಕ ಸ್ಪಂದನ
ಯುವಸ್ಪಂದನ
ವಿಜಯ ವಿಕ್ರಾಂತ ಪತ್ರಿಕೆಯಲ್ಲಿ
ಒಲವಧಾರೆ
ರೆಡ್ಡಿಬಳಗ ಮಾಸಿಕದಲ್ಲಿ
ಚಿಂತನ ಬರಹ
ವಿವಿಧ ಪತ್ರಿಕೆಯಲ್ಲಿ
ಪುಸ್ತಕ ಸ್ಪಂದನ (ಪುಸ್ತಕಾವಲೋಕನ ಬರಹಗಳು)
ಪ್ರಕಟಿತ ಕೃತಿಗಳು:
ಹೆಜ್ಜೆ ಮೂಡದ ಹಾದಿ
(ಕವನ ಸಂಕಲನ)
ನೆಲ ತಬ್ಬಿದ ಮುಗಿಲು
(ಚುಟುಕು ಸಂಕಲನ)
ಕಾಣೆಯಾದ ನಗುವ ಚಂದಿರ
(ಕವನ ಸಂಕಲನ)
ಭಾರತದಲ್ಲಿ ಸ್ವಾತಂತ್ರ‍್ಯ ಹೋರಾಟದಲ್ಲಿ ಗಂಗಾವತಿ
(ಕರ್ನಾಟಕ ಸಾಹಿತ್ಯ ಆಕಾಡೆಮಿ ಪ್ರಕಟಿತ)
ಅಚ್ಚಿನಲ್ಲಿರುವ ಕೃತಿಗಳು :
ಚಿಟ್ಟೆಗೆಣೆದ ಬಟ್ಟೆ
(ಹಾಯ್ಕು ಸಂಕಲನ)
ಅನುದಿನ ಚಾಚಿದ ಬಿಂಬ
(ದ್ವೀಪದಿಗಳು)
ಶಿಕ್ಷಣವೆಂಬ ಹಾರೋ ಹಕ್ಕಿ
(ಶೈಕ್ಷಣಿಕ ಚಿಂತನಾ ಅಂಕಣ ಬರಹಗಳು)
ಹಾಫ್ ಚಹಾ
(ಬದುಕಿಗೆ ದಕ್ಕಿದ ಅರ್ಧ ಸತ್ಯಗಳು)
ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಕವನ ಲೇಖನಗಳ ಪ್ರಕಟ