ಅಂಕಣ ಸಂಗಾತಿ

ಅಮೃತ ವಾಹಿನಿಯೊಂದು

ಮೃತಾ ಮೆಹೆಂದಳೆ

ಅಮೃತ ವಾಹಿನಿಯೊಂದು

ದೇವನೇ ಸರಿದಾರಿಗೆ ದೀಪವಾಗಿರು

ಕಾನನ ಬರಲಿ ಕೊರಕಲೆ ಇರಲಿ
ಓಡುವ ನದಿಯು ಸಾಗುವ ಹಾಗೆ
ಹೂಬನವಿರಲಿ ಮರುಭೂಮಿ ಬರಲಿ
ನಿಲ್ಲದೆ ಗಾಳಿ ಬೀಸುವ ಹಾಗೆ.
.
ಹಾಗೇ ಅಲ್ಲವೇ, ಬದುಕಿನ ಏರಿಳಿತಗಳು ಏನೇ ಇರಲಿ ಮುಂದೆ ಓಡುತ್ತಲೇ ಇರಬೇಕು. ಯಾರೇ ಇದ್ದರೂ, ಇಲ್ಲದಿದ್ದರೂ ಸಾಗುತ್ತಲೇ ಹೋಗಬೇಕು. ಕಾಡುಮೇಡೋ, ಗಿಡಗಂಟೆಗಳೋ, ಕಲ್ಲು ಬಂಡೆಗಳೋ, ಗಿರಿಕಂದರಗಳೋ ನದಿ ತನ್ನ ಹಾದಿ ಹಿಡಿದು ಓಡುತ್ತಲೇ ಇರುವ ಹಾಗೆ, ಹೂತೋಟವೋ, ಮರಳುಗಾಡೋ, ಸುಡುಗಾಡೋ ಎಲ್ಲೆಡೆಯೂ ಗಾಳಿ ಬೀಸುವ ಹಾಗೆ, ಜೀವನ ನಡೆಯುತ್ತಿರಬೇಕು. ಗುರಿಯಿರಿಸಿಕೊಂಡು ನಡೆಯುವವರೋ, ನಡೆಯುವುದನ್ನೇ ಗುರಿಯಾಗಿಸಿಕೊಂಡವರೋ ಒಟ್ಟಿನಲ್ಲಿ ಎಲ್ಲರೂ ನಡೆಯುತ್ತಲೇ ಇರಬೇಕು. ಆದರೆ ದೇವನಾಡುವ ಆಟದ ಕೊನೆಯನ್ನು ಮಾತ್ರ ಯಾರೂ ಅರಿಯರು ಎಂಬುದು ಅಪ್ಪಟ ಸತ್ಯ.


ನಿಲ್ಲದ ಈ ಪಯಣದ ಗುರಿಯ
ಯಾರು ಇಂದು ಕಂಡವರು
ದೇವರ ಆಟ ಬಲ್ಲವರಾರು
ಆತನ ಎದಿರು‌ ನಿಲ್ಲುವರಾರು..

ದೂರ್ ಅಗ್ಯಾನ್ ಕೆ ಹೋ ಅಂಧೇರೆ
ತೂ ಹಮೆ ಗ್ಯಾನ್ ಕಿ ರೋಷನಿ ದೇ
ಹರ್ ಬುರಾಯಿ ಸೆ ಬಚ್ಕೆ ರಹೇ ನಾ ಹಮ್
ಜಿತನಿ ಭೀ ಯೇ ಭಲಿ ಜ಼ಿಂದಗಿ ದೆ..

ಅಜ್ಞಾನದ ಅಂಧಕಾರವನ್ನು ಓಡಿಸಿ, ವಿವೇಕದ ಬೆಳಕನ್ನು ನೀಡು ದೇವನೇ. ಕೆಡುಕುಗಳಿಂದ ಪಾರಾಗಿಸಿ, ಒಳಿತಾದೊಂದು ಬದುಕನ್ನು ದಯಪಾಲಿಸಿಬಿಡು.
ಅಂಧಕಾರವ ಓಡಿಸು
ಜ್ಞಾನ ಜ್ಯೋತಿಯ ಬೆಳಗಿಸು
ಒಳ್ಳೆ ದಾರಿಯಲೆಮ್ಮ ನಡೆಸು..


ಎಲ್ಲರ ಪ್ರಾರ್ಥನೆಯೂ ಇದೇ ಆಗಿದ್ದರೆ ಎಷ್ಟು ಚಂದ. ಓ ಶಕ್ತಿಯೇ, ನಮಗೊಂದು ಗುರಿಕೊಡು. ಕತ್ತಲೆಯಿಂದ ಬೆಳಕಿನೆಡೆಗೆ ನಡೆಯಲು ಜ್ಯೋತಿಯೊಂದನ್ನು ಕಾಣಿಸಿಬಿಡು..
ತಂದೆ ನೀ ನೀಡು ಬಾ
ಶಕ್ತಿ ಮನಸಿಗೆ..

ಭೇದ್ ಭಾವ್ ಅಪ್ನೆ ದಿಲ್ ಸೆ
ಸಾಫ್ ಕರ್ ಸಕೆ
ದೋಸ್ತೋಂಸೆ ಭೂಲ್ ಹೋ ತೋ
ಮಾಫ್ ಕರ್ ಸಕೆ..

ನಮ್ಮವರ ಎಲ್ಲಾ ತಪ್ಪುಗಳನ್ನೂ ಕ್ಷಮಿಸುವ ಗುಣವೊಂದನ್ನು ಕರುಣಿಸು ಪ್ರಭುವೇ. ಮೇಲುಕೀಳೆಂಬ ಭೇದಭಾವಗಳನ್ನು ಅಳಿಸಿ ಸಮಭಾವವುಳಿಸುವ ಸ್ವಚ್ಛ ಮನಸ್ಸನ್ನು ಕೊಟ್ಟು ಕಾಪಾಡು. ನಮ್ಮನ್ನು ನಾವು ಮೊದಲು ಗೆದ್ದು, ನಂತರ ಮತ್ಯಾರನ್ನೋ ಗೆಲ್ಲುವಂತಾಗಲಿ. ಇಷ್ಟು ಮಾತ್ರದ ಶಕ್ತಿಯನ್ನು ಮನಸ್ಸಿಗೆ ಕೊಡು.
ಹಮ್ ಕೋ ಮನ್ ಕಿ ಶಕ್ತಿ ದೇನಾ
ಮನ್ ವಿಜಯ್ ಕರೆ
ದೂಸರೋಂಕಿ ಜಯ್ ಸೆ ಪೆಹೆಲೆ
ಖುದ್ ಕೋ ಜಯ್ ಕರೆ..

ಎಂಥ ಬಿರುಗಾಳಿ ಎದುರಾದರೇನು
ನಿಂತು ತಡೆವಂಥ ಛಲ ನೀಡು ಎಂದು
ನಮ್ಮ ಸಂತೋಷ ಪರರಲ್ಲಿ ಹಂಚಿ
ನಾವು ನಲಿವಂಥ ಮನ ನೀಡು ಎಂದು
ದ್ರೋಹ ದೂರಾಗಲಿ ಸ್ನೇಹ ಹೊಳೆಯಾಗಲಿ
ಸ್ವಾರ್ಥ ಮನದಿಂದ ಎಂದೆಂದು ಕೊನೆಯಾಗಲಿ..

ದೇವನೇ, ಇಷ್ಟೇ ನಾವು ಬೇಡುವುದು. ಕಷ್ಟ ಸಾವಿರ ಬಂದರೂ ಎದೆಯೊಡ್ಡಿ ನಿಲ್ಲುವಂಥ ಧೈರ್ಯ ಕೊಡು. ನೋವನ್ನು ನುಂಗಿ, ನಲಿವನ್ನಷ್ಟೇ ಹಂಚಿ ಸಂತಸ ಪಡುವ ನಿಸ್ವಾರ್ಥ ಮನವನ್ನು ನಮಗೆ ಕೊಡು. ಕೆಡುಕನ್ನೆಂದೂ ಬಯಸದಿರುವ ಉದಾರತೆ ನೀಡು. ನಮ್ಮ ಧರ್ಮವನ್ನು ನಿಷ್ಠೆಯಿಂದ ನಿಭಾಯಿಸುವಂತೆ ಹರಸು ದೇವರೇ. ದುಷ್ಟಶಕ್ತಿಯೆದುರು ಭಯಪಡದಂತೆ, ನಮ್ಮಲ್ಲಿ ನಾವು ವಿಶ್ವಾಸ ಕಳೆದುಕೊಳ್ಳದಂತೆ ಸಲಹು.
ಮುಷ್ಕಿಲೆ ಪಡೆ ತೋ ಹಮ್ ಪೆ
ಇತನಾ ಕರಮ್ ಕರೆ
ಸಾಥ್ ದೆ ತೋ ಧರ್ಮ್ ಕಾ
ಚಲೆ ತೋ ಧರಮ್ ಕರೆ
ಖುದ್ ಪೆ ಹೌಸಲಾ ರಹೆ
ಬದೀ ಸೆ ನಾ ಡರೆ..

ಇತನಿ ಶಕ್ತಿ ಹಮೆ ದೇನಾ ದಾತಾ
ಮನ್ ಕಾ ವಿಶ್ವಾಸ್ ಕಮಝೋರ್ ಹೋನಾ
ಹಮ್ ಚಲೆ ನೇಕ್ ರಸ್ತೆ ಪೆ ಹಮ್ಕೋ
ಭೂಲ್ ಕರ್ ಭೀ ಕೋಯಿ ಭೂಲ್ ಹೋ ನಾ..

ಆತ್ಮವಿಶ್ವಾಸಕ್ಕೆಂದೂ ಕೊರತೆಯಾಗದಂತೆ ಕಾಪಾಡು ತಂದೆಯೇ. ಸರಿದಾರಿಯಲ್ಲಿ ನಡೆಯುವಂತೆ ದೀಪವಾಗಿರು. ಮರೆತೂ ಕೂಡಾ ಯಾವುದೇ ತಪ್ಪು ನಮ್ಮಿಂದಾಗದಂತೆ ತಡೆಯಾಗಿರು ಅಷ್ಟೇ. ನಮ್ಮ ಮನಸ್ಸಿನ ವಿಕಾರಗಳನ್ನು ತೊಡೆದು, ಸತ್ಯ, ನ್ಯಾಯ ಮಾರ್ಗಗಳಲ್ಲೇ ನಡೆಯುವಂತಾದರೆ ಅದಕ್ಕಿಂತ ಮತ್ಯಾವ ಭಾಗ್ಯವಿದೆ? ದ್ವೇಷವೆಂಬ ವಿಷವ ನೀಗಿಸಿ, ಸ್ನೇಹ, ಪ್ರೇಮದ ಅಮೃತವನುಣುವಂತಾದರೆ ಮತ್ತೇನು ಬೇಕಿದೆ?
ನಮ್ಮ ಮನದಿಂದ ದೌರ್ಬಲ್ಯ ದೂಡು
ಸತ್ಯಪಥದಲ್ಲಿ ನಡೆವಂತೆ ಮಾಡು
ಕಷ್ಟ ನೂರಾರು ನೀ ಪಾರು ಮಾಡು
ನಿತ್ಯ ಸಂತೋಷ ನಮಗೆಂದು ನೀಡು
ಪ್ರೇಮ ಹೂವಾಗಲಿ ದ್ವೇಷ ದೂರಾಗಲಿ..

ಮ್ ನ ಸೋಚೆ ಹಮೆ ಕ್ಯಾ ಮಿಲಾ ಹೆ
ಹಮ್ ಯೆ ಸೋಚೆ ಕಿಯಾ ಕ್ಯಾ ಹೆ ಅರ್ಪನ್
ಫೂಲ್ ಖುಷಿಯೋಂಕೆ ಬಾಟೆ ಸಭೀ ಕೋ
ಸಬ್ ಕಾ ಜೀವನ್ ಹಿ ಬನ್ಜಾಯೆ ಮಧುಬನ್..


ನನಗೇನು ಕೊಟ್ಟಿದೆ ಈ ಜೀವನ ಎಂದು ಯೋಚಿಸುವ ಬದಲು ನಾನೇನು ಕೊಟ್ಟಿದ್ದೇನೆ ಈ ಲೋಕಕ್ಕೆ, ಈ ಸಮಾಜಕ್ಕೆ ಎಂಬುದೇ ಮುಖ್ಯವಲ್ಲವೇ. ಸಂತೋಷದ ಹೂಗುಚ್ಛವನ್ನು ಕೊಟ್ಟು, ಅಭಿನಂದಿಸಿ ಎಲ್ಲರನ್ನೂ, ಅವರ ಬದುಕೇ ಸುಮಧುರ ಹೂದೋಟವಾಗುವಂತೆ ಮಾಡಬೇಕಲ್ಲವೇ!
ಉಪಕಾರಿ ನಾನು ಎನ್ನುಪಕೃತಿಯು
ಜಗಕೆಂಬ ವಿಪರೀತಮತಿಯನುಳಿದು..
ವನಸುಮದೊಳೆನ್ನ ಜೀವನವು ವಿಕಸಿಸುವಂತೆ
ಮನವನನುಗೊಳಿಸು ಗುರುವೇ ಹೇ ದೇವಾ..


ಅಮೃತಾ ಮೆಹೆಂದಳೆ

2003 ರಲ್ಲಿ ” ಮೌನದ ಮಾತುಗಳು” ಕವನ ಸ0ಕಲನ ಪ್ರಕಟವಾಗಿದೆ. 2017 ರಲ್ಲಿ ” ಹನಿಯೆಂಬ ಹೊಸ ಭಾಷ್ಯ ” ಹನಿಗವನ ಸಂಕಲನ ಪ್ರಕಟವಾಗಿದ್ದು, ” ಚೇತನಾ” ಸಾಹಿತ್ಯ ಪ್ರಶಸ್ತಿ, ” ಅಡ್ವೈಸರ್” ಸಾಹಿತ್ಯ ಪ್ರಶಸ್ತಿಗಳಿಗೆ ಭಾಜನವಾಗಿದೆ. ವಿದ್ಯಾರ್ಥಿ ಜೀವನದಲ್ಲಿ ಸಹಪಾಠಿಗಳೊಂದಿಗೆ ಸೇರಿ ಬರೆದ ” ಪರೀಕ್ಷಾ ಪದ್ಧತಿ” ಎಂಬ ಪುಸ್ತಕ ಪ್ರಕಟವಾಗಿದೆ. ಸಾಹಿತ್ಯ ಅಕಾಡೆಮಿಗಾಗಿ “ಕವಿತೆ ೨೦೧೯” ಸಂಪಾದಿತ ಕೃತಿ ೨೦೨೧ ರಲ್ಲಿ ಬಿಡುಗಡೆಯಾಗಿದೆ. ೨೦೨೨ ರಲ್ಲಿ ” ಒಂದು ಹನಿ ಮೌನ” ಹನಿಗವನ ಸಂಕಲನ ಹೊರಬಂದಿದೆ.ಅಮೃತಾ ಅವರಿಗೆ ಕನ್ನಡ ಭಾಷೆ-ಸಾಹಿತ್ಯ, ಭಾಷಾಂತರ, ಪ್ರವಾಸದಲ್ಲಿ

Leave a Reply

Back To Top