ಡಾ ಸಾವಿತ್ರಿ ಮ ಕಮಲಾಪೂರ ಕವಿತೆ-ಕಾಡಬೇಡ ಗೆಳತಿ

ಕಾವ್ಯ ಸಂಗಾತಿ

ಡಾ ಸಾವಿತ್ರಿ ಮ ಕಮಲಾಪೂರ

ಕಾಡಬೇಡ ಗೆಳತಿ

ಅದೇಕೆ ಕಾಡುವೆ ಗೆಳತಿ
ನಿನ್ನರಮನೆಯ ಕದವ ತಟ್ಟಿ
ಖುಷಿ ಪಡುವ ಆಸೆ ನನಗಿಲ್ಲ
ನಗಿಸುವೆ ನಗದವರನ್ನು
ನೀನು ನಕ್ಕೆ ನನ್ನ ನೋಡಿ
ಅಂಧಕಾರ ಮುಳುಗಿದ ಜಗದಲಿ
ಜಾನರು ನಾವಾಗೋಣ ಬೇಡ
ಬೆಳಕಿನ ಗುಂಟ ತಿರುಗುವ
ಜೀವ ನನ್ನದಲ್ಲ
ನನ್ನ ಪುಟ್ಟ ಹೃದಯಕ್ಕೆ
ಹತ್ತಿರ ವಾದರ ಹತ್ತಿರ
ನಾನಿರುವೆ ನಲ್ಲೆ
ಇದಿರು ಕಾಯಲುಬೇಡ
ಜಡ ಜೀವದ ಬದುಕಲಿ
ಬಡಿದಾಡಿ ಹೊಡೆದಾಡಿ
ಇತಿಹಾಸ ಮರಳಿಸುವುದು ಬೇಡ
ನಕ್ಕಿದ್ದು ನನ್ನ ಮನ ಆದರೂ
ಎಲ್ಲರನು ಅಪ್ಪುವ ಹೃದಯ
ನನ್ನದು ಗೆಳತಿ
ರಕ್ಷಕ ಮೇಲಿರುವನು
ಮರೆತು ಸಾಗು
ದುಗುಡ ಮರೆತು
ಮತ್ತೆ ಬರುವ
ವಸಂತವನು
ನಗು ನಗುತ ಸ್ವಾಗತಿಸುವ
ಕಲೆ ಇರಲಿ…


ಡಾ ಸಾವಿತ್ರಿ ಮ ಕಮಲಾಪೂರ

Leave a Reply

Back To Top