ಅಂಕಣ ಸಂಗಾತಿ
ಸಕಾಲ
ಶಿವಲೀಲಾ ಹುಣಸಗಿ
ಕಾರ್ಮಿಕ ಎಂದರೆ ಕರ್ಮಾಚಾರಿ
ಸೋತಿದ್ದೆಲ್ಲವೂ ಸೋತ ಹಾಗೆ
ಗೆದ್ದವರು ಮೇಲೆದ್ದ ಹಾಗೆ
ಪುಡಿಗಾಸಿಗೂ ಒದ್ದಾಡುವ ಹಾಗೆ
ಸೊರುವ ಸೂರಲ್ಲಿ ನೆಂದಹಾಗೆ
ತುತ್ತನ್ನಕ್ಕೂ ಪರದಾಡುವ ಹಾಗೆ
ದೇಶ ನಿಂತಿದ್ದು ಇವರಿಂದಾದರು
ರಕ್ತ ಹೀರಿವ ರಾಕ್ಷಸರ ನಡುವೆ
ದುಡಿದು ದುಡಿದು ಮಣ್ಣಾದವರು
ಹೇಳಹೆಸರಿಲ್ಲದೆ ಇತಿಹಾಸ ಸೇರಿದವರು
ಆದರೂ ಅವರಿಗೊಂದು ಸಲಾಂ
ಶಿವಲೀಲಾಮೃತ
ಕಾರ್ಮಿಕ ಪದದ ಅರ್ಥವು ಕರ್ಮ ಅಂದರೆ ಕೆಲಸ ಅದನ್ನು ನಂಬಿಕೆ ಇಟ್ಟು ಕೆಲಸವನ್ನಾಧರಿಸಿ ಬದುಕುವ ಜೀವಿ.ಎಂಥಹ ಅಧ್ಬುತ ಯೋಚನೆ
ಕಾರ್ಮಿಕ ಎಂದರೆ ಕರ್ಮಾಚಾರಿ ,ಅಂದ್ರೆ ಕೆಲಸಗಾರ ಎಂದು ಅರ್ಥ.
ಪ್ರತಿಯೊಂದು ದೇಶದ ಆರ್ಥಿಕ ಅಭಿವೃದ್ಧಿಯು ಆ ದೇಶದ ಕಾರ್ಮಿಕರ ಮೇಲೆ ಅವಲಂಬಿತವಾಗಿರುತ್ತದೆ. ದಕ್ಷತೆಯಿಂದ ಕೂಡಿದ ಕಾರ್ಮಿಕರ ವರ್ಗದಿಂದ ಮಾತ್ರ ಆ ದೇಶ ಆರ್ಥಿಕ ಪ್ರಗತಿಯನ್ನು ಸಾಧಿಸುತ್ತಿರುತ್ತದೆ. ಕಾರ್ಮಿಕ ಎಂದರೆ ಸಾಮಾನ್ಯ ಅರ್ಥದಲ್ಲಿ ದೈಹಿಕ ಇಲ್ಲವೇ ಬೌದ್ಧಿಕ ಶ್ರಮವನ್ನು ಮಾರಟ ಮಾಡಿ ಹಣ ಗಳಸುತ್ತಿರುವ ವ್ಯಕ್ತಿಗೆ ಕಾರ್ಮಿಕ ಎನ್ನುತ್ತೇವೆ.ಕಾರ್ಖಾನೆ,ಕೃಷಿ,ಕಾಮಗಾರಿ ಇದೇ ತರ ಎಲ್ಲಾ ವಿಧದ ಕೆಲಸದಲ್ಲಿ ದುಡಿಯುವ ಆಳುಗಳಿಗೆ ಕಾರ್ಮಿಕ ಎಂದು ಕರೆಯಬಹುದು, ಬಂಡವಾಳ ಶಾಹಿಗಳು ಅನಿರ್ದಿಷ್ಟ ಅವಧಿ ತನಕ ದುಡಿಸಿ ಕೊಳ್ಳುತ್ತಿದ್ದರು.ಇದನ್ನು ವಿರೋಧಿಸಿದ ಕಾರ್ಮಿಕರು ದಿನದ 8 ಗಂಟೆ ದುಡಿವ ಅವಧಿ ಎಂಬ ಬೇಡಿಕೆ ಮುಂದಿಟ್ಟರು. ದಿನದ 24 ಗಂಟೆಗಳಲ್ಲಿ 8 ಗಂಟೆ ದೈನಂದಿನ ಚಟುವಟಿಕೆಗಳನ್ನು ಪೂರೈಸುವ 8 ಗಂಟೆ ದುಡಿವ ಅವಧಿ ಹಾಗೂ ಇನ್ನುಳಿದ 8 ಗಂಟೆ ವಿಶ್ರಾಂತಿಗಾಗಿ ಮೀಸಲು ಎಂಬ ಲೆಕ್ಕಾಚಾರ ಮುಂದಿಡಲಾಯಿತು.8 ಗಂಟೆ ದುಡಿವ ಅವಧಿ ಎಂದು ಬೇಡಿಕೆಯನ್ನು ಮುಂದಿಟ್ಟುಕೊಂಡು ಕಾರ್ಮಿಕರು ಅಮೆರಿಕದ ಚಿಕಾಗೋ ನಗರದಲ್ಲಿ ಮೇ 1, 1886 ರಂದು ಸಹಸ್ರಾರು ಸಂಖ್ಯೆಯಲ್ಲಿ ಹೋರಾಟ ಮಾಡುತ್ತಿದ್ದರು. ಹೋರಾಟವು ತೀವ್ರ ಸ್ವರೂಪ ಪಡಿದಿದ್ದರಿಂದ ಇದನ್ನು ಹತ್ತಿಕ್ಕುವದಕ್ಕಾಗಿ ಮೇ 4ರಂದು ಪೋಲಿಸರು ಕಾರ್ಮಿಕರ ಮೇಲೆ ಗುಂಡಿನ ದಾಳಿ ನಡೆಸಿದರು.ಇದರಲ್ಲಿ ನೂರಾರು ಕಾರ್ಮಿಕರು ಸಾವನ್ನಪ್ಪಿದ್ದರು. ಇದನ್ನು ಲೆಕ್ಕಿಸದೇ ಕಾರ್ಮಿಕರು ಹೋರಾಟವನ್ನು ಮುಂದುವರಿಸಿದ್ದರಿಂದ ಕೊನೆಗೆ ನ್ಯಾಯಯುತವಾದ ದಿನದ 8 ಗಂಟೆ ಕಾರ್ಮಿಕರ ಕೆಲಸದ ಅವಧಿಯನ್ನು ಚಾಲನೆ ತಂದರು. ಇದರ ಸವಿ ನೆನಪಿಗೆ ಮೇ 1 ರಂದು ಕಾರ್ಮಿಕರ ದಿನಾಚರಣೆಯನ್ನು ಅಂತರರಾಷ್ಟೀಯ ಮಟ್ಟದಲ್ಲಿ ಆಚರಿಸುತ್ತಾ ಬರಲಾಗುತ್ತಿದೆ.
ಇದೊಂದು ಕಾರಣವು ಇದೆ. ಖ್ಯಾತ ಚಿಂತಕ ಕಾರ್ಲ್ ಮಾರ್ಕ್ಸ ಹಾಗೂ ಪ್ರೆಡ್ರಿಕ್ ಎಂಗಲ್ಸ್ ರ ‘ ದಿನಕ್ಕೆ ಎಂಟು ಗಂಟೆಗಳ ಕೆಲಸದ ಅವಧಿ’ ಬೇಡಿಕೆಯ ಹಿನ್ನೆಲೆಯಲ್ಲಿ 1 ಮೇ 1866 ರಲ್ಲಿ ಅಮೇರಿಕಾದಲ್ಲಿ ಸುಮಾರು 300000 ಕಾರ್ಮಿಕರು ಮುಷ್ಕರ ಹೂಡಿದ್ದರು
,ಚಿಕಾಗೊ ಒಂದರಲ್ಲೆೇ 40000 ಕ್ಕೂ ಅಧಿಕ ಜನ ಸೇರಿದ್ದರು,ಈ ಚಳುವಳಿಯ ವಿರುಧ್ದ ಅಲ್ಲಿಯ ಪ್ರಭಾವಿ ಕೈಗಳು ಗುಂಡಾಗಿರಿ,ಪೋಲಿಸ್ ಪವರ್ ಬಳಸಿ ಸುಮಾರು 30 ಜನ ಕಾರ್ಮಿಕರ ಸಾವಿಗೆ ಹಾಗೂ 12 ಜನರಿಗೆ ಗಲ್ಲು ಶಿಕ್ಷೆಗೆ ಗುರಿ ಮಾಡಿದ್ದರು,ಇದು ನಿಮಗೆ ತಿಳಿದಿರುವಂತೆ ಕೈಗಾರಿಕಾ ಕ್ರಾಂತಿಯು ಉನ್ನತ ಹಂತದಲ್ಲಿದ್ದ ದಿನಗಳಾದ್ದರಿಂದ ವಿಶ್ವವ್ಯಾಪಿ ಸುದ್ದಿಯಾಗಿತ್ತು.ಕಾರ್ಮಿಕರಿಗೆ ಅಲ್ಲಿಯವರೆಗೂ ಒಂದಿಷ್ಟೂ ‘ಸೆಕ್ಯೂರ್ಡ್’ ಅನ್ನೋ ಅವಕಾಶಗಳೇ ಇರಲಿಲ್ಲ…ಬೆಳಗೆ 6–7 ಕ್ಕೆ ಸೈರನ್ ಕೂಗಿದರೆ ಮತ್ತೆ ರಾತ್ರಿ 7–8 ಕ್ಕೆ ಕಡೆಯ ಸೈರನ್ ಕೂಗುತ್ತಿತ್ತು..ಇಂದಿನ ತರ ನೈಟ್ ಸಿಪ್ಟ್, ಮಾರ್ನಿಂಗ್ ಸಿಫ್ಟ್ ಗೆ ಇದ್ದಂತೆ ತಕ್ಕ ಕೂಲಿಯೂ ಇರಲಿಲ್ಲ…ಹಾಗಾಗಿ ಈ ಹೋರಾಟ ಅನಿವಾರ್ಯವಾಗಿತ್ತು..ಅಂದಿನಿಂದ ಈ ‘ಮೇ ಡೆ’ ಅಥವಾ ಕಾರ್ಮಿಕರ ದಿನ ಆರಂಭವಾಗಿದ್ದು ….
ಭಾರತದಲ್ಲಿ ಕಾರ್ಮಿಕರನ್ನು ಸಂಘಟಿತ ಕಾರ್ಮಿಕರು ಹಾಗೂ ಅಸಂಘಟಿತ ಕಾರ್ಮಿಕರೆಂದು ವಿಭಾಗಿಸಲಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸ್ವಾಮ್ಯದ ಅಡಿ ದುಡಿಯುವ ಕಾರ್ಮಿಕರು ಬಹುತೇಕ ಸಂಘಟಿತ ಕಾರ್ಮಿಕರಾಗಿದ್ದು, ದೇಶದಲ್ಲಿ ಕೇವಲ ಪ್ರತಿಶತ 12 ರಿಂದ 15 ರವರೆಗೆ ಮಾತ್ರ ಕಂಡು ಬಂದಿದ್ದು ತಮ್ಮ ಸಂಘಟಿತ ಹೋರಾಟದ ಮೂಲಕ ಬೇಡಿಕೆಗಳನ್ನು ತಕ್ಕ ಮಟ್ಟಿಗೆ ಈಡೇರಿಸಿಕೊಳ್ಳುತ್ತಿದ್ದರೆ.
ಇನ್ನೂಳಿದ ಶೇ 85 ರಷ್ಟು ಕಾರ್ಮಿಕರು, ಗ್ರಾಮೀಣ ಪ್ರದೇಶದಲ್ಲಿ ದುಡಿಯುವ ಭೂ ರಹಿತ ಮಹಿಳೆ ಹಾಗೂ ಪುರುಷ ಕಾರ್ಮಿಕರು ನಗರಗಳಲ್ಲಿ ಹೋಟೆಲ್‌ಗಳಲ್ಲಿ ದುಡಿಯುವ ಕಾರ್ಮಿಕರು, ಸಣ್ಣ ಉದ್ದಿಮೆಗಳಲ್ಲಿ ದುಡಿಯುವವರು, ಈ ಮುಂತಾದ ಕ್ಷೇತ್ರಗಳಲ್ಲಿ ದುಡಿವ ಕೆಲಸಗಾರರು ಅಸಂಘಟಿತ ಕಾರ್ಮಿಕರು. ಇವರಿಗೆ ಮೂಲತಃ ನಿರ್ದಿಷ್ಟ ಕೂಲಿ ಎಂಬದೇ ಗಗನ ಕುಸುಮವಾಗಿದ್ದು ತೀವ್ರತರ ಶೋಷಣೆಗೆ ಒಳಪಟ್ಟಿದ್ದಾರೆ.
ಒಟ್ಟಾರೆ ಭಾರತದಲ್ಲಿ ಕಾರ್ಮಿಕರು ಶೋಷಣೆಯಲ್ಲೇ ಬದುಕು ಸಾಗಿಸುತ್ತಿದ್ದು.ಶ್ರಿಮಂತರು ಶ್ರೀಮಂತರಾಗಿಯೇ ಮಂದುವರೆದರೆ ಬಡವರು ಬಡವರಾಗಿಯೇ ಸಾಗುತ್ತಿದ್ದಾರೆ. ಇಂತಹ ಶೋಷಣೆಯ ವಿರುದ್ದ ಕಾರ್ಮಿಕ ಒಕ್ಕೂಟಗಳಲ್ಲಿ ಐಕ್ಯೆತೆಯನ್ನು ಕಾಪಾಡಿಕೊಂಡು ಹೋರಾಟ ಮಾಡಲು ಸದಕಾಲ ಶ್ರಮಿಸುತ್ತಿರಬೇಕು. ಆಗ ಶೋಷಣೆ ನಿಲ್ಲುತ್ತದೆ. ಇದು ಕೇವಲ ಕಾರ್ಮಿಕರ ಐಕ್ಯೆತೆಯಿಂದ ಮಾತ್ರ ಸಾಧ್ಯ.
ಸಂಘಟಿತರೊಂದಿಗೆ ಅಸಂಘಟಿತ ಕಾರ್ಮಿಕರು ಸೇರಿ ಐಕ್ಯೆತೆಯಿಂದ ಒಕ್ಕೂಟ ರಚಿಸಿ ಆ ಮೂಲಕ ತಮ್ಮ ಬದುಕನ್ನು ಹಸನಾಗಿ ಮಾಡಿಕೊಳ್ಳಲಿ ಎಂದು ಹಾರೈ
ಶಿವಲೀಲಾ ಹುಣಸಗಿ
ಊರು- ಯಲ್ಲಾಪುರ ತಾಲೂಕು,ಉತ್ತರ ಕನ್ನಡ ಜಿಲ್ಲೆ ಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅರಬೈಲ್ ದಲ್ಲಿ ಕಳೆದ ೨೪ ವರ್ಷಗಳಿಂದ ಶಿಕ್ಷಕಿಯಾಗಿ ಕಾರ್ಯ ನಿರ್ವಹಣೆ *ಪ್ರಕಟಿತ ಕೃತಿಗಳು- ಬಿಚ್ಚಿಟ್ಟಮನ,ಬದುಕಂದ್ರೆ ಹೀಗೇನಾ? ಅವಳಿ ಕವನಸಂಕಲನಗಳು. ಜಿಲ್ಲಾ ಕ.ಸಾ.ಪ ದ ಸಹ ಕಾರ್ಯದರ್ಶಿಯಾಗಿ ಕೆಲಸ ಮಾಡಿರುವೆ.ಜಿಲ್ಲಾ ಸಮ್ಮೆಳನದ ನಿರೂಪಕಿಯಾಗಿ ಕಾರ್ಯ ನಿರ್ವಹಿಸಿರುವೆ. ಸಂದ ಪ್ರಶಸ್ತಿಗಳು- ಅನುಪಮಾ ಸೇವಾ ಪುರಸ್ಕಾರ, ಹೆಮ್ಮೆಯ ಕನ್ನಡಿ,ನಾಡೋಜ ದೇ ಜ ಗೌಡ ಪ್ರಶಸ್ತಿ, ಬೇಂದ್ರೆ ಕಾವ್ಯ ,ಆದರ್ಶ ಶಿಕ್ಷಕಿ,ಕನ್ನಡ ರತ್ನ,ಸಾಹಿತ್ಯ ರತ್ನ ಯುಗದರ್ಶಿನಿ ರಾಜ್ಯ ಪ್ರಶಸ್ತಿ. ಇತ್ಯಾದಿ
Nice article madam
ಕಾರ್ಮಿಕರ ಜೀವನದ ಬವಣೆಗಳನ್ನು ಹೊತ್ತು ಅತ್ಯುತ್ತಮ ಲೇಖನ .
Wow supper medam very mining full wordes. congratulations medam
MAHANTESH kadpatti
ಕಾರ್ಮಿಕರ ಕುರಿತಾಗಿ ಬರೆದ ಅಧ್ಯಯನದಿಂದೊಳಗೊಂಡ ಲೇಖನ. ಕಾರ್ಮಿಕರ ಶ್ರಮದ ಅಂತಃಕರಣ ಚಿತ್ರಣ ಪುಟ್ಟ ಬರಹದಲ್ಲಿ ಚೊಕ್ಕವಾಗಿ ವ್ಯಕ್ತ ಪಡಿಸಿದ್ದಾರೆ. ಶೈಲಿ ಸರಳ ಸುಂದರ!
D.s.NAIK sirsi
ಕಾರ್ಮಿಕರ ಕುರಿತು ಬರೆದ ಲೇಖನ ಓದಿದಾಗ ಅವರ ಬದುಕಿನ ಚಿತ್ರಣ ಮನಮುಟ್ಟುವಂತಿದೆ
ಓದುಗನಿಗೆ ಅರಿವು ಮೂಡುವಂತಿದೆ ಅಭಿನಂದನೆಗಳು ಮೆಡಮ್