ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಡಾ ಶಶಿಕಾಂತ ಪಟ್ಟಣ ರಾಮದುರ್ಗ

ತಡೆಯದಿರು

ಗೆಳತಿ
ತಡೆಯದಿರು ನನ್ನನ್ನು
ನಿನ್ನ ಹೃದಯದಲಿ
ಹೊಕ್ಕು ನನ್ನ ಹುಡುಕಲು

ತಡೆಯದಿರು ನನ್ನನ್ನು
ನಿನ್ನ ಮನದಾಳದಲ್ಲಿ
ಇಳಿದು ನಿನ್ನ ನೆನಪುಗಳ
ಶಬ್ದ ಅಕ್ಷರಕೆ ಜೀವ ತುಂಬಲು

ತಡೆಯದಿರು ಚೆಲುವೆ
ನಿನ್ನಂಗಳದಲಿ ನಾನು
ನೆಟ್ಟ ಮಾವಿನ ಮರಕೆ
ಪ್ರೀತಿಯ ನೀರೆರೆಯಲು

ತಡೆಯದಿರು ಸಖಿ
ನೀ ಕಂಡ ಕನಸುಗಳಿಗೆ
ಭದ್ರ ಕೋಟೆ ವಿಹಾರ
ಕಟ್ಟಿ ಕೊಡಲು

ತಡೆಯದಿರು ಗೆಳತಿ
ಹಸಿರು ಹುಲ್ಲಿನ ಮೇಲೆ
ಪೊದರಿನ ಕೋಗಿಲೆಗೆ ಮಧುರ
ಭಾವ ಮನ ಬಿಚ್ಚಿ ಹಾಡಲು

ತಡೆಯದಿರು ನನ್ನನ್ನು
ನಿನ್ನ ಜೊತೆಗೆ ಹೆಜ್ಜೆ ಹಾಕಿ
ಜೀವ ಪಯಣಕೆ
ಮುಕ್ತಿ ಕಾಣಲು


ಡಾ ಶಶಿಕಾಂತ ಪಟ್ಟಣ ರಾಮದುರ್ಗ

ಕವಿ ಪರಿಚಯ:

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ ಶ್ರೇಷ್ಠ ಔಷಧ ವಿಜ್ಞಾನಿ.35 ಕೃತಿಗಳು ಪ್ರಕಟ.13 ಕವನ ಸಂಕಲನ ಲೋಕಾರ್ಪಣೆ.ಗಾಂಧಿಗೊಂದು ಪತ್ರ ಇದಕ್ಕೆ ರಾಷ್ಟ್ರೀಯ ಡಾ ಡಿ ಎಸ್ ಕರ್ಕಿ ಸಾಹಿತ್ಯ ಪ್ರತಿಷ್ಟಾನದ ಸಾಹಿತ್ಯ ಪ್ರಶಸ್ತಿ 2022
ಡಾ ಎಂ ಎಂ ಕಲಬುರ್ಗಿ ಸಮಗ್ರ ಸಾಹಿತ್ಯ ಪ್ರಶಸ್ತಿ 2023 ಜನೆವರಿ


About The Author

Leave a Reply

You cannot copy content of this page

Scroll to Top