ಕಾವ್ಯ ಸಂಗಾತಿ
ಲಲಿತಾ ಪ್ರಭು ಅಂಗಡಿ
ಬುದ್ಧ ಅಂದು,ಇಂದು,
ಸತಿ ಸುತರ ಬಳ್ಳಿಯ ಕಳಚಿ
ಸಿರಿ ಸುಪ್ಪತ್ತಿಗೆ ದೂರ ಸರಿಸಿ
ಸುಖ ಭೋಗವ ದಿಕ್ಕರಿಸಿ
ಅಹಿಂಸಾ ಮಾರ್ಗ ಅನುಸರಿಸಿ
ಭೋದಿ ವ್ರೃಕ್ಷದಡಿ ಧ್ಯಾನಿಸಿ
ಶಾಂತಿ ಮಂತ್ರ ಬೋಧಿಸಿ
ಪೂರ್ಣತೆಯ ಪುಣ್ಯ ಬೆಳಕನು ಬೆಳಗಿಸಿ
ವಿಶ್ವಕೆ ಶಾಂತಿ ಸಮತೆಯ ತತ್ವ ಪಸರಿಸಿ
ಸಹಾನುಭೂತಿಯ ಸಲಹೆ ಸೂಚಿಸಿದೆ ಬುದ್ಧ ನೀ ಅಂದು
ಸತಿ ಸುತರ ವ್ಯಾಮೋಹಕೆ
ಭೋದಿ ವ್ರೃಕ್ಷದಡಿಯಲಿ ನಿನ್ನ ಪೂಜಿಸಿ
ಭೂಮಿಯಲಿರುವ ಎಲ್ಲವನು ಕಬಳಿಸುವ ಧ್ಯಾನ
ಹಿಂಸೆ ಆದರೂ ಪರವಾಗಿಲ್ಲ ವೈಭೋಗದ ಸಿರಿಯ ಮೆರೆವ ಕನಸು
ನಿನ್ನ ಚಿತ್ರಕೆ ನಮಿಸಿ
ಗುಂಗುರು ಕೂದಲಿನ ಉದ್ದ ಕಿವಿಯ ಕಲ್ಲು ಕಂಚು ದುಬಾರಿಯ ನಿನ್ನ ಮೂರ್ತಿ ಮಾಡಿ ಶೋಕೇಸಿನಲಿ ಬಂಧಿಯಾಗಿಟ್ಟಿರುವರು ಇಂದು ನಿನ್ನ ಬುದ್ಧ
ಅಷ್ಟೇ ಅಲ್ಲ ಉಡುವ ಬಟ್ಟೆಗಳಲ್ಲಿ ನಿನ್ನ ಅಚ್ಚು
ಬಳಸಿಕೊಳ್ಳಲಿಲ್ಲ ನಿನ್ನ ಶಾಂತಿ ಮಂತ್ರ
ಅಳವಡಿಸಿಕೊಳ್ಳಲಿಲ್ಲ ಅಹಿಂಸಾ ತತ್ವ
ದ್ವೇಷದಾ ಬೇಗುದಿ,ಸೇಡಿನ ಸುರಿಮಳೆ ಮುಯ್ಯಿಗೆ ಮುಯ್ಯಿ
ನಿನ್ನ ಹೆಸರಿನಲ್ಲಿ ಹುಣ್ಣಿಮೆ ಬೇರೆ ಬುದ್ಧ
ಬದ್ಧತೆ ಇಲ್ಲದ ಬುದ್ಧಿಗೇಡಿಗಳು ಸೋಗಿನಲಾಂಛನ ಹಾಕಿ
ನಿನ್ನ ಶಾಂತಿ ಮಂತ್ರವ ಬಾಯಲಿ ಜಪಿಸುವರು
ಒಳಗೊಳಗೆ ವೈರಿಯ ಕಸರತ್ತು
ಅನಿವಾರ್ಯ ಎಲ್ಲವನು ಕಣ್ಮುಚ್ಚಿ ನೋಡು ನೀ ಬುದ್ಧ
ಆದರೆ ಬುದ್ಧಾ ಬುದ್ಧಾ ನೀ
ಎಲ್ಲರೂ ಮಲಗಿರುವಾಗ ಸದ್ದಿಲ್ಲದೆ ಹೋದ ಹಾಗೆ
ಎಲ್ಲರೂ ಮಲಗಿರುವಾಗ ಬಂದೊಮ್ಮೆ ಕವಿಗಳ ಬರೆದ ಕವನಗಳನು ಓದು ನೀ ಬುದ್ಧ
ನಸುನಕ್ಕು ಮತ್ತೆ ತಪೋಸ್ಥಿಯಲಿ ಕಣ್ಮುಚ್ಚಿಕೋ ನೀ ಬುದ್ಧ
ಬುದ್ದಂ ಶರಣಂ ಗಚ್ಛಾಮಿ
ಸಂಗಮ್ ಶರಣಂ ಗಚ್ಛಾಮಿ.
ಲಲಿತಾ ಪ್ರಭು ಅಂಗಡಿ.