ಕಾವ್ಯ ಸಂಗಾತಿ
ಗುಣಾಜೆ ರಾಮಚಂದ್ರ ಭಟ್
ನೋವಿಗೆ ಮದ್ದು : ಬುದ್ಧ
ಅರಳಿಯ ಬಿತ್ತರ ಮರದಡಿ ಧ್ಯಾನವ
ಮರಳಿಯೆ ಮಾಡಿ ಬೆಳಗಿದನು.
ಲೋಕದಿ ಹಿಂಸೆಯು ಶೋಕವ ಹೆಚ್ಚಿಸಿ
ನಾಕವ ದೂರ ಸರಿಸಿಹುದು..
ಬುದ್ಧನು ಜನಿಸಿದ ,ಸಿದ್ಧಿಯ ಸಾಧಿಸಿ
ಸಿದ್ಧನು ಮೋಕ್ಷ ಪಡೆದದಿನ..
ಭೋಗವ ತ್ಯಜಿಸುತ ಲೋಗರ ನೋವನು
ನೀಗಲು ನೀನು ಧ್ಯಾನಿಸಿದೆ..
ಹುಣ್ಣಿಮೆ ದಿವಸವೆ ಕಣ್ಣನು ತೆರೆಸಲು
ತಣ್ಣನೆ ಶಾಂತಿ ಪಸರಿಸಿದೆ..
ಮನಸಿನ ವೇಗವ ಮನನದಿ ಗೆಲ್ಲುತ
ಜನಮನವನ್ನು ಬೆಳಗಿಸಿದೆ..
ಸಾವಿರ ಬುದ್ಧರು ನಾವಿಹ ಲೋಕದ
ನೋವಿಗೆ ಮದ್ದು ಗುಣಪಡಿಸೆ ..
ಲೋಗರ =ಜನರ .
ಗುಣಾಜೆ ರಾಮಚಂದ್ರ ಭಟ್
ಸಕಾಲಿಕ ಕವನವನ್ನು ಪ್ಪಕಟಿಸಿ ಪ್ರೋತ್ಸಾಹಿಸಿದ್ದಕ್ಕಾಗಿ ತುಂಬಾ ಧನ್ಯವಾದಗಳು. ನಮಸ್ತೆ .