ಕಾವ್ಯ ಸಂಗಾತಿ
ರಾಶೇ..
ಹೆಣ್ಣಾದರೇನು..
ಅದಕೊಂದು ದಿನವಿದೆ
ನಿಮ್ಮ ಸ್ವಾತಂತ್ರ್ಯಕ್ಕೂ ಬರವಿದೆ..
ಮತ್ತದೇ..ಹುಷಾರು ನೀನು
ಮೈಮೇಲೆ ಪ್ರಜ್ಞೆ ಇಲ್ಲವೇನು ..
ಇಷ್ಟೊತ್ತು ಬೇಕೇನು
ಬೇಗ ಕೆಲಸ ಮುಗಿಸಿ ಬರ ಬಾರದೇನು
ಹೆಚ್ಚು ಮಾತು ಬೇಡ
ನೀ ಹೆಣ್ಣೆಂಬುದ ಮರೆಯ ಬ್ಯಾಡ..
ನೀ ರಾಜಕಾರಣಿಯೇ
ಸಾಕು ನೀ ಅಲ್ಲಿ ಸಹಿ ಮಾಡಿ ಬಂದರೆ
ಅಡುಗೆ ಮನೇಲಿ ಹೋಗಿ ನೋಡಿಕೋ
ನಾನಿಲ್ಲಿ ಯಜಮಾನ ನೀ ತಿಳಿದುಕೋ..
ಎಲ್ಲಾ ಕ್ಷೇತ್ರದಲ್ಲೂ ನೀನಿರಬಹುದು
ಆದರೆ ಅದು ಆಟಕ್ಕುಂಟು ಲೆಕ್ಕಕ್ಕಿಲ್ಲ ಎನಬಹುದೇನೋ
ನಿನ್ನ ದಿನ ಇಂದಿಗಷ್ಟೇ ಸೀಮಿತ
ಎಂದಿದ್ದರೂ ನಮ್ಮದೇ ಬಹುಮತ..