ಡಾ. ಮಮತ (ಕಾವ್ಯ ಬುದ್ಧ)-

ಕಾವ್ಯ ಸಂಗಾತಿ

ನಿಜವಾಯ್ತು ಬುದ್ಧವಾಣಿ

Golden Buddha Statue

ನಿಜವಾಯ್ತು ಬುದ್ಧವಾಣಿ
ಬಡವ ಬಲ್ಲಿದರ ಸೇವೆ ಮಾಡುತ್ತಾ ದುರ್ಬಲರಿಗೆ ಬಲ ನೀಡುತ್ತಾ
ತತ್ವ ಬೋಧನೆ ಮಾಡುತ್ತ
ಜನರ ಕಲ್ಯಾಣಕ್ಕೆಂದೆ ಶ್ರಮಿಸಿದವರು ನೀವು, ನಿಜವಾಯ್ತು ಈ ಬುದ್ಧವಾಣಿ

ಐಷಾರಾಮಿ ಜೀವನ ಬಿಟ್ಟು ಸರ್ವಸ್ವವನ್ನು ತ್ಯಾಗ ಮಾಡಿ ಯಾವುದು ಶಾಶ್ವತ ಇಲ್ಲವೆಂದು
ಇಡೀ ಜೀವನವನ್ನು ಸಂಕಷ್ಟದಲ್ಲಿ ಕಳೆದು ವಿಮೋಚನೆಗಾಗಿ ಕೆಲಸ ಮಾಡಲು ತಿಳಿಸಿದವರು ನೀವು
ನಿಜವಾಯ್ತು ಈ ಬುದ್ಧವಾಣಿ

ನೀತಿ ಬೋಧನೆ ಮಾಡುತ್ತ
ಅಷ್ಟಾಂಗ ಮಾರ್ಗವನ್ನು ಕಂಡು ಹಿಡಿದು ಬೌದ್ಧ ಧರ್ಮದ ಸ್ಥಾಪಕನಾಗಿ ಜಗತ್ತಿನ ಜ್ಞಾನದ ಹಿರಿಮೆಯನ್ನು ತುಂಬಿದ‌ ಅಜಾರಮರರು ಆಧ್ಯಾತ್ಮ ತತ್ವದ ಸಾಕ್ಷಾತ್ಕಾರ ಪಡೆದವರು ನಿಜವಾಯಿತು ಈ ಬುದ್ಧವಾಣಿ


ಡಾ. ಮಮತ (ಕಾವ್ಯ ಬುದ್ಧ)

Leave a Reply

Back To Top