ಕಾವ್ಯ ಸಂಗಾತಿ
ಹನಿಗಳು
ಲಲಿತಾ ಪ್ರಭು ಅಂಗಡಿ
ಹಕ್ಕಿ
ರೆಕ್ಕೆ ಬಂದಮೇಲೆ ಹಕ್ಕಿ
ಪಕ್ಕನೆ ಹಾರಿ ಹೋಯಿತು
ಸೆರಗು ತೆಗೆದು ಸುಖ ಕೊಡುವ ರತಿ ಬಂದ ಮೇಲೆ
ಸೆರಗು ಮುಚ್ಚಿ ಹಾಲು ಕೊಟ್ಟ ತಾಯಿ ಸುಖವ ಮರೆಯಿತು.
ನತ್ತು.
ನಾ ಇಟ್ಟ ಮೂಗಿನ ನತ್ತು
ನನ್ನ ನಲ್ಲನ ಮನ ಸೆಳೆದಿತ್ತು
ಕಣ್ ಸನ್ನೆಯ ಅವನ ನೋಟಕೆ ಗಲ್ಲ ನಾಚಿ ನೀರಾಗಿತ್ತು
ಮೈಮನವೆಲ್ಲ ರಂಗೇರಿತ್ತು.
ಹೂಮಾಲೆ.
ತನ್ನನಿಯನಿಂದ ಅನುಭವಿಸಿದ ಯಾತನೆಯನು ಕತೆಯಾಗಿ ಹೆಣೆಯಬೇಕೆಂದ ನಲ್ಲೆ
ಕಣ್ಣೀರಿನ ಹನಿಗಳ ಒಂದೊಂದು ಮುತ್ತಿನಿಂದ ಪೋಣಿಸಿಬಿಟ್ಟಳು ಕವನಗಳ ಹೂಮಾಲೆ.
ಲಲಿತಾ ಪ್ರಭು ಅಂಗಡಿ