ಕಾವ್ಯ ಸಂಗಾತಿ
ಲಕ್ಷ್ಮೀದೇವಿ ಪತ್ತಾರ
ಬುದ್ದನ ಗುರು ಪೂರ್ಣಿಮೆ
ಗುರುಪೂರ್ಣಿಮೆಯಂದು ಪೂರ್ಣಚಂದ್ರನಂತೆ ಹುಟ್ಟಿಬಂದು
ಜಗದ ಕತ್ತಲೆ ಓಡಿಸಿದನು
ಬುದ್ಧನೆಂಬ ಬೆಳಕಿನ ಗುರು
ಅಂದು ಎಲ್ಲೆಡೆ ಕಾರ್ಗತ್ತಲು ತುಂಬಿರಲು ನಿದಿರೆಯಲಿ ಮೈಮರೆಯದೆ
ಎದ್ದುಹೋಗಿ ಬೆಳಕನೆತ್ತಿ ತಂದೆ
ಬುದ್ದನೆಂಬ ಬೆಳಕಿನ ಗುರು
ಶಾಂತಿ, ಪ್ರೀತಿಯ ಬೆಳಕು
ಯೋಗ ಧ್ಯಾನದ ಬೆಳಕು
ಜ್ಞಾನದ,ಕರ್ಮದ ಬೆಳಕು
ಸ್ವಚ್ಛ ಸುಂದರ ಬೆಳಕು
ಬುದ್ದನೆಂಬ ಜಗದ ನೇಸರ ,ಗುರುಪೂರ್ಣ ಬೆಳಕು
ಮತ್ತದೆ ಅಂಧಕಾರದ ಕಾರ್ಮುಗಿಲು
ದ್ವೇಷಾಸೂಯೆ, ಸ್ವಾರ್ಥಪನಂಬಿಕೆ ಅಮಲು
ಧರ್ಮಾಂಧತೆಯ ಹೊಗೆ ತುಂಬಿದೆ ಎಲ್ಲೆಲ್ಲೂ
ಸ್ನೇಹ ಸೌಹಾರ್ದದತೆ ಅಂತಃಕರಣದ
ಮಳೆ ಸುರಿಸಲು
ಹುಟ್ಟಿ ಬಾ ಬುದ್ದನೆಂಬ ಪ್ರೇಮ ಗುರು
ಮತ್ತೆ ಬಂದಿದೆ ಗುರುಪೂರ್ಣಿಮೆ
ಜಗವು ಕಾಯುತ್ತಿದೆ ನಿನ್ನನೇ
ದುರಾಸೆ ನಿರಾಸೆ ಓಡಿಸಿ
ಭರವಸೆ ಬೆಳಕು ಹರಿಸಲು
ತಿದ್ದಿ ಬುದ್ಧಿ ಹೇಳಲು
ಬೇಗ ಬಾ ಬುದ್ಧ ದೇವನೇ
ಜಗವ ಮತ್ತೆ ಬೆಳಗಲು
ಲಕ್ಷ್ಮೀದೇವಿ ಪತ್ತಾರ
ಕವನ ಅರ್ಥಪೂರ್ಣ
ಹೃತ್ಪೂರ್ವಕ ಧನ್ಯವಾದಗಳು ಸರ್
Super mam
Thanks sir