ಡಾ. ಪ್ರಿಯಂವದಾ ಮ ಹುಲಗಬಾಳಿಯವರ ಕವಿತೆ-ಸೋಲು ಗೆಲುವಿನ ಮಟ್ಟಿಲು

ಕಾವ್ಯ ಸಂಗಾತಿ

ಸೋಲು ಗೆಲುವಿನ ಮಟ್ಟಿಲು

ಡಾ. ಪ್ರಿಯಂವದಾ ಮ ಹುಲಗಬಾಳಿ

ಸಾವಿರ ಚಿಂತೆಗಳ ಸಂತೆಯಲಿ
ನಲುಗಿದೆ ನೋವುಗಳ ಮಡುವಲಿ
ನಿತ್ಯ ಮನಕೆ ನಿರಾಸೆ
ನಿರಂತರ ಅತಿಯಾಸೆ ||
ಬೇಕು ಬೇಕೆಂಬ ಬಯಕೆ
ಏನೂ ಸಾಕೆನಿಸಲಿಲ್ಲ ಮನಕೆ
ಕೈತಪ್ಪಿ ಹೋಯಿತಲ್ಲ ಕಾಲವು
ಹೆಕ್ಕಿ ತೆಗೆಯ ಬೇಕಿದೆ ಸಕಲವು||
ನಕ್ಕಿತು ನಕ್ಷತ್ರ ನಿಷೆಯ ನಡುವೆ
ಕಿರಣ ಹೊಳೆಯಿತು
ಉಷೆಯೊಡನೆ
ಬಾಳಬಾಂದಳದ ಅಂಚಿನಲಿ
ನವ ನವೀನ ಉತ್ಸಾಹದಲಿ||
ಸರ್ವೋದಯ ಹರಸಿ
ನಿರುತ್ಸಾಹ ನಿರಾಕರಿಸಿ
ಭರವಸೆಯ‌ ಸ್ವಿಕರಿಸಿ
ನಲುಗಿದ ಮೊಗ್ಗರಳಸಿ||
ಮೈಕೊಡವಿ ನಿಂತು
ಗೆಲ್ಲುವ ಛಲ ಹೊತ್ತು
ದಿಟ್ಟ ಹೆಜ್ಜೆಯನಿಟ್ಟೆ
ಕಂಡೆ ಆತ್ಮೋನ್ನತಿಯ ಬಟ್ಟೆ.||
ನಿಶ್ಚಲವಾಯಿತು ಎನಗೆ
ಭವ್ಯ ಬೆಳಕಿದೆ ನಮಗೆ
ಸೋಲು ಗೆಲುವಿನ ಮೆಟ್ಟಿಲು
ಭಕ್ತಿ ಭಗವಂತನ ತೊಟ್ಟಿಲು||


ಕವಿ ಪರಿಚಯ:

ಡಾ. ಪ್ರಿಯಂವದಾ ಮ ಹುಲಗಬಾಳಿ. ಅಣೆಪ್ಪನವರ. ಅಥಣಿ. ಕವನ ಸಂಕಲನ, ಕಥಾಸಂಕಲನಗಳಲ್ಲಿ ಬಿಡಿ ಕವನ,ಕಥೆ ಪ್ರಕಟ. ಸ್ಮರಣ ಸಂಚಿಕೆ ಹಾಗೂ ಅಭಿನಂದನಾ ಗ್ರಂಥಗಳಿಗೆ ಸಂಪಾದಕರಾಗಿ ಕಾರ್ಯ. ಪತ್ರಿಕೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಬರಹ ಪ್ರಕಟವಾಗಿವೆ.

Leave a Reply

Back To Top